ಸ್ಮಾರ್ಟ್ ಸೊಲ್ಯೂಷನ್ಸ್ ಚಾಲೆಂಜ್‌ನಲ್ಲಿ ಬೆಳಗಾವಿ ಪ್ರಥಮ..

“ಇನ್ ಕ್ಲೂಸಿವ್ ಸಿಟಿ ಅವಾರ್ಡ್-2022” ರ ಗರಿ ಮುಡಿಗೇರಿಸಿಕೊಂಡ ಬೆಳಗಾವಿ ಸ್ಮಾರ್ಟಸಿಟಿ
ಬೆಳಗಾವಿ: 28: ಬೆಳಗಾವಿ ಸ್ಮಾರ್ಟ್ ಸಿಟಿಯು ಪ್ರತಿಷ್ಠಿತ ವಿಶ್ವಸಂಸ್ಥೆ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅರ್ಬನ್ ಅಫೇರ್ಸ್ (ಓIUಂ) ಏರ್ಪಡಿಸಿದ ಸರ್ವ ತೋಮುಖ ನಗರ ಸ್ಪರ್ಧೆಯ ಸ್ಮಾರ್ಟ್ ಸೊಲ್ಯೂಷನ್ಸ್ ಚಾಲೆಂಜ್‌ನಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದೆ. ಪ್ಯಾನ್ ಸಿಟಿ ಇಂಪ್ಲಿಮೆಂಟೆಡ್ ಸೊಲ್ಯೂಷನ್ಸ್ ವಿಭಾಗದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ಹಾಗೂ ಅದರ ಬಹು ಆಯಾಮದ ಒಳಗೊಳ್ಳುವಿಕೆಗಾಗಿ ಬೆಳಗಾವಿ ಸ್ಮಾರ್ಟ್ ಸಿಟಿಯು ಮೊದಲ ಸ್ಥಾನವನ್ನು ಗಳಿಸಿದೆ.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಬೆಳಗಾವಿ ದಕ್ಷಿಣ ಶಾಸಕರಾದ ಶ್ರೀ ಅಭಯ ಪಾಟೀಲ ಅವರು, “ವಿಶೇಷ ಚೇತನರಿಗಾಗಿ ಮಹಾತ್ಮ ಫುಲೆ ಉದ್ಯಾನವನವನ್ನು ಪ್ರಾರಂಭಿಸಲು ನಾನು ಪ್ರಸ್ತಾಪಿಸಿದಾಗ, ಇದು ತುಂಬಾ ಒಳ್ಳೆಯ ಕ್ರಮ ಎಂದು ಎಲ್ಲರೂ ಹೇಳಿದರು. ಯಾವುದೇ ನಗರವು 2,200 ವಿಶೇಷ ಸಾಮರ್ಥ್ಯವುಳ್ಳ ನಾಗರಿಕರಿಗೆ (sಠಿeಛಿiಚಿಟಟಥಿ ಚಿbಟeಜ ಚಿuಣisಣiಛಿ ಛಿiಣizeಟಿs) ಹಣವನ್ನು ಖರ್ಚು ಮಾಡುವುದಿಲ್ಲ, ಆದರೆ ನಾವು ಮಾಡಿದೆವು. ಈ ಮಕ್ಕಳ ಮತ್ತು ಅವರ ಕುಟುಂಬಗಳ ಅಗತ್ಯವನ್ನು ನಾವು ಗುರುತಿಸಿದೆವು.. ಈಗ ಆ ಉದ್ಯಾನವನವು ವಿಶೇಷ ಸಾಮರ್ಥ್ಯವುಳ್ಳವರಿಗೆ ಮಾತ್ರವಲ್ಲದೆ, ಆ ಮಕ್ಕಳ ಆಟ ಮತ್ತು ಓಡಾಟವನ್ನು ನೋಡುವ ಪ್ರತಿಯೊಬ್ಬರಿಗೂ ತೃಪ್ತಿ ಮತ್ತು ಸಂತೋಷವನ್ನು ನೀಡುವ ಕೇಂದ್ರವೂ ಕೂಡ ಆಗಿದೆ “ ಎಂದರು.

