ಬೆಳಗಾವಿ- ಬೆಳಗಾವಿ ಜಿಲ್ಲೆಯ ಪ್ರತಿಷ್ಠಿತ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಇಂದು ನಡೆಯಲಿದೆ. ಸಹಕಾರಿ ರಂಗದ ಬೆಳಗಾವಿಯ ಹಿರಿಯರು ಇಂದು ಬೆಳಗ್ಗೆ 10 ಗಂಟೆಗೆ ನೂತನವಾಗಿ ಆಯ್ಕೆಯಾಗಲಿರುವ ಅಧ್ಯಕ್ಷ ಉಪಾಧ್ಯಕ್ಷರ ಹೆಸರುಗಳನ್ನು ಬಹಿರಂಗ ಮಾಡ್ತಾರೆ. ಹಿರಿಯರು ಸೂಚಿಸಿದ ಇಬ್ಬರು ಹನ್ನೊಂದು ಗಂಟೆಗೆ ನಾಮಿನೇಶನ್ ಮಾಡ್ತಾರೆ ಅವಿರೋಧ ಆಯ್ಕೆ ಪ್ರಕ್ರಿಯೆ ನಡೆತುತ್ತದೆ.
ಮಾಜಿ ಸಂಸದ ರಮೇಶ್ ಕತ್ತಿ ಅವರ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎರಡೂ ಸ್ಥಾನಗಳ ಆಯ್ಕೆ ಪ್ರಕ್ರಿಯೆ ಇಂದು ನಡೆಯಲಿದೆ. ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ, ಪ್ರಭಾಕರ ಕೋರೆ, ರಮೇಶ್ ಜಾರಕಿಹೊಳಿ ಸೇರಿದಂತೆ ಬೆಳಗಾವಿ ಜಿಲ್ಲೆಯ ಸಹಕಾರಿ ರಂಗದ ನಾಯಕರು ಚರ್ಚಿಸಿ ಒಮ್ಮತದ ನಿರ್ಣಯ ಕೈಗೊಳ್ಳುತ್ತಾರೆ ಅವರ ನಿರ್ಣಯದಂತೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆಯುತ್ತದೆ ಎಂದು ಹೇಳಲಾಗಿದೆ.
ಬೆಳಗಾವಿ ಡಿಸಿಸಿ ಬ್ಯಾಂಕಿಗೆ ನೂತನ ಅಧ್ಯಕ್ಷರು ಯಾರಾಗ್ತಾರೆ ಎನ್ನುವ ಕುತೂಹಲ ಎಕ್ಲರಿಗೂ ಇದೆ. ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಅಧ್ಯಕ್ಷರಾಗ್ತಾರೆ. ಮಾಜಿ ಶಾಸಕ ಅರವಿಂದ್ ಪಾಟೀಲ ಉಪಾಧ್ಯಕ್ಷರಾಗ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇನ್ನೊಂದು ಮೂಲಗಳ ಪ್ರಕಾರ ಜೊಲ್ಲೆ ಅಧ್ಯಕ್ಷರಾಗದಿದ್ದರೆ ಈ ಸ್ಥಾನಕ್ಕೆ ಯಾರಾದ್ರೂ ಜಾಕ್ ಪಾಟ್ ಹೊಡೆಯಬಹುದು, ಮಹಾಂತೇಶ್ ದೊಡ್ಡಗೌಡ್ರ,ಢವಳೇಶ್ವರ,ರಾಜು ಅಂಕಲಗಿ ಹೀಗೆ ಹಲವಾರು ನಿರ್ದೇಶಕರ ಹೆಸರುಗಳು ಚಾಲ್ತಿಯಲ್ಲಿವೆ.
ಚಿಕ್ಕೋಡಿ ಭಾಗಕ್ಕೆ ಅಧ್ಯಕ್ಷ ಸ್ಥಾನ ಸಿಕ್ಕರೆ ಉಪಾಧ್ಯಕ್ಷ ಸ್ಥಾನ ಬೆಳಗಾವಿ ಭಾಗಕ್ಕೆ ಸಿಗುತ್ತದೆ ಎನ್ನುವದು ಸಾಮಾನ್ಯ ಲೆಕ್ಕಾಚಾರ ಆದ್ರೆ ನಾಯಕರ ಲೆಕ್ಕಾಚಾರ ಏನಿದೆ ಎನ್ನುವದನ್ನು ಇನ್ನೆರಡು ಗಂಟೆ ಕಾಯಬೇಕಾಗಿದೆ.