ಬೆಳಗಾವಿಯ ಕೋರ್ಟ್ ನಲ್ಲೇ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ ಆರೋಪಿ…

ಬೆಳಗಾವಿ-ಬೆಳಗಾವಿಯ ಜಿಲ್ಲಾ ನ್ಯಾಯಾಲಯದಲ್ಲೇ ಆರೋಪಿಯೊಬ್ಬ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ. ಘಟನೆ ಇಂದು ಬೆಳಗ್ಗೆ ನಡೆದಿದೆ.

ಬೆಳಗಾವಿಯಲ್ಲಿ ಓಪನ್ ಕೋರ್ಟಿನಲ್ಲಿ
ನಟೋರಿಯಸ್ ಪಾತಕಿ ಜಯೇಶ್ ಪೂಜಾರಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಿದ್ದಂತೆ ವಕೀಲರು,ಹಾಗು ಕೋರ್ಟಿನಲ್ಲಿದ್ದ ಸಾರ್ವಜನಿಕರು ಘೋಷಣೆ ಕೂಗಿದ ಆರೋಪಿಗೆ ಧರ್ಮದೇಟು ನೀಡಿದ್ದಾರೆ ಥಳಿಸಿ ಆತನಿಗೆ ಪಾಠ ಕಲಿಸಿದ್ದಾರೆ.

ಕೋರ್ಟ್ ಒಳ ಭಾಗದಲ್ಲೇ ಸಾರ್ವಜನಿಕರು ವಕೀಲರು ಘೋಷಣೆ ಕೂಗಿದವನ ಮೇಲೆ ತಕ್ಷಣವೇ ದಾಳಿ ಮಾಡಿ ಆತನಿಗೆ ಧರ್ಮದೇಟು.ಏಟು ನೀಡ್ತಿದ್ದಂತೆ ಪೋಲೀಸರು ಆರೋಪಿ ರಕ್ಷಣೆ ಮಾಡಿ ತಮ್ಮ ವಶಕ್ಕೆ ಪಡೆದಿದ್ದಾರೆ.

ಆರೋಪಿಯನ್ನು ಹೊರ ಕರೆದುಕೊಂಡು ಬಂದ ಪೊಲೀಸರು.
ಕೂಡಲೇ ಎಪಿಎಂಸಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಇಂದು ಕೋರ್ಟಿನಲ್ಲೇ ಘೋಷಣೆ ಕೂಗಿರುವ ಈ ಆರೋಪಿ ಜೈಲಿನಲ್ಲಿ ಇದ್ದುಕೊಂಡೇಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಗೆ ಜೀವ ಬೆದರಿಕೆ ಹಾಕಿದ್ದ
ಹಿಂಡಲಗಾ ಜೈಲಿನಲ್ಲಿದ್ದುಕೊಂಡು ಜೀವ ಬೆದರಿಕೆ ಹಾಕಿದ್ದ ಕೇಸ್ ಸಲುವಾಗಿ ಆರೋಪಿಯನ್ನು ಕೋರ್ಟ್ ಗೆ ತಂದಿದ್ದ ಪೊಲೀಸರು.

ಈ ಹಿಂದೆ ಕೇಂದ್ರ ಸಚಿವ ನಿತಿನ್ ಗಡ್ಕರಿಗೂ ಜೈಲಿನಿಂದ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದ ಜಯೇಶ್ ಪೂಜಾರಿ.
ಕೋರ್ಟ್ ನಲ್ಲಿ ತನ್ನ ಅಹವಾಲು ಸ್ವೀಕರಿಸುತ್ತಿಲ್ಲ ಅಂತಾ ಪಾಕ್ ಪರ ಘೋಷಣೆ ಕೂಗಿ ವಿಕೃತಿಯನ್ನು ಹೊರಗೆ ಹಾಕಿದ್ದಾನೆ.

Check Also

ಮೂವತ್ತು ವರ್ಷಗಳ ನಂತರ ರಾಜಕೀಯ ವೈರಿಗಳ ಮಿಲನ.!!!

  ಬೆಳಗಾವಿ- ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ.ಕಳೆದ ಮೂರು ದಶಕಗಳಿಂದ ರಾಜಕೀಯ ಕಡುವೈರಿಗಳಾಗಿದ್ದ ಕತ್ತಿ ಕುಟುಂಬ ಹಾಗೂ …

Leave a Reply

Your email address will not be published. Required fields are marked *