“ಲೈಬ್ರರಿಗಳು ಮತ್ತು ಕಿಡ್ಸ್ ಕಾರ್ನರ್‌ಗಳನ್ನು ನಿರ್ಮಿಸುವುದು, ಓದುವುದು ಮತ್ತು ಕಲಿಯುವುದು ಮಾತ್ರವಲ್ಲ, ಇದು ಅಂತರ್ಗತ ನಿಯತಾಂಕಗಳನ್ನು (iಟಿಛಿಟusive ಠಿಚಿಡಿಚಿmeಣeಡಿs) ಅಭಿವೃದ್ಧಿಪಡಿಸುವ ಬಗ್ಗೆಯೂ ಆಗಿದೆ. ನಾವು ಎಲ್ಲ ನಾಗರಿಕರಿಗಾಗಿ ವಿಶ್ವದ ಅತ್ಯಾಧುನಿಕ ಡಿಜಿಟಲ್ ಲೈಬ್ರರಿ ಮತ್ತು ಕಿಡ್ಸ್ ಕಾರ್ನರ್ ಅನ್ನು ನಿರ್ಮಿಸಿದ್ದೇವೆ. ಮಾನವ ಮತ್ತು ಕೃತಕ ಬುದ್ಧಿಮತ್ತೆಯಿಂದ ಸಹ ರಚಿಸಲಾದ ಇ-ಪುಸ್ತಕಗಳು ಹಾಗೂ ಡಿಸ್ಲೆಕ್ಸಿಕ್, ಎ.ಡಿ.ಎಚ್‌.ಡಿ, ಅಂಧ ನಾಗರಿಕರು ಮತ್ತು ಮಕ್ಕಳಿಗೂ ಸಹ ಇ-ಪುಸ್ತಕಗಳನ್ನು ನಾವು ಹೊಂದಿದ್ದೇವೆ. ನಮ್ಮಲ್ಲಿ ವಿಶೇಷಚೇತನರನ್ನು ಹೊರತುಪಡಿಸಿ ಹಿರಿಯರು, ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗೆ ಭಾಷಾ ಕಲಿಕೆಯ ವ್ಯವಸ್ಥೆ ಇದೆ. ನಾವು ಹಿರಿಯ ನಾಗರಿಕರಿಗಾಗಿ eಓeತಿಠಿಚಿಠಿeಡಿs ಮತ್ತು eಒಚಿgಚಿziಟಿes ಅನ್ನು ಹೊಂದಿದ್ದು, ಅವರು ಯಾವುದೇ ಅಕ್ಷರ ಗಾತ್ರ ಮತ್ತು ಡಿಜಿಟಲ್ ಮ್ಯಾಗ್ನಿಫೈಯರ್‌ಗಳಲ್ಲಿ ಓದಬಹುದು” ಎಂದು ಹೇಳಿದರು.

“ಅರಿವಿನ ಕೊರತೆ(ಛಿogಟಿiಣive ಜeಜಿiಛಿieಟಿಛಿies )ಗಳನ್ನು ಮೊದಲೇ ಗುರುತಿಸುವ ಮಕ್ಕಳ ವಲಯವನ್ನು(ಞiಜs zoಟಿe) ನ್ನು ನಾವು ಹೊಂದಿದ್ದು, ಅರಿವಿನ ನರವಿಜ್ಞಾನ ತಂತ್ರ (ಅogಟಿiಣive ಓeuಡಿosಛಿieಟಿಛಿe ಣeಛಿhಟಿiques) ಗಳನ್ನು ಬಳಸಿಕೊಂಡು ನಿರ್ಮಿಸಲಾದ ತಂತ್ರಜ್ಞಾನದ ಸಹಾಯದಿಂದ ನಾವು ಅರಿವಿನ ಕೌಶಲ್ಯ (ಛಿogಟಿiಣive sಞiಟಟs) ಗಳನ್ನು ಅಳೆಯಬಹುದು, ಮೇಲ್ವಿಚಾರಣೆ ಮಾಡಬಹುದು ಮತ್ತು ನಿರ್ವಹಿಸಬಹುದು. ಕಿಡ್ಸ್ ಜೋನ್ ಗೆ ಮಕ್ಕಳಿಗೆ ಸಹಾಯ ಮಾಡುವ ಶಿಕ್ಷಣದ ತಜ್ಙರು /ಮಾರ್ಗದರ್ಶಕರಿದ್ದು, ಅಡ್ವಾನ್ಸ್ಡ್ ಡಿಜಿಟಲ್ ಲೈಬ್ರರಿ ಮತ್ತು ಮಕ್ಕಳ ಅರಿವಿನ ಕೇಂದ್ರ (ಕಾಗ್ನಿಟಿವ್ ಕಿಡ್ಸ್ ಕಾರ್ನರ್) ಎರಡನ್ನೂ ನಗರದಾದ್ಯಂತ ಇರುವ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಅಳವಡಿಸುವಂತೆ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ವಿನಂತಿಸಿದ್ದೇನೆ “ ಎಂದು ತಿಳಿಸಿದರು.

