ಬೆಳಗಾವಿ- ಉಡುಪಿಯಲ್ಲಿ ತಾಯಿ ಮತ್ತು ಮೂವರು ಮಕ್ಕಳನ್ನು ಬರ್ಬರವಾಗಿ ಕೊಲೆ ಮಾಡಿ ಪರಾಯಾಗಿ,ಬೆಳಗಾವಿಯಲ್ಲಿ ಅಡಗಿದ್ದ ಆರೋಪಿಯನ್ನು ಉಡುಪಿ ಪೋಲೀಸರು ಬಂಧಿಸಿದ್ದಾರೆ.
ಆರೋಪಿ ಪ್ರವೀಣ್ ಅರುಣ ಚೌಗಲೆ ಎಂಬಾತ ನವ್ಹೆಂಬರ್ 12 ರಂದು ಉಡುಪಿಯಲ್ಲಿ ತಾಯಿ ಮತ್ತು ಮೂವರು ಮಕ್ಕಳನ್ನು ಚೂರಿಯಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ,ಬೆಳಗಾವಿಯ ಬಸವನ ಕುಡಚಿಯಲ್ಲಿ ಆತನ ಮಾವನ ಮನೆಯಲ್ಲಿ ಅಡಗಿದ್ದ ಮೋಬೈಲ್ ನೆಟವರ್ಕ್ ಆಧರಿಸಿ ಉಡುಪಿ ಪೋಲೀಸರು ಬೆಳಗಾವಿಗೆ ಧಾವಿಸಿ ನಾಲ್ಕು ಜನರ ಕೊಲೆ ಮಾಡಿದ ಆರೋಪಿ ಪ್ರವೀಣ್ ಅರುಣ ಚೌಗಲೇ ಎಂಬಾತನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿ ಪ್ರವೀಣ್ ಅರುಣ ಚೌಗಲೇ ಮಂಗಳೂರು ಏರ್ ಪೋರ್ಟಿನ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಈತ ಮೂಲತಹ ಮಹಾರಾಷ್ಟ್ರದ ಸಾಂಗ್ಲಿ ಪಟ್ಟಣದವನು ಉಡುಪಿಯಲ್ಲಿ ಹಸೀನಾ, ಅಪ್ನಾನ್,ಅಯ್ನಾಝ್,ಹಾಸೀಂ ಎಂಬುವವರ ಕೊಲೆ ಮಾಡಿದ ಈತ ಬೆಳಗಾವಿಯ ಬಸವನಕುಡಚಿಯಲ್ಲಿ ಇರುವ ಮಾವನ ಮನೆಯಲ್ಲಿ ಅಡಗಿದ್ದ.
ಇಂದು ಉಡುಪಿಯಿಂದ ಬೆಳಗಾವಿಗೆ ಆಗಮಿಸಿದ ಪೋಲೀಸರ ತಂಡ,ನಾಲ್ಕು ಮರ್ಡರ್ ಮಾಡಿರುವ ಆರೋಪಿ ಪ್ರವೀಣ ಅರುಣ್ ಚೌಗಲೇ ಯನ್ನು ಬಂಧಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