ಬೆಳಗಾವಿ ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಿಟಿ ರವಿ ವಿರುದ್ಧ,ಯಾವುದಕ್ಕೂ ಕಾರಣಕ್ಕೂ ಸಿಟಿ ರವಿ ಕ್ಷಮಿಸುವ ಪ್ರಮೇಯ ಇಲ್ಲ,ಅವರಿಗೆ ಶಿಕ್ಷೆ ಆಗುವವರೆಗೂ ಬಿಡುವುದಿಲ್ಲ,ಸಿಎಂ ಮತ್ತು ಸಭಾಪತಿ ಅವರು ತನಿಖೆ ಮಾಡಬೇಕು,ಬೇಗ ಎಫ್‌ಎಸ್‌ಎಲ್ ರಿಪೋರ್ಟ್ ತರಿಸಿಕೊಳ್ಳಬೇಕು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗುಡುಗಿದ್ದಾರೆ.
ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ್,ಒಬ್ಬರು ಯಾರಾದ್ರೂ ಕ್ಷಮೆ ಕೇಳಿದ್ರಾ ? ಮೆರವಣಿಗೆ ಮಾಡಿಕೊಳ್ತಾರಾ ಇವರಿಗೆ.
ಎನಾಗಿದೆ ಅವರಿಗೆ ಎಷ್ಟು ಹೊಲಿಗೆ ಬಿದ್ದಿದೆ,ಸಿಟಿ ರವಿಯವರೇ ನನಗೆ ಆ ಪದ ಬಳಸಿದೀರಿ.
ಇಂತಹ ನೂರು ಸಿಟಿ ರವಿ ಬಂದ್ರೂ ನಾನು ಎದುರಿಸುತ್ತೇನೆ,ನನ್ನ ಬಳಿ ದಾಖಲೆ ಇವೆ ನಾನು ಇಂದೇ ಬಿಡುಗಡೆ ಮಾಡ್ತೇನಿ,ನಿಮಗೆ ನಾಚಿಗೆ ಆಗಬೇಕು ಎನ್ ಕೌಂಟರ್ ಮಾಡೋದು ಅಂತೀರಾ.
ರಾಜಕಾರಣ ಮಾಡಲು ಹೊರಟ್ಟಿದೀರಿ,ಇಡೀ ಕರ್ನಾಟಕ ರಾಜ್ಯದ ಜನರು ಛೀಮಾರಿ ಹಾಕ್ತಿದ್ದಾರೆ,ಕಾನೂನು ಪ್ರಕಾರ ಪೊಲೀಸರ ಎನೂ ಮಾಡಬೇಕು ಮಾಡಿದ್ದಾರೆ.
ಮೂಲ ಕಾರಣ ಎನೂ ಯಾವುದಕ್ಕೋಸ್ಕರ ಎಫ್‌ಐಆರ್ ಮಾಡಿದ್ದಾರೆ.ನಾಚಿಗೆ ಆಗಬೇಕು ನಿಮಗೆ ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿಲ್ವಾ.ದೇವರ ಹತ್ರಾ ಹೋಗಿ ನಿಂತ್ಕೊಳ್ತಿರಿ ನಿಮಗೆ ನಾಚಿಗೆ ಆಗಬೇಕು.
ಕಾನೂನು ಹೋರಾಟ ಮಾಡುತ್ತೇನೆ,ಪ್ರಧಾನಿ ಮೋದಿ, ರಾಷ್ಟ್ರಪತಿಗೆ ಪತ್ರ ಬರೆಯುತ್ತೇನೆ.
ಅವಕಾಶ ಸಿಕ್ರೇ ಪ್ರಧಾನಿ ಮೋದಿಯವರನ್ನೇ ಭೇಟಿ ಆಗ್ತೇನಿ ಎಂದು ಹೆಬ್ಬಾಳಕರ್ ಹೇಳಿದ್ದಾರೆ.
ರಾಜಕಾರಣದಲ್ಲಿ ಹಿಂದಕ್ಕೆ ಸರಿಸಬೇಕು ಅಂತಾ ಮಾಡಿದ್ದಾರೆ,ನಾವಿದ್ರಿಂದ ಮನೆಯಲ್ಲಿ ಕುಳಿತುಕೊಳ್ತೇವಿ ನೊಂದುಕೊಳ್ತೇವಿ.ಅಂತಾ ಅಂದುಕೊಂಡ್ರೇ ನೀವು ಬಿಟ್ಟು ಬಿಡಿ,ಇಡೀ ಬಿಜೆಪಿಯವರನ್ನ ನೋಡಿದ್ರೇ ಇಡೀ ಬಿಜೆಪಿಯಲ್ಲಿರುವವರೇ ದೃತರಾಷ್ಟ್ರರೇ. ಎಂದು ಪ್ರಶ್ನಿಸಿದ ಅವರು,ರಾಜಾರೋಷವಾಗಿ ಓಡಾಡ್ತಿದೀರಿ ತಮಗೆ ಅಭಿನಂದನೆಗಳು.ಲಕ್ಷ್ಮೀ ಹೆಬ್ಬಾಳ್ಕರ್ ನಾನು ಸುಮ್ಮನೆ ಕುಳಿತುಕೊಳ್ಳುವ ಹೆಣ್ಣು ಮಗಳಲ್ಲ,ಹೋರಾಟ ಮಾಡುತ್ತೇನೆ.ಪ್ರತಿಯೊಬ್ಬರೂ ನಮ್ಮ ಜೊತೆಗೆ ಇದ್ದಾರೆ.
