ರ್ಯಾಗಿಂಗ್ ಪಿಡುಗು ಹೋಯ್ತಲ್ಲ ಎಂದು ಕಾಲೇಜು ವಿಧ್ಯಾರ್ಥಿಗಳು ನಿಟ್ಟುಸಿರು ಬಿಡುವ ಮುನ್ನವೇ ಬೆಳಗಾವಿಯಲ್ಲಿ ರ್ಯಾಗಿಂಗ್ ಪ್ರಕರಣವೊಂದು ಬೆಳಕಿಗೆ ಬಂದಿದೆ
ರಾಜ್ಯದ ಎರಡನೇಯ ರಾಜಧಾನಿ ಬೆಳಗಾವಿಯಲ್ಲೂ ಕಾಲೇಜು ವಿದ್ಯಾರ್ಥಿನಿಗೆ ನಡು ರಸ್ತೆಯಲ್ಲಿ ರ್ಯಾಂಗಿಗ್ ಮಾಡಲಾಗಿದೆ. ರ್ಯಾಂಗಿಗ್ ಕಿರುಕುಳಕ್ಕೆ ಮನನೊಂದ ಯುವತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ರ್ಯಾಗಿಂಗ್ ಪ್ರಕರಣ ಬೆಳಕಿಗೆ ಬಂದ್ರೂ ಪೊಲೀಸ್ರು ಮಾತ್ರ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿಲ್ಲ.
ಬೆಳಗಾವಿ ಕಾಲೇಜೊಂದರ ಪ್ರಥಮ ವರ್ಷದ ವಿದ್ಯಾರ್ಥಿನಿಗೆ ಕಳೆದ ಬುಧವಾರ ಆರ್ ಒನ್ 5 ಬೈಕ್ ಮೇಲೆ ಬಂದ್ ಇಬ್ಬರು ಕಿರಾತಕರು ನಡು ರಸ್ತೆಯಲ್ಲಿ ಅಡ್ಡಗಟ್ಟಿ ರ್ಯಾಂಗಿಗ್ ಮಾಡಿದ್ದಾರೆ. ಬೆಳಗಾವಿ ನಗರದ ಧರ್ಮೀರ ಸಂಭಾಜಿ ವೃತ್ತದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಯುವತಿಗೆ ಪರೀಕ್ಷೆ ಮುಗಿದ ಮೇಲೆ ನಮ್ಮನ್ನ ಭೇಟಿ ಮಾಡುವಂತೆ ಹೇಳಿದ್ದಾರೆ. ಇದಕ್ಕೆ ನಿರಕಾರಿಸಿದ್ದಕ್ಕೆ ಬರದಿದ್ದರೆ ಕೊಲೆ ಮಾಡುವುದಾಗಿ ಹೆದರಿಸಿದ್ದಾರೆ. ಅಷ್ಟೇ ಅಲ್ಲದೇ 15 ದಿನಗಳ ಹಿಂದೆಯೂ ಇದೇ ಯುವಕರು ಮಾರುಕಟ್ಟೆ ಪ್ರದೇಶದಲ್ಲಿ ಕೈ ಹಿಡಿದು ಏಳೆದಾಡಿದ್ರು. ಈ ವಿಚಾರ ಮನೆಯಲ್ಲಿ ಗೊತ್ತಾದ್ರೆ ಕಾಲೇಜಿಗೆ ಹೋಗುವುದನ್ನೆ ಬಿಡಿಸುತ್ತಾರೆ ಎಂಬ ಭಯದಿಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ನಿನ್ನೆ ಸಂಜೆ ಜಾನುವಾರುಗಳಿಗೆ ಹಾಕುವ ಔಷಧಿಯನ್ನ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ತಕ್ಷಣವೇ ಯುವತಿಯನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು. ಸದ್ಯ ಯುವತಿ ಆರೋಗ್ಯದಲ್ಲಿ ಚೇತರಿಕೆ ಖಂಡಿದೆ. ಬೆಳಗಾವಿಯ ಖಡೇಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ವಿದ್ಯಾರ್ಥಿನಿಗೆ ರ್ಯಾಗಿಂಗ್ ಮಾಡಲಾಗಿದೆ. ಆ ಆರ್ ಒನ್ 5 ಬೈಕ್ ಮೇಲೆ ಬಂದ ಕಿರಾತಕರು ತಾವು ಪೀರನವಾಡಿಯವರು ಎಂದು ಹೇಳಿದ್ದಾರೆಂದು ಯುವತಿ ಹೇಳುತ್ತಾಳೆ.
ಈಗ ನೊಂದ ಯುವತಿಗೆ ಜೀವ ಭಯ ಕಾಡುತ್ತಿದೆ. ಈವರೆಗೂ ಬೆಳಗಾವಿ ಪೊಲೀಸರು ಗಂಭೀರವಾಗಿ ತೆಗೆದುಕೊಳ್ಳದಿರುವು ದುರಂತ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