Breaking News

ಬೆಳಗಾವಿಯಲ್ಲಿ ಬ್ಯಾಂಡ್ ಬಾರಿಸಿ.. ವ್ಯಾಕ್ಸೀನ್ ವೆಲ್ ಕಮ್ ಮಾಡಿದ್ರು….!!

ಬೆಳಗಾವಿ- ಕೋವೀಡ್ ವ್ಯಾಕ್ಸೀನ್ ಇಂದು ಬೆಳಗಿನ ಜಾವ ಬೆಳಗಾವಿಗೆ ತಲುಪಿದ್ದು ಆರೋಗ್ಯ ಇಲಾಖೆಯ ಅಧಿಕಾರಿಗಳು ಬ್ಯಾಂಡ್ ಬಾರಿಸಿ ಮಹಾಮಾರಿಯ ವ್ಯಾಕ್ಸೀನ್ ಬರಮಾಡಿಕೊಂಡಿದ್ದಾರೆ‌

ಆರೋಗ್ಯ ಇಲಾಖೆಯ ಅಧಿಕಾರಿಗಳು ನಿನ್ನೆಯಿಂದೇ ವ್ಯಾಕ್ಸೀನ್ ಯಾವಾಗ ಬರುತ್ತೇ ಅಂತಾ ದಾರಿ ಕಾಯುತ್ತಿದ್ದರು ಆದ್ರೆ ಈ ವ್ಯಾಕ್ಸೀನ್ ಇಂದು ಬೆಳಗಿನ ಜಾವವೇ ರಸ್ತೆ ಮೂಲಕ ಬೆಳಗಾವಿಗೆ ತಲುಪಿದೆ,ವ್ಯಾಕ್ಸೀನ್ ಹೊತ್ತು ತಂದ ವಾಹನಕ್ಕೆ ಆರತಿ ಮಾಡಿ ಬ್ಯಾಂಡ್ ಬಾರಿಸಿ ಸ್ವಾಗತ ಮಾಡಿದ್ದಾರೆ.

ಒಂದು ವಾಹನದಲ್ಲಿ ಕೋವೀಡ್ ವ್ಯಾಕ್ಸೀನ್ ಬೆಳಗಾವಿಗೆ ಬಂದಿದೆ,1.47 ಲಕ್ಷ ಡೋಸ್ ಗಳು ಬೆಳಗಾವಿಯ ವ್ಯಾಕ್ಸೀನ್ ಡಿಪೋಗೆ ತಲುಪಿದ್ದು ಬೆಳಗಾವಿಯಿಂದ ಬೇರೆ ಬೇರೆ ಜಿಲ್ಲೆಗಳಿಗೆ ರವಾನೆ ಆಗಲಿವೆ.

ಬೆಳಗಾವಿಯ ವ್ಯಾಕ್ಸೀನ್ ಡಿಪೋದಲ್ಲಿ 1.47 ಲಕ್ಷ ಲಸಿಕೆಗಳು ಕೋಲ್ಡ್ ಸ್ಟೋರೇಜ್ ನಲ್ಲಿದ್ದು ಹುಬ್ಬಳ್ಳಿ,ಧಾರವಾಡ,ಗದಗ,ಬಾಗಲಕೋಟೆ ಸೇರಿದಂತೆ 8 ಜಿಲ್ಲೆಗಳಿಗೆ ರವಾನೆ ಆಗಲಿದೆ.

Check Also

ವೀರ ಮದಕರಿ ಪುತ್ಥಳಿ ಸ್ಥಾಪನೆ- ಸ್ಥಳ ಪರಿಶೀಲಿಸಿ ವರದಿ ನೀಡಲು ಸೂಚನೆ:

ಪರಿಶಿಷ್ಟರ ದೂರು ನಿವಾರಣೆಗೆ ತ್ವರಿತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ, -: ಪರಿಶಿಷ್ಟ ಜಾತಿ/ವರ್ಗಗಳ ದೌರ್ಜನ್ಯ …

Leave a Reply

Your email address will not be published. Required fields are marked *