ಬೆಳಗಾವಿ- ಸೋಮವಾರ ಫೆಬ್ರುವರಿ 6 ರಂದು ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರ ಉಪಮಹಾಪೌರ ಚುನಾವಣೆ ನಡೆಯಲಿದ್ದು,ಪಾಲಿಕೆಯಲ್ಲಿ ಸ್ಪಷ್ಟ ಬಹುಮತ ಹೊಂದಿರುವ ಬಿಜೆಪಿ, ಮೇಯರ್ ಮತ್ತು ಉಪ ಮೇಯರ್ ಹೆಸರುಗಳನ್ನು ಅಂತಿಮಗೊಳಿಸಲು ನಾಳೆ ಭಾನುವಾರ ಸಂಜೆ ಸಭೆ ನಡೆಯಲಿದೆ.
ಬೆಳಗಾವಿ ಮೇಯರ್ ಉಪ ಮೇಯರ್ ಯಾರಾಗ್ತಾರೆ ಅನ್ನೋದು ನಾಳೆ ಭಾನುವಾರ ಬೆಳಗಾವಿಯಲ್ಲಿ ನಡೆಯಲಿರುವ ಸಭೆಯಲ್ಲಿ ತೀರ್ಮಾಣವಾಗುವ ಸಾಧ್ಯತೆ ಇದೆ. ಬೆಳಗಾವಿ ಜಿಲ್ಲಾ ಬಿಜೆಪಿ ಉಸ್ತುವಾರಿ ನಿರ್ಮಲ್ ಕುಮಾರ್ ಸುರಾನಾ,ಶಾಸಕರಾದ ಅಭಯ ಪಾಟೀಲ,ಅನೀಲ ಬೆನಕೆ,ಹಾಗೂ ಬಿಜೆಪಿಯ ಎಲ್ಲ ನಗರಸೇವಕರು ಈ ಸಭೆಯಲ್ಲಿ ಭಾಗವಹಿಸಲಿದ್ದು, ನಿರ್ಮಲ್ ಕುಮಾರ್ ಸುರಾನಾ ಇವರು ಎಲ್ಲರ ಅಭಿಪ್ರಾಯಗಳನ್ನು ಆಲಿಸಿದ ಬಳಿಕ ತೀರ್ಮಾಣ ಕೈಗೊಳ್ಳುತ್ತಾರೆ ಎಂದು ತಿಳಿದು ಬಂದಿದೆ.
ಮೇಯರ್ ಸ್ಥಾನ ಸಾಮಾನ್ಯ ಮಹಿಳೆ,ಉಪ ಮೇಯರ್ ಸ್ಥಾನ ಹಿಂದುಳಿದ ಬ ವರ್ಗ ಮಹಿಳೆಗೆ ಮೀಸಲಿದ್ದು,ಮೇಯರ್ ಸ್ಥಾನಕ್ಕೆ ನಗರಸೇವಕಿ,ಬಿಜೆಪಿಯ ಸಕ್ರಿಯ ಕ್ರಿಯಾಶೀಲ ಕಾರ್ಯಕರ್ತೆ ಸಾರೀಕಾ ಪಾಟೀಲ,ವಾಣಿ ವಿಲಾಸ ಜೋಶಿ, ಶೋಭಾ ಸೋಮನಾಚೆ,ದೀಪಾಲಿ ಟೋಪಗಿ, ಅವರ ಹೆಸರುಗಳು ಕೇಳಿ ಬರುತ್ತಿವೆ.ಉಪ ಮೇಯರ್ ಸ್ಥಾನಕ್ಕೆ ವೈಶಾಲಿ ಭಾತಖಾಂಡೆ,ರೇಶ್ಮಾ ಪಾಟೀಲ ಇವರ ಹೆಸರುಗಳು ಚರ್ಚೆಯಲ್ಲಿವೆ.ನಾಳೆ ಬೆಳಗಾವಿಯಲ್ಲಿ ನಡೆಯಲಿರುವ ಬಿಜೆಪಿಯ ಹೈ-ಪವರ್ ಸಭೆಯಲ್ಲಿ ಹೆಸರು ಅಂತಿಮವಾಗಲಿದ್ದು,ಸೋಮವಾರ ಮೇಯರ್ ಉಪ ಮೇಯರ್ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.