ಬೆಳಗಾವಿ- ಬೆಳಗಾವಿ ಮಹಾನಗರದ ಚನ್ನಮ್ಮ ವೃತ್ತದ ಚನ್ನಮ್ಮಾಜಿಯ ಅಶ್ವಾರೂಢ ಮೂರ್ತಿಯ ಕಟ್ಟಿಗೆ ಕ್ಯಾಂಟರ್ ವಾಹನವೊಂದು ಡಿಕ್ಕಿ ಹೊಡೆದ ಘಟನೆ ಈಗ ರಾತ್ರಿ 11-00 ರ ಸುಮಾರಿಗೆ ನಡೆದಿದೆ.
ಡಾ.ಬಾಬಾಸಾಹೇಬ್ ಅಂಬೇಡ್ಕರ್ ಉದ್ಯಾನವನದ ಕಡೆಯಿಂದ ವೇಗವಾಗಿ ಬಂದ ಕ್ಯಾಂಟರ್ ವಾಹನ ನಿಯಂತ್ರಣ ತಪ್ಪಿ ಚನ್ನಮ್ಮ ಮೂರ್ತಿಯ ಕಟ್ಟೆಗೆ ಡಿಕ್ಕಿ ಹೊಡೆದಿದ್ದು ಮೂರ್ತಿಗೆ ಯಾವುದೇ ರೀತಿಯ ಧಕ್ಕೆ ಆಗಿಲ್ಲ.
ಮೂರ್ತಿ ಪ್ರತಿಷ್ಠಾಪಿತ ಕಟ್ಟೆ ಸುತ್ತಲು ಅಳವಡಿಸಿರುವ ಕಬ್ಬಿಣದ ರಾಡ್ ನುಜ್ಜಾಗಿದ್ದು ಸ್ಥಳಕ್ಕೆ ಪೋಲೀಸರು ದೌಡಾಯಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