ಬೆಳಗಾವಿ -ಇತ್ತೀಚಿಗೆ ಬೆಳಗಾವಿಯ ಸಮರ್ಥ ನಗರದಲ್ಲಿ ಮನೆಯ ಕಳ್ಳತನ ನಡೆದ ಬಗ್ಗೆ ಬೆಳಗಾವಿಯ ಮಾರ್ಕೆಟ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು,ತನಿಖೆ ಶುರು ಮಾಡಿದ ಪೋಲೀಸರು ಕಳುವಾದ ಚಿನ್ನಾಭರಣಗಳ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.
ಕಳುವಾಗಿದ್ದ 231 ಗಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದು ನಿಪ್ಪಾಣಿಯ ನಿವಾಸಿ ಆರೋಪಿ ಯಾಸೀನ ಹಾಸೀಮ ಶೇಖ 23 ಎಂಬಾತನನ್ನು ಬಂಧಿಸಲಾಗಿದ್ದು ಈತ ಕಳವು ಮಾಡಿದ್ದ 231 ಗ್ರಾಂ ಚಿನ್ನಾಭರಣ ಮತ್ತು 140 ಬೆಳ್ಳಿಯ ಆಭರಣಗಳು ಸೇರಿದಂತೆ ಹತ್ತು ಲಕ್ಷಕ್ಕೂ ಹೆಚ್ವು ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಾರ್ಕೆಟ್ ಎಸಿಪಿ ನಾರಾಯಣ ಭರಮಣಿ ಅವರ ನೇತ್ರತ್ವದಲ್ಲಿ ಪಿಐ ಮಹಾಂತೇಶ ದಾಮಣ್ಣವರ ಪಿಎಸ್ಐ ವಿಠ್ಠಲ ಹಾವಣ್ಣವರ ಹಾಗೂ ಮಾರ್ಕೆಟ್ ಪೋಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ಪ್ರಕರಣವನ್ನು ಭೇದಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