Breaking News
Home / Breaking News / ರಾಜ್ಯ ಬಿಜೆಪಿಯಲ್ಲಿ, ಪವರ್ ಜೊತೆಗೆ, ಮಾಸ್ಕ್ ಲೀಡರ್, ರಾಜಾಹುಲಿ ರಿಟರ್ನ್….!!

ರಾಜ್ಯ ಬಿಜೆಪಿಯಲ್ಲಿ, ಪವರ್ ಜೊತೆಗೆ, ಮಾಸ್ಕ್ ಲೀಡರ್, ರಾಜಾಹುಲಿ ರಿಟರ್ನ್….!!

ಬೆಳಗಾವಿ-ಬಿಜೆಪಿಯ ಕೇಂದ್ರ ಸಂಸದೀಯ ಸಮೀತಿಯ ಪುನರ್ ರಚಣೆಯಾಗಿದ್ದು ಈ ಸಮೀತಿಯಲ್ಲಿ ಕರ್ನಾಟಕದ ಮಾಸ್ಕ್ ಲೀಡರ್ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ನವರಿಗೆ ಸ್ಥಾನ ನೀಡುವ ಮೂಲಕ ಬಿಜೆಪಿ ರಾಜಾಹುಲಿಗೆ ಮಣೆ ಹಾಕಿದೆ.

ಮಾಜಿ ಸಿಎಂ ಯಡಿಯೂರಪ್ಪ ನವರಿಗೆ ಬಿಜೆಪಿಯ ಸಂಸದೀಯ ಸಮೀತಿ,ಮತ್ತು ಚುನಾವಣಾ ಸಮೀತಿಯಲ್ಲಿ ಮಹತ್ವದ ಸ್ಥಾನ ನೀಡುವ ಮೂಲಕ ಮುಂದಿನ ವಿಧಾನಸಭೆ ಚುನಾವಣೆಯ ಜವಾಬ್ದಾರಿಯನ್ನು ಯಡಿಯೂರಪ್ಪ ನವರಿಗೆ ನೀಡಲಾಗಿದೆ.

ಯಡಿಯೂರಪ್ಪ ನವರಿಗೆ ಮಹತ್ವದ ಸ್ಥಾನ ನೀಡುವ ಮೂಲಕ ಬಿಜೆಪಿ ಪ್ರಭಾವಿ ಲಿಂಗಾಯತ ಸಮುದಾಯವನ್ನು ಓಲೈಸುವ ಜೊತೆಗೆ ಕಾಂಗ್ರೆಸ್ ನಾಯಕ ಮಾಜಿ ಸಿಎಂ ಸಿದ್ರಾಮಯ್ಯ ನವರಿಗೆ ಟಕ್ಕರ್ ಕೊಡಲು ಬಿಜೆಪಿ ತಂತ್ರ ರೂಪಿಸಿದ್ದು, ಬಿಜೆಪಿ ಹೈಕಮಾಂಡ್ ಕರ್ನಾಟಕದ ಮಾಸ್ಕ್ ಲೀಡರ್ ಯಡಿಯೂರಪ್ಪನವರಿಗೆ ಮಹತ್ವದ ಸ್ಥಾನ ನೀಡಿದೆ.

ಇಂದು ಬೆಳಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲು ಮಾದ್ಯಮಗಳ ಜೊತೆ ಮಾತನಾಡಿ, ಬಿಜೆಪಿ ಹೈಕಮಾಂಡ್ ನಿರ್ಧಾರವನ್ನು ಸ್ವಾಗತಿಸಿದ್ದಾರೆ‌.ಕೇಂದ್ರದಲ್ಲಿ ಕರ್ನಾಟಕದ ಪರವಾಗಿ ಧ್ವನಿ ಎತ್ತಲು ಅನಕೂಲವಾಗಲಿದೆ ಎಂದು ನಳೀನಕುಮಾರ್ ಕಟೀಲು ಹರ್ಷವ್ಯಕ್ತಪಡಿಸಿದ್ದಾರೆ.

Check Also

ಅಮೀತ್ ಶಾ ಅವರನ್ನು ಭೇಟಿಯಾದ ಡಾ.ಸೋನಾಲಿ ಸರ್ನೋಬತ್,ಖಾನಾಪೂರ ಕ್ಷೇತ್ರದಲ್ಲಿ ಸಂಚಲನ..!!

ಬೆಳಗಾವಿ-ಬೆಳಗಾವಿ ಬಿಜೆಪಿ ಸಂಘಟನೆಯಲ್ಲಿ ಹಲವಾರು ಜವಾಬ್ದಾರಿಗಳನ್ನು ಅತ್ಯಂತ ಪ್ರಾಮಾಣಿಕವಾಗಿ ನಿಭಾಯಿಸುತ್ತಿರುವ ಬಿಜೆಪಿ ನಾಯಕಿ,ಡಾ.ಸೋನಾಲಿ ಸರ್ನೋಬತ್ ಅವರು ಖಾನಾಪೂರ ತಾಲ್ಲೂಕಿನ ಬಿಜೆಪಿ …

Leave a Reply

Your email address will not be published. Required fields are marked *