ನನ್ನ ಕನಸಿನ ಯೋಜನೆಗಳಾಗಿದ್ದ ಮೇಲಿನ ಎಲ್ಲ ಕಾಮಗಾರಿಗಳು ನನ್ನ ಆಶಯದಂತೆಯೇ ಅನುಷ್ಠಾನಗೊಂಡಿದ್ದು ನನಗೆ ಬಹಳ ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
“ಯಾವುದೇ ಯೋಜನೆಗಳ ಯಶಸ್ಸಿಗೆ ಸಾಮಾಜಿಕ ಜಾಗೃತಿ ಪ್ರಮುಖವಾಗಿದೆ. ಬೆಳಗಾವಿಯ ನಾಗರಿಕರು ಇದರಲ್ಲಿ ಹೆಚ್ಚು ಅಂಕ ಗಳಿಸಿದ್ದಾರೆ. ಮತ್ತು ನಮ್ಮದು ವಿದ್ಯಾವಂತರ ನಗರ. ಬೆಳಗಾವಿ ನಗರದಲ್ಲಿ ‘ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ಗಿಖಿU) ಮತ್ತು ವೈವಿಧ್ಯತೆಗೆ ಹೆಸರುವಾಸಿಯಾಗಿದೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಗಳಿಂದಾಗಿ ನಾವು ಸ್ಥಳೀಯವಾಗಿ ಹಲವಾರು ಪರಿಣಿತರನ್ನು ಕಾಣಬಹುದು. ಬಹು ಆಯಾಮದ ಒಳಗೊಳ್ಳುವಿಕೆ (ಒuಟಣi-ಆimeಟಿsioಟಿಚಿಟ Iಟಿಛಿಟusiveಟಿess) ಈ ಪ್ರಶಸ್ತಿಗೆ ಸೂಕ್ತವಾದ ಶೀರ್ಷಿಕೆಯಾಗಿದೆ. ನಾವು ಎಲ್ಲಾ ಅಂಶಗಳನ್ನು ಒಳಗೊಂಡಿರುವ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ.” ಎಂದು ಬೆಳಗಾವಿ ಉತ್ತರ ಶಾಸಕರಾದ ಶ್ರೀ ಅನಿಲ ಬೆನಕೆರವರು ಹೇಳಿದರು.

ಬೆಳಗಾವಿ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರವೀಣ ಬಾಗೇವಾಡಿ ಅವರು “ಬೆಳಗಾವಿ ಸ್ಮಾರ್ಟಸಿಟಿಗೆ ಈ ಪುರಸ್ಕಾರ ಲಭಿಸಿದ್ದು ತುಂಬ ಸಂತಸ ತಂದಿದ್ದು, ಕಳೆದ 7 ವರ್ಷಗಳಿಂದ ನಮ್ಮ ಎಲ್ಲಾ ಯೋಜನೆಗಳು ವೃದ್ಧರು, ಮಹಿಳೆಯರು, ಮಕ್ಕಳು ಮತ್ತು ವಿಶೇಷಚೇತನರ ಸೌಲಭ್ಯಗಳ ಮೇಲೆ ಕೇಂದ್ರೀಕರಿಸಿವೆ ಮತ್ತು ಈ ಕಾಮಗಾರಿಗಳ ಯಶಸ್ವಿ ಅನುಷ್ಠಾನದಲ್ಲಿ ನಾವು ಸಫಲರಾಗಿದ್ದೇವೆ. ಈ ಪ್ರಶಸ್ತಿಯು ನಮ್ಮ ಅನುಷ್ಠಾನದ ಮೌಲ್ಯೀಕರಣವಾಗಿದೆ. ಇದು ಬೆಳಗಾವಿ ನಾಗರಿಕರ ಸಾಧನೆಯಾಗಿದೆ” ಎಂದರು.
ವಿಶೇಷ ಚೇತನ ಮಗುವಿನ ತಾಯಿಯಾದ ಶ್ರೀಮತಿ ಶೆಟ್ಟಿ ರವರು ಪ್ರತಿಕ್ರಿಯಿಸಿ, “ಬೆಳಗಾವಿ ನಗರಕ್ಕೆ ಈ ಪ್ರಶಸ್ತಿ ಬಂದಿರುವುದರಲ್ಲಿ ನನಗೆ ಆಶ್ಚರ್ಯವಿಲ್ಲ. ನನ್ನ ಮಗುವಿಗೆ ಚಿಕಿತ್ಸೆಗಾಗಿ ಕರೆದುಕೊಂಡು ಬಂದ ತಕ್ಷಣವೇ ಇದೊಂದು ಅದ್ಭುತವಾದ ಯೋಜನೆ ಎಂದು ನನಗೆ ಅನ್ನಿಸಿತ್ತು” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪುರಸ್ಕಾರದ ಕುರಿತು:

