ಚಿರತೆ ಸಿಗಲಿಲ್ಲ,ಶೋಧಕಾರ್ಯಾಚರಣೆ ನಿಂತಿಲ್ಲ….!!
ಬೆಳಗಾವಿ- ಇಂದು ಬೆಳಗ್ಗೆ ಬೆಳಗಾವಿ ನಗರದಲ್ಲಿ ಚಿರತೆ ನುಗ್ಗಿ ಕಟ್ಟಡ ಕಾರ್ಮಿಕನ ಮೇಲೆ ಅಟ್ಯಾಕ್ ಮಾಡಿ ಮಾಯವಾಗುವದರ ಮೂಲಕ ಈ ಚಿರತೆ ಬೆಳಗಾವಿ ಮಹಾನಗರದಲ್ಲಿ ಆತಂಕ ಸೃಷ್ಟಿಸಿತು.
ಚಿರತೆ ಕಾಣಿಸಿಕೊಂಡ ವಿಷಯ ತಿಳಿಯುತ್ತಿದ್ದಂತೆಯೇ ಪೋಲೀಸರು,ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಚಿರತೆಯ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸಿದ್ರು, ಪೋಲೀಸ್ರು ಜಾಧವ ನಗರದ ಪ್ರತಿಯೊಂದು ಮನೆಯ ಸಿಸಿ ಟಿವ್ಹಿ ಕ್ಯಾಮರಾ ಚೆಕ್ ಮಾಡಿದ್ರು,ಚಿರತೆಯ ಚಲನವಲನಗಳ ಬಗ್ಗೆ ಮಾಹಿತಿ ಪಡೆದ್ರು.
ಅರಣ್ಯ ಇಲಾಖೆಯ ಅಧಿಕಾರಿಗಳು ಜಾಧವ ನಗರಕ್ಕೆ ಚಿರತೆ ನುಗ್ಗಿರುವ ವಿಚಾರವನ್ನು ದೃಡಪಡಿಸಿಕೊಂಡ ಮೇಲೆ ಗದಗದಿಂದ ಚಿರತೆ ಹಿಡಿಯುವ ಎಕ್ಸಪರ್ಟ್ ಗಳಿಗೆ ಬೆಳಗಾವಿಗೆ ದೌಡಾಯಿಸುವಂತೆ ಮಾಹಿತಿ ರವಾನಿಸಿದ್ರು.
ಇಂದು ಬೆಳಗ್ಗೆಯಿಂದ ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಪೋಲೀಸರು ದ್ರೋಣ ಕ್ಯಾಮರಾ ಮೂಲಕ ಚಿರತೆ ಪತ್ತೆ ಮಾಡುವ ಪ್ರಯತ್ನ ಮಾಡಿದ್ರು.ಚಿರತೆ ಅಟ್ಯಾಕ್ ಮಾಡಿದ ಕಟ್ಟಡ ಕಾರ್ಮಿಕನಿಗೆ ಸಣ್ಣಪುಟ್ಟ ಗಾಯಗಳಾಗಿ ಆತ ಚಿಕಿತ್ಸೆ ಪಡೆದು ಆತ ಮನೆಗೆ ಹೋಗುವಷ್ಟರಲ್ಲಿ ಕಾರ್ಮಿಕನ ತಾಯಿ ನನ್ನ ಮಗನ ಮೇಲೆ ಚಿರತೆ ದಾಳಿ ಮಾಡಿರುವ ಸುದ್ದಿ ತಿಳಿದು ಕಾರ್ಮಿಕನ ತಾಯಿ ಹೃದಯಾಘಾತದಿಂದ ಸಾವನ್ನೊಪ್ಪಿದ ದು;ಖಕರ ಸಂಗತಿ ತಿಳಿಯಿತು.
ಅರಣ್ಯ ಇಲಾಖೆಯ ಸಿಬ್ಬಂಧಿಗಳು ಪಂಜರದಲ್ಲಿ ನಾಯಿ ಕಟ್ಟಿ ಚಿರತೆಯನ್ನು ಬೋನಿಗೆ ಬೀಳಿಸಲು ನಡೆಸಿದ ಪ್ರತ್ನವೂ ವಿಫಲವಾಯಿತು.ಚಿರತೆ ಇನ್ನೂ ಜಾಧವ ನಗರ ಮತ್ತು ಹನುಮಾನ ನಗರದ ಪ್ರದೇಶದಲ್ಲೇ ಓಡಾಡುತ್ತಿದೆ.ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಪೋಲೀಸ್ರು ದ್ವನಿ ವರ್ದಕ ಮೂಲಕ ಈ ಭಾಗದಲ್ಲಿ ಜಾಗೃತಿ ಮೂಡಿಸಿದ್ರು.ಇಂದು ಬೆಳಗ್ಗೆ ಅಟ್ಯಾಕ್ ಮಾಡಿ ಮಾಯವಾಗಿರುವ ಚಿರತೆ ರಾತ್ರಿಯಾದ್ರೂ ಮತ್ತೆ ಕಾಣಿಸಿಲ್ಲ,ಚಿರತೆಯ ಶೋಧ ಕಾರ್ಯಾಚರಣೆಯೂ ನಿಂತಿಲ್ಲ..