ಬೆಳಗಾವಿ- ಬೆಳಗಾವಿ ನಗರ ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಸೇರಿ ಎರಡುವರೆ ವರ್ಷಗಳ ಸುಧೀರ್ಘ ಅವಧಿಯ ನಂತರ ಬೆಳಗಾವಿಯಲ್ಲಿ ಇಂದು ಸ್ಮಾರ್ಟ್ ಸಿಟಿ ಕೆಲಸ ಶುಭಾರಂಭಗೊಂಡಿತು
ಬೆಳಗಾವಿಯ ಕೆಪಿಟಿಸಿಎಲ್ ರಸ್ತೆಯ ಹೈಟೆಕ್ ಗೊಳಿಸುವ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ಕೊಟ್ಟರು
ಶಾಸಕ ಫಿರೋಜ್ ಸೇಠ,ಪಾಲಿಕೆ ಆಯುಕ್ತ ಶಶಿಧರ ಕುರೇರ ಸೇರಿದಂತೆ ಜಿಲ್ಲೆಯ ಅಧಿಕಾರಿಗಳು ಗಣ್ಯರು ಭಾಗವಹಿಸಿದ್ದರು
ಸ್ಮಾರ್ಟ್ ಸಿಟಿ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ ರಾಜ್ಯ ಸರ್ಕಾರ ಬೆಳಗಾವಿ ನಗರದ ಸರ್ವಾಂಗೀಣ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದೆ ರಾಜ್ಯ ಸರ್ಕಾರದ ಸುಮಾರು ಒಂದು ಸಾವಿರ ಕೋಟಿ ರೂ ಅನುದಾನದ ಕಾಮಗಾರಿಗಳು ಈಗಾಗಲೇ ಬೆಳಗಾವಿ ನಗರದಲ್ಲಿ ನಡೆಯುತ್ತವೆ ಸ್ಮಾರ್ಟ್ ಸಿಟಿ ಯೋಜನೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಫಿಪ್ಟಿ – ಫಿಪ್ಟಿ ಅನುದಾನ ದಲ್ಲಿ ನಡೆಯುತ್ತಿದೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಮೊದಲನೇಯದಾಗಿ ಕೆಪಿಟಿಸಿಎಲ್ ರಸ್ತೆಯನ್ನು ಸ್ಮಾರ್ಟ್ ಮತ್ತು ಹೈಟೆಕ್ ಮಾಡಲಾಗುತ್ತಿದೆ ಇದಾದ ಬಳಿಕ ಮಂಡೊಳ್ಳಿ ರಸ್ತೆಯನ್ನು ಅಭವೃದ್ಧಿ ಪಡಿಸುತ್ತೇವೆ ಎಂದು ರಮೇಶ ಜಾರಕಿಹೊಳಿ ಹೇಳಿದರರು
ಕೇಂದ್ರದ ಅನುದಾನ ಕ್ಕಿಂತಲೂ ರಾಜ್ಯ ಸರ್ಕಾರ ಬೆಳಗಾವಿ ಅಭಿವೃದ್ಧಿಗೆ ಹೆಚ್ವಿನ ಅನುದಾನ ನೀಡಿದೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಾಜ್ಯ ಸರ್ಕಾರದ ಸಾಧನೆಗಳು ನೋಡಿ ಸಹಿದಲಾಗದೇ ಹತಾಷರಾಗಿ ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಚುನಾವಣೆ ಫಲಿತಾಂಶ ಹೊರ ಬಂದ ಬಳಿಕ ಯಡಿಯೂರಪ್ಪ ರಾಜಕೀಯವಾಗಿ ಅಸ್ವಸ್ಥರಾಗೋದು ಗ್ಯಾರಂಟಿ ಎಂದು ಸಚಿವ ರಮೇಶ್ ಜಾರಕಿಹೊಳಿ ಯಡಿಯೂರಪ್ಪ ಅವರಿಗೆ ತಿರಗೇಟು ನೀಡಿದ್ರು
ಯಡಿಯೂರಪ್ಪ ಯಾತ್ರೆ ಪ್ಲಾಪ್ ಶೋ ಆಗಿದೆ. ಬಿಜೆಪಿ ಪರಿವರ್ತನಾ ಯಾತ್ರೆ ಬಳಿಕ ಬಿಎಸವೈ ಮಾನಸಿಕ ವಾಗಿ ಕುಗ್ಗಲಿದ್ದಾರೆ. ಯಾತ್ರೆಯಲ್ಲಿ ಬಿಎಸವೈ ಹೇಳಿಕೆಗಳಿಂದ ಗಲಾಟೆ ಆಗುತ್ತಿವೆ.ನಿನ್ನೆ ಇಂಡಿ ತಾಲ್ಲೂಕಿನ ಬಿಜೆಪಿ ಯಾತ್ರೆ ಗಲಾಟೆ ಸಾಕ್ಷಿ.
ಇನ್ನು ದಕ್ಷಿಣದ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಬಿಜೆಪಿಯವರ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಜಾತಿ ರಾಜಕಾರಣ ಕೈಗೂಡುವುದಿಲ್ಲ.
ಸಿಎಂ ಸಿದ್ದರಾಮಯ್ಯ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ.
ಮತ್ತೆ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬರಲಿದೆ. ಬೆಳಗಾವಿ ಜಿಲ್ಲೆಯಲ್ಲಿ ೧೦ಅಧಿಕ ಸ್ಥಾನ ಕಾಂಗ್ರೆಸ್ ಗೆಲ್ಲಲಿದೆ.
೧೦ ಕ್ಕಿಂತ ಕಡಿಮೆ ಸ್ಥಾನ ಬಂದ್ರೆ ನಾನು ರಾಜಕೀಯ ನಿವೃತ್ತಿ ಪಡೆಯುವೆ ಎಂದ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ
ಎರಡೂ ವರೆ ವರ್ಷದ ನಂತರ ಅನೇಕ ತಾಂತ್ರಿಕ ತೊಂದರೆಗಳನ್ನು ಎದುರಿಸಿ ಅನೇಕ ಅಡೆ ತಡೆಗಳನ್ನು ನಿವಾರಿಸಿದ ಪಾಲಿಕೆ ಆಯುಕ್ತ ಮತ್ತು ಸ್ಮಾರ್ಟ್ ಸಿಟಿ ಯೋಜನೆಯ ವಿಶೇಷ ಅಧಿಕಾರಿಯಾಗಿರುವ ಶಶಿಧರ ಕುರೇರ ಕೊನೆಗೂ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳಿಗೆ ಚಾಲನೆ ನೀಡುವಲ್ಲಿ ಸಫಲರಾಗಿದ್ದಾರೆ