Breaking News

ಬೆಳಗಾವಿ ಪಾಸ್ ಪೋರ್ಟ್ ಕೇಂದ್ರದ ಅಪಾಯಿನ್ಮೆಂಟ್ ಬುಕ್ಕಿಂಗ್ ಆರಂಭ…

ಪ್ರೇಮಿಗಳ ದಿನದಂದು ಬೆಳಗಾವಿಯಲ್ಲಿ ಪಾಸ್ ಪೋರ್ಟ್ ಕೇಂದ್ರ ಸ್ಟಾರ್ಟ್…

ಬೆಳಗಾವಿ- ಮೂರು ರಾಜ್ಯಗಳ ಸಂಪರ್ಕದ ಕೊಂಡಿ,ರಾಜ್ಯದ ಎರಡನೆಯ ರಾಜಧಾನಿಯಾದ ಬೆಳಗಾವಿಯಲ್ಲಿ ಫೆಬ್ರುವರಿ 14 ಪ್ರೇಮಿಗಳ ದಿನದಂದು ಪಾಸ್ ಪೋರ್ಟ್ ಸೇವಾ ಕೇಂದ್ರ ಶುಭಾರಂಭಗೊಳ್ಳಲಿದೆ

ಸಂಸದ ಸುರೇಶ ಅಂಗಡಿ ಅವರು ಕೊನೆಗೂ ಬೆಳಗಾವಿಗೆ ಪಾಸ್ ಪೋರ್ಟ್ ಸೇವಾ ಕೇಂದ್ರ ಮಂಜೂರು ಮಾಡಿಸಿ ವಿಳಂಬವಾದರೂ ಅದನ್ನು ಶುರು ಮಾಡಿಸುವಲ್ಲಿ ಯಶಸ್ವಿಯಾಗಿದ್ದು ಸಂತಸದ ವಿಷಯವಾಗಿದೆ

ಫೆಬ್ರುವರಿ 14 ರಂದು ಬೆಳಗಾವಿಯ ಸ್ಟೇಷನ್ ರಸ್ತೆಯಲ್ಲಿರುವ ಕೇಂದ್ರ ಅಂಚೆ ಕಚೇರಿಯ ಮೊದಲ ಮಹಡಿಯಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರ ಶುರುವಾಗಲಿದೆ

ಇಂದು ಸಂಜೆ ಪಾಸ್ ಪೋರ್ಟ್ ಸೇವಾ ಕೇಂದ್ರದ ವೆಬ್ ಸೈಟ್ ನಲ್ಲಿ ಫೆಬ್ರುವರಿ 14 ರ ಅಪಾಯಿನ್ ಮೆಂಟ್ ಬುಕ್ಕಿಂಗ್ ಶುರುವಾಗಿದ್ದು ಈದಿನ ಐವತ್ತು ಜನರಿಗೆ ಅಪಾಯಿನ್ಮೆಂಟ್ ಸಿಗಲಿದ್ದು ಈಗಾಗಲೇ ಬೆಳಗಾಯಿಯ ಜನ ಅಪಾಯಿನ್ಮೆಂಟ್ ಗಾಗಿ ಬುಕ್ಕಿಂಗ್ ಶುರು ಮಾಡಿದ್ದಾರೆ

ಬೆಳಗಾವಿಯಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರ ಆರಂಭವಾದ ದಿನದಿಂದ ಮೂರು ತಿಂಗಳ ವರೆಗೆ ಪ್ರತಿ ದಿನ ಐವತ್ತು ಜನರಿಗೆ ಅಪಾಯಿನ್ಮೆಂಟ್ ಸಿಗುತ್ತದೆ ಮೂರು ತಿಂಗಳ ನಂತರ ಪ್ರತಿ ದಿನ 130 ಜನರಿಗೆ ಅಪಾಯಿನ್ಮೆಂಟ್ ಸಿಗಲಿದೆ

ಪಾಸ್ ಪೋರ್ಟ್ ವೆರಿಪಿಕೇಶನ್ ಗಾಗಿ ಬೆಳಗಾವಿ ಜಿಲ್ಲೆಯ ಜನ ಹುಬ್ಬಳ್ಳಿಗೆ ಹೋಗಿ ದಿನವಿಡೀ ಸರದಿಯಲ್ಲಿ ನಿಂತು ಪರದಾಡುವ ಪರಿಸ್ಥಿತಿ ಈಗ ದೂರಾಗಿದೆ

ಪಾಸ್ ಪೋರ್ಟ ಇಲ್ಲದವರು ಫಟಾಫಟ್ ಆನ್ ಲೈನ್ ನಲ್ಲಿ ಅಪಾಯಿನ್ಮೆಂಟ್ ಗಾಗಿ ಬುಕ್ಕಿಂಗ್ ಮಾಡಿ

Check Also

ನಮ್ಮೂರಲ್ಲಿ ಹಂಗೇನಿಲ್ಲ,ರಸ್ತೆಯ ಮೇಲೆ ಗಿಡ ಹಚ್ತಾರೇ….!!!

ಬೆಳಗಾವಿ-ಬೆಳಗಾವಿಯಲ್ಲಿ ನಡು ರಸ್ತೆಯಲ್ಲೇ ತೆಂಗಿನಮರ,ಬಾಳೆಗಿಡ ನೆಟ್ಟು ದಿಢೀರ್ ಪ್ರತಿಭಟನೆ ನಡೆಸುವ ಮೂಲಕ ಗ್ರಾಮಸ್ಥರು ತಮ್ಮ ಆಕ್ರೋಶವನ್ಬು ಹೊರಹಾಕಿದ ಘಟನೆ ಬೆಳಗಾವಿಯಲ್ಲಿ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.