ಪ್ರಿಯಾಂಕಾ ಗಾಂಧಿ ಹಿಡಿದುಕೊಂಡು ಎಲ್ಲರೂ ಪೋನ್ ಮಾಡಿ ಮಾತಾಡಿದ್ದಾರೆ.ಸಿಎಂ ಅವರು ನಿನ್ನೆ ಮೊನ್ನೆ ಕರೆ ಮಾಡಿ ನನ್ನ ಜೊತೆಗೆ ಮಾತಾಡಿದ್ದಾರೆ. ಎಂದರು.
ಮಹಿಳೆ ನನ್ನ ಜೊತೆಗೆ ಇದ್ದಾರೆ,ಚಿಕ್ಕಮಗಳೂರಿಗೆ ಬಂದು ನಿಮ್ಮ ಮನೆ ಹೆಣ್ಣು ಮಕ್ಕಳಿಗೆ ನೀವು ಹೇಳಿದ ಮಾತು ಅಂದ್ರೆ ಸುಮ್ಮನಿರ್ತಿರಾ.ಒಬ್ಬರೇ ಇದ್ದಾಗ ಕುಳಿತು ಯೋಚನೆ ಮಾಡಿ ಸಿಟಿ ರವಿ ಎಂದ ಲಕ್ಷ್ಮೀ ಹೆಬ್ಬಾಳಕರ್,ದೇಶದ ಜನರ ಎದುರುಗಡೆ ಸದನದ ಗೌರವವನ್ನ.ನಾಗರಿಕ ಸಮಾಜ ತಲೆ ತಗ್ಗಿಸುವ ಕೆಲಸ ಎಂಎಲ್ಸಿ ಸಿಟಿ ರವಿ ಮಾಡಿದ್ದಾರೆ.
ಇಡೀ ಮಹಿಳಾ ಕುಲದ ಶಾಪ ನಿಮಗೆ ತಟ್ಟದೇ ಬಿಡುವುದಿಲ್ಲ.ಪರಿಷತ್ ನಲ್ಲಿ ಡ್ರಗ್ ಎಡಿಕ್ಟ್ ರಾಹುಲ್ ಗಾಂಧಿ ಅಂತಾ ಡ್ಯಾನ್ಸ್ ಮಾಡ್ತಿದ್ರೀ.
ಹೀಗೆ ಮಾಡುವಾಗ ನಾನು ಸುಮ್ಮನೆ,ಕುಳಿತುಕೊಳ್ಳಬೇಕಾ.ರವಿಕುಮಾರ್ ಅವರಿಗೆ ಹೊಳ್ಳಿ ಹೊಳ್ಳಿ ಹೇಳಿದ್ದಕ್ಕೆ ನಾನು ರಿಯಾಕ್ಟ್ ಮಾಡಿದೆ.
ನಿಮಗೆ ಕೊಲೆಗಾರ ಅಂದಿದಕ್ಕೆ ನನಗೆ ಆ ಮಾತು ಹೇಳಿದ್ರಿ.ನಿಮ್ಮ ನಾಟಕ ಎನೂ? ಅಷ್ಟು ದೊಡ್ಡ ಪಟ್ಟಿ ಕಟ್ಟಿಕೊಂಡಿದಿರಿ.ಅಬ್ಬಾಬ್ಬಾಬಾ ಅಂತಾ ಸಿಟಿ ರವಿ ವಿರುದ್ಧ ಹೆಬ್ಬಾಳ್ಕರ್ ಆಕ್ರೋಶ ವ್ಯಕ್ತಪಡಿಸಿದರು.
ದೇವರ ನ್ಯಾಯಾಲಯ ಇದೆ. ದೇವರು ನೋಡಿಕೊಳ್ಳುತ್ತಾನೆ.
ಬೈಟ್ ಮಧ್ಯದಲ್ಲೇ ಸಿಟಿ ರವಿ ಹೇಳಿದ ವಿಡಿಯೋ ಆಡಿಯೋ ರಿಲೀಸ್ ಮಾಡಿದ ಹೆಬ್ಬಾಳ್ಕರ್.