Breaking News

ಬೆಳಗಾವಿ ಮುದ್ರಣ ಮಾದ್ಯಮದ ಪತ್ರಕರ್ತರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಬೆಳಗಾವಿ : ಬೆಳಗಾವಿ ಪತ್ರಕರ್ತರ ಸಂಘದ ( ಮುದ್ರಣ ಮಾಧ್ಯಮ) ಸಂಘದ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ವಿಲಾಸ ಜೋಶಿ, ಉಪಾಧ್ಯಕ್ಷರಾಗಿ ಶ್ರೀಶೈಲ ಮಠದ, ಸಂಜಯ ಸೂರ್ಯವಂಶಿ, ಗೌರವಾಧ್ಯಕ್ಷರಾಗಿ ಹೃಷಿಕೇಶ್ ಬಹದ್ದೂರ್ ದೇಸಾಯಿ, ಗೌರವ ಸಲಹೆಗಾರರಾಗಿ ಕೇಶವ ಆದಿ, ಸುರೇಶ್ ಶ್ಯಾನಬಾಗ, ಮಹೇಶ್ ವಿಜಾಪುರ, ಕಾರ್ಯದರ್ಶಿಯಾಗಿ ನೌಷಾದ ಬಿಜಾಪುರ, ಸಹಾಯಕ ಕಾರ್ಯದರ್ಶಿಯಾಗಿ ಸುರೇಶ್ ನೇರ್ಲಿ, ಖಜಾಂಚಿಯಾಗಿ ರವಿ ಉಪ್ಪಾರ,

ಕಾರ್ಯಕಾರ್ಯಣಿ ಸದಸ್ಯರಾಗಿ:
ರಾಜು ಗವಳಿ, ಮಲ್ಲಿಕಾರ್ಜುನ ಮುಗಳಿ, ಸಂತೋಷ ಚಿನಗುಡಿ, ಮುನ್ನಾ ಬಗವಾನ, ಮಂಜುನಾಥ ಕೋಳಿಗುಡ್ಡ, ಸುನಿಲ್ ಪಾಟೀಲ, ಜಗದೀಶ್ ವಿರಕ್ತಮಠ, ರಾಜಶೇಖರಯ್ಯ ಹಿರೇಮಠ, ವಿನಾಯಕ ಮಠಪತಿ, ರವಿ ಗೋಸಾಯಿ, ಅಶೋಕ ಮುದ್ದಣ್ಣವರ, ಅರುಣ ಯಳ್ಳೂರಕರ, ರಾಮಚಂದ್ರ ಸುಣಗಾರ, ರಜನಿಕಾಂತ್ ಯಾದವಾಡ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಈ ಸಭೆಯಲ್ಲಿ ವೇಗವಾಗಿ ಮುಂದುವರೆಯುತ್ತಿರುವ ಹಾಗೂ ಬದಲಾವಣೆ ಆಗುತ್ತಿರುವ ಮಾಧ್ಯಮ ಕ್ಷೇತ್ರದಲ್ಲಿ ನಮ್ಮತನವನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ‌ಚರ್ಚಿಸಲಾಯಿತು.

ಇದೇ ಸಮಯದಲ್ಲಿ ಅಭಿವೃದ್ಧಿ ಪತ್ರಿಕೋದ್ಯಮದ ವರದಿಗಾರಿಕೆ ಹಿನ್ನೆಲೆ ರಾಜ್ಯ ಸರ್ಕಾರದ ಪ್ರಶಸ್ತಿಗೆ ಭಾಜರಾದ ಹಿರಿಯ ಪತ್ರಕರ್ತರ ನೌಷಾದ ಬಿಜಾಪುರ ಅವರನ್ನು ಗೌರವಿಸಲಾಯಿತು.
ಈ ಸಭೆಯಲ್ಲಿ ನೂತನ
ಪದಾಧಿಕಾರಿಗಳು, ನಾಗರಾಜ ಎಚ್.ವಿ. ಹಿರಾಮಣಿ
ಸೇರಿದಂತೆ ಹಲವು ಭಾಗವಹಿಸಿದ್ದರು.

Check Also

ಉ.ಕ ಭಾಗಕ್ಕೂ ವಿಮಾನಯಾನ ಸೌಲಭ್ಯ ಹೆಚ್ಚಿಸಲು ಸಚಿವ ಸತೀಶ್‌ ಜಾರಕಿಹೊಳಿ ಮನವಿ

ನವದೆಹಲಿ: ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಾಪು ರಾಮ್ ಮೋಹನ್ ನಾಯ್ಡು ಅವರನ್ನು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು …

Leave a Reply

Your email address will not be published. Required fields are marked *