Breaking News
Home / Breaking News / ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ , ಮನೆ ಮಾಡಿದ ಚಿರತೆ..ಟೆಂಟ್ ಹಾಕಿದ ಅರಣ್ಯ ಇಲಾಖೆ

ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ , ಮನೆ ಮಾಡಿದ ಚಿರತೆ..ಟೆಂಟ್ ಹಾಕಿದ ಅರಣ್ಯ ಇಲಾಖೆ

ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ , ಮನೆ ಮಾಡಿದ ಚಿರತೆ…!!

ಬೆಳಗಾವಿ-ಕಳೆದ 11 ದಿನಗಳ ಹಿಂದೆ ಇಲ್ಲಿನ ಜಾಧವ ನಗರದಲ್ಲಿ ಕಟ್ಟಡ ಕಾರ್ಮಿಕನ ಮೇಲೆ ದಾಳಿ ನಡೆಸಿ ಗಾಲ್ಫ್ ಮೈದಾನದ‌ಲ್ಲಿ ಅರಣ್ಯ ಇಲಾಖೆ ಅಳವಡಿಸಿದ್ದ ಟ್ರ್ಯಾಪ್ ಕ್ಯಾಮರಾದಲ್ಲಿ ಪತ್ತೆಯಾಗಿದ್ದ ಚಿರತೆ ಮತ್ತೇ ಇಂದು ಕಾಣಿಸಿಕೊಂಡಿದೆ.ಅದಕ್ಕಾಗಿಯೇ ಗಾಲ್ಫ್ ಮೈದಾನದ ಸುತ್ತ ಪೋಲೀಸ್ ಬಂದೋಬಸ್ತಿ ಹೆಚ್ವಿಸಲಾಗಿದೆ.

ನಗರಕ್ಕೆ ಬಂದ ಚಿರತೆಯನ್ನು‌ಹಿಡಿಯಲು ಅರಣ್ಯ ಇಲಾಖೆ ಹರಸಾಹಸ ಪಡುತ್ತಿದೆ. ಬೆಳಗಾವಿ ನಗರದ ಜಾಧವ ನಗರದಲ್ಲಿ ಆ.5 ರಂದು ಕಟ್ಟಡ ಕಾರ್ಮಿಕನ ಮೇಲೆ ದಾಳಿ ಬಳಿಕ ಗಾಲ್ಫ್ ಕ್ಲಬ್ ನಲ್ಲಿ ಮರೆಯಾಗಿರುವ ಚಿರತೆಯನ್ನು ಸೆರೆ ಹಿಡಿಯಲು ನಿರಂತರವಾಗಿ ಅರಣ್ಯ ಇಲಾಖೆ ಶೋಧ ಕಾರ್ಯಾಚರಣೆ ನಡೆಸಿದೆ.
ಚಿರತೆ ಸೆರೆಗೆ ಗಾಲ್ಫ್ ಕ್ಲಬ್ ನ ಸುತ್ತಮುತ್ತಲಿನ ಮರಗಳ ಮೇಲೆ ಒಟ್ಟು 22 ಟ್ರ್ಯಾಪ್ ಕ್ಯಾಮರಾ ಅಳವಡಿಸಲಾಗಿದೆ. ಎಂಟು ಬೋನ್ ಹಾಕಲಾಗಿದೆ. ಡ್ರೋನ್ ಕ್ಯಾಮರಾ ಬಳಸಿದರೂ ಚಿರತೆ ಮಾತ್ರ ಕಂಡು ಬಂದಿರಲಿಲ್ಲ.
ಗಾಲ್ಫ್ ಕ್ಲಬ್ ನ ಸುಮಾರು 250 ಎಕರೆ ಪ್ರದೇಶದಲ್ಲಿ‌‌ ಚಿರತೆ ‌ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಅಲ್ಲದೆ, ಜಿಲ್ಲಾಡಳಿತ ಗಾಲ್ಫ್ ಮೈದಾನದ ಒಂದೂ ಕಿಲೋಮೀಟರ್ ಶಾಲೆಗಳಿಗೆ ರಜೆ‌ ಘೋಷಣೆ ಮಾಡಿತ್ತು. ಇದರಿಂದ ಇಲ್ಲಿನ ಶಾಲಾ ಮಕ್ಕಳು ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಆಚರಣೆಯಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ.
ಮಂಗಳವಾರದಿಂದ ಶಾಲೆಗಳು ಎಂದಿನಂತೆ ಪ್ರಾರಂಭವಾಗಿವೆ. ಮತ್ತೇ ಗಾಲ್ಫ್ ಮೈದಾನದಲ್ಲಿ ‌ಚಿರತೆ ಪ್ರತ್ಯೇಕ್ಷವಾಗಿದ್ದು, ಅರಣ್ಯ ಇಲಾಖೆ, ಎಪಿಎಂಸಿ ಹಾಗೂ ಕ್ಯಾಂಪ್ ಪೊಲೀಸರು ಬಂದೋಬಸ್ತ ಏರ್ಪಡಿಸಿದ್ದಾರೆ.

Check Also

ಅಕ್ರಮ ಗೋ ಸಾಗಾಟ ; ಟ್ರಕ್ ಚಾಲಕನ ಮೇಲೆ ನೈತಿಕ ಪೊಲೀಸ್ ಗಿರಿ

ಬೆಳಗಾವಿ : ಅಕ್ರಮ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಹಿನ್ನಲೆಯಲ್ಲಿ ಲಾರಿಯನ್ನು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ …

Leave a Reply

Your email address will not be published. Required fields are marked *