Breaking News
Home / Breaking News / ಬೆಳಗಾವಿ ಮೇಯರ್ ಇಲೆಕ್ಷನ್ ಬಗ್ಗೆ ಆಮ್ ಆದ್ಮಿ ಪಾರ್ಟಿ ಸೀರೀಯಸ್….!!

ಬೆಳಗಾವಿ ಮೇಯರ್ ಇಲೆಕ್ಷನ್ ಬಗ್ಗೆ ಆಮ್ ಆದ್ಮಿ ಪಾರ್ಟಿ ಸೀರೀಯಸ್….!!

ಅವರು ಗೌನ್ ಕೊಡಲಿಲ್ಲ.ಇವರು ಮೇಯರ್ ಇಲೆಕ್ಷನ್ ಮಾಡಲಿಲ್ಲ: ಟೋಪಣ್ಣವರ

ಬೆಳಗಾವಿ
ಭಾರತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುವ ಸಂಧರ್ಭದಲ್ಲಿ, ಬೆಳಗಾವಿ ಮಹಾನಗರ ಪಾಲಿಕೆಯ ಸದಸ್ಯರು,ಅಧಿಕಾರ ಇಲ್ಲದೇ ವಾರ್ಷಿಕೋತ್ಸವ ಆಚರಿಸು ಪರಿಸ್ಥಿತಿ ಎದುರಾಗಿದೆ. ಕಾಂಗ್ರೆಸ್ ನವರು ಸ್ಥಳೀಯ ಶಾಸಕರಿಗೆ ಗೌನ್ ಕೊಡಬೇಕಾದವರು ಮೌನರಾದರು ಎಂದು ಆಮ್ ಆದ್ಮಿ ಪಾರ್ಟಿಯ ಉತ್ತರ ವಲಯ ಉಸ್ತುವಾರಿ ರಾಜಕುಮಾರ ಟೋಪಣ್ಣವರ ಟೀಕಿಸಿದ್ದಾರೆ.

ಸ್ಥಳಿಯ ಶಾಸಕ ಅಭಯ ಪಾಟೀಲರು ಪಾಲಿಕೆಯ ಮೇಯರ್, ಉಪಮೇಯರ್ ಅಗಸ್ಟ್ 15 ಕ್ಕೆ ದ್ವಜಾರೋಹಣ ಮಾಡುತ್ತಾರೆ ಎಂದು ಹೇಳಿಕೆ ನೀಡಿದ್ದರು, ಅವರು ಕೊಟ್ಟ ಭರವಸೆಯೂ ಸುಳ್ಳಾಗಿದೆ‌. ಬೆಳಗಾವಿ ಮಹಾನಗರದ ನಿವಾಸಿಗಳು ಮಹಾನಗರ ಪಾಲಿಕೆಗೆ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಒಂದು ವರ್ಷವಾಗುತ್ತಿದೆ.ಪಾಲಿಕೆ ಸದಸ್ಯರು ಇನ್ನುವರೆಗೆ ಪ್ರತಿಜ್ಞಾವಿಧಿ ಸ್ವಿಕರಿಸಿಲ್ಲ.ಸ್ಥಳೀಯ ಶಾಸಕರಿಗೆ ನಗರ ಸೇವಕರಿಗೆ ಅಧಿಕಾರ ದೊರಕಿಸಿಕೊಡುವ ಇಚ್ಛಾಶಕ್ತಿಯೂ ಇಲ್ಲ.ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಸಮಸ್ಯೆ ಬಗೆಹರಿಸದೇ ಪಾಲಿಕೆ ಸದಸ್ಯರ ಅಧಿಕಾರ ಹೈಜಾಕ್ ಮಾಡಿದೆ ಎಂದು ಟೀಕಿಸಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆ ಸದಸ್ಯರಿಗೆ ಅಧಿಕಾರ ದೊರಕಿಸಿ ಕೊಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡು ಒಂದು ವಾರದಲ್ಲಿ ಬೆಳಗಾವಿ ಮೇಯರ್,ಮತ್ತು ಉಪ ಮೇಯರ್ ಚುನಾವಣೆ ಮಾಡದಿದ್ದರೆ,ಆಮ್ ಆದ್ಮಿ ಪಾರ್ಟಿಯ ಕಾರ್ಯಕರ್ತರು ಬೆಳಗಾವಿ ಮಹಾನಗರ ಪಾಲಿಕೆಯ ಕಚೇರಿ ಎದುರು ಧರಣಿ ಸತ್ಯಾಗ್ರಹ ಮಾಡಬೇಕಾಗುತ್ತದೆ‌ ಎಂದು ಎಚ್ಚರಿಕೆ ನೀಡಿದ್ದಾರೆ.