ಸ್ಮಾರ್ಟ್ ಸೊಲ್ಯೂಷನ್ಸ್ ಚಾಲೆಂಜ್ ವು ನಗರ-ಮಟ್ಟದ ಸಮಸ್ಯೆ ಮತ್ತು ಸವಾಲುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ನಗರ ವ್ಯವಹಾರಗಳ ಸಂಸ್ಥೆ (ಓIUಂ) ಮತ್ತು ವಿಶ್ವಸಂಸ್ಥೆಯ ಒಂದು ಯೋಜನೆಯ ಭಾಗವಾಗಿದ್ದು. ಈ ಯೋಜನೆಯ ಮೂಲಕ ವಿಶ್ವ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ 11, ಹಾಗೂ 11.7 ಯನ್ನು ಮುಂಬರುವ ‘2030 ರ ಹೊತ್ತಿಗೆ, ಮಹಿಳೆಯರು ಮತ್ತು ಮಕ್ಕಳು, ವೃದ್ಧರು ಮತ್ತು ವಿಶೇಷ ಚೇತನ ವ್ಯಕ್ತಿಗಳಿಗೆ ಸುರಕ್ಷಿತವಾದ ಹಸಿರೀಕರಣ ಮತ್ತು ಸಾರ್ವಜನಿಕ ಸ್ಥಳಗಳಿಗೆ ಸಾರ್ವತ್ರಿಕ ಪ್ರವೇಶವನ್ನು ಒದಗಿಸುವುದಾಗಿದೆ.

ಪುರಸ್ಕಾರದ ಕಾಮಗಾರಿಗಳು: ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಗಳಾದ ‘ರವೀಂದ್ರ ಕೌಶೀಕ ಇ-ಗ್ರಂಥಾಲಯ, ಕಿಡ್ ಜೊನ್, 30 ಹಾಸಿಗೆಯುಳ್ಳ ಹೆರಿಗೆ ಆಸ್ಪತ್ರೆ, 10 ಹಾಸಿಗೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಅಭಿವೃದ್ಧಿ, ಬಿಮ್ಸ್ ಆಸ್ಪತ್ರೆ ಸುಧಾರಣೆ, ಮಹಾತ್ಮ ಫುಲೆ ಉದ್ಯಾನದಲ್ಲಿ ವಿಶೇಷ ಚೇತನ ಮಕ್ಕಳಿಗಾಗಿ ಫಿಜಿಯೋಥೆರಪಿ ಕೇಂದ್ರ ಅಭಿವೃದ್ಧಿ, ಕಣಬರ್ಗಿ ಕೆರೆ ಪುನರುಜ್ಜೀವನ ಇತ್ಯಾದಿ ಕಾಮಗಾರಿಗಳು.

Check Also

ಬೆಳಗಾವಿ ಮಹಾನಗರದ ಅಪಾಯಕಾರಿ ತಂತಿಗಳ ತೆರವು

  ಗಣೇಶೋತ್ಸವ- ಅಪಾಯಕಾರಿ ವಿದ್ಯುತ್ ತಂತಿಗಳ ತೆರವು; ಮಾರ್ಗಗಳ ಎತ್ತರ ಹೆಚ್ಚಳ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಬೆಳಗಾವಿ, -ಗಣೇಶೋತ್ಸವ ಹಿನ್ನೆಲೆಯಲ್ಲಿ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.