ಪಾಲಿಕೆ ಸದಸ್ಯರು,ಅಧಿಕಾರ ಪಡೆಯಲು ಧ್ವನಿ ಎತ್ತಬೇಕು,ಹಿಟ್ಲರ್ ಶಾಹಿ ಧೋರಣೆಯ ವಿರುದ್ಧ ಹೋರಾಡಬೇಕು,ಈ ವಿಚಾರದಲ್ಲಿ ಆಮ್ ಆದ್ಮಿ ಪಾರ್ಟಿ ಬೆಳಗಾವಿ ನಗರ ಸೇವಕರ ಜೊತೆಗಿದೆ ಎಂದು ಟೋಪಣ್ಣವರ ಪ್ರಕಟಣೆಯಲ್ಲಿ ಭರವಸೆ ನೀಡಿದ್ದಾರೆ.
————
ಚುನಾವಣೆ ಬಂದಾಗ,ಬಿಜೆಪಿಯಿಂದ ಲಿಂಗಾಯತರ ಜಪ

ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಹೈಕಮಾಂಡ್ ಗೆ ಲಿಂಗಾಯತರು ನೆನಪಾಗುತ್ತಾರೆ,ಲಿಂಗಾಯತರ ಮೇಲಿನ ಪ್ರೀತಿ ಇಮ್ಮಡಿಯಾಗುತ್ತದೆ.ಬಿ.ಎಸ್ ಯಡಿಯೂರಪ್ಪ ನವರಿಗೆ ಎರಡು ಬಾರಿ ಐದು ವರ್ಷಗಳ ಕಾಲ ಅಧಿಕಾರ ಪೂರ್ಣಗಳಿಸಲು ಅವಕಾಶ ನೀಡದ ಬಿಜೆಪಿ ನಾಯಕರು ಯಡಿಯೂರಪ್ಪನವರಿಗೆ,ಕೇಂದ್ರ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಿ ಲಿಂಗಾಯತರ ಓಲೈಕೆಗೆ ಡ್ರಾಮಾ ನಡೆಸಿದ್ದಾರೆ.ಚುನಾವಣೆ ಬಂದಾಗ ಬಿಜೆಪಿ ಈ ರೀತಿಯ ಡ್ರಾಮಾ ನಡೆಸುವದು ಸಾಮಾನ್ಯವಾಗಿದ್ದು,ಈ ಬಾರಿ ಲಿಂಗಾಯತ ಸಮುದಾಯ ಬಿಜೆಪಿ ನಾಟಕಕ್ಕೆ ಮರಳಾಗುವದಿಲ್ಲ ಎಂದು ಟೀಕಿಸಿದ್ದಾರೆ.

Check Also

ಅಮೀತ್ ಶಾ ಅವರನ್ನು ಭೇಟಿಯಾದ ಡಾ.ಸೋನಾಲಿ ಸರ್ನೋಬತ್,ಖಾನಾಪೂರ ಕ್ಷೇತ್ರದಲ್ಲಿ ಸಂಚಲನ..!!

ಬೆಳಗಾವಿ-ಬೆಳಗಾವಿ ಬಿಜೆಪಿ ಸಂಘಟನೆಯಲ್ಲಿ ಹಲವಾರು ಜವಾಬ್ದಾರಿಗಳನ್ನು ಅತ್ಯಂತ ಪ್ರಾಮಾಣಿಕವಾಗಿ ನಿಭಾಯಿಸುತ್ತಿರುವ ಬಿಜೆಪಿ ನಾಯಕಿ,ಡಾ.ಸೋನಾಲಿ ಸರ್ನೋಬತ್ ಅವರು ಖಾನಾಪೂರ ತಾಲ್ಲೂಕಿನ ಬಿಜೆಪಿ …

Leave a Reply

Your email address will not be published. Required fields are marked *