Breaking News

ಬೆಳಗಾವಿಯಲ್ಲಿ ಈದ್ ಮಿಲಾದ್ ಸಂಬ್ರಮ…

ಬೆಳಗಾವಿ- ಪ್ರವಾದಿ ಮಹ್ಮದ ಪೈಗಂಬರ ಅವರ ಜಯಂತಿಬಾರದು ವದ ನಿಮಿತ್ಯ ಆಚರಿಸಲಾಗುವ ಈದ್ ಮಿಲಾದ್ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯುತು

ಬೆಳಗಾವಿಯ ಫೋರ್ಟ್ ರಸ್ತೆಯ ಮಸೀದಿ ಬಳಿ ಈದ್ ಮಿಲಾದ ಹಬ್ಬದ ನಿಮಿತ್ಯ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಫಿರೋಜ್ ಸೇಠ,ರಾಜು ಸೇಠ ಫೈಜಾನ್ ಸೇಠ ನಗರ ಸೇವಕ ರಮೇಶ ಕಳಸಣ್ಣವರ, ವಿಕಾಸ ಕಲಘಟಗಿ ಡಿಸಿಪಿ ಅಮರನಾಥ ರೆಡ್ಡಿ ಸೇರಿದಂತೆ ಹಲವಾರು ಜನ ಗಣ್ಯರು ಭಾಗವಹಿಸಿದ್ದರು
ಮುಫ್ತಿ ಮಂಜೂರ ಆಲಂ ಅವರು ಮಹ್ಮದ ಪೈಗಂಬರ ಅವರ ಬದುಕು ಮತ್ತು ಅವರ ಸಂದೇಶದ ಕುರಿತು ವಿಶೇಷ ಉಪನ್ಯಾಸ ನೀಡಿದ್ರು ಮಹ್ಮದ ಪೈಗಂಬರ ಅವರ ಬದುಕೇ ಒಂದು ಸಂದೇಶವಾಗಿದೆ ಮಾನವಕುಲ ಹೇಗಿರಬೇಕು ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನ ಜೊತೆ ಯಾವ ರೀತಿ ನಡೆದುಕೊಳ್ಳಬೇಕು ಬದುಕು ಹೇಗಿರಬೇಕು ಅನ್ನೋದನ್ನು ಮಹ್ಮದ ಪೈಗಂಬರ ಅವರು ಬದುಕಿ ಆಚರಣೆಯ ಮೂಲಕ ಮಾನವ ಕುಲಕ್ಕೆ ಸಂದೇಶ ನೀಡಿದ್ದಾರೆ ಇಸ್ಲಾಂ ಧರ್ಮದ ಸಿದ್ಧಾಂತ ಮತ್ತು ಸಂದೇಶವನ್ನು ನಾವು ಮಹ್ಮದ ಪೈಗಂಬರ ಅವರ ಬದುಕಿನಲ್ಲಿ ನೀಡಬಹುದಾಗಿದೆ ಎಂದು ಮುಫ್ತೀ ಮಂಜೂರ ಆಲಂ ಹೇಳಿದರು
ದೇಶದ ಹಿಂದಿ ಸುದ್ಧಿ ವಾಹಿನಿಯೊಂದು ಮಹ್ಮದ ಪೈಗಂಬರ ಅವರ ಬಗ್ಗೆ ಅವಹೇಳನಕಾರಿಯಾಗಿ ಸುದ್ಧಿ ಮಾಡಿದೆ ಈ ಸುದ್ಧಿ ವಾಹಿನಿಯ ವಿರುದ್ಧ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ದೇಶಾದ್ಯಂತ ಮುಸ್ಲೀಂ ರು ಹೋರಾಟ ಮಾಡಬೇಕಾಗುತ್ತದೆ ಎಂದು ಮುಫ್ತೀ ಮಂಜೂರ ಆಲಂ ಎಚ್ಚರಿಕೆ ನೀಡಿದರು
ಶಾಸಕ ಸೇಠ ಮಾತನಾಡಿ ಕೆಲವು ಕಿಡಗೇಡಿಗಳು ಮುಸ್ಲೀಂ ಸಮಾಜದ ಯುವಕರನ್ನು ಪ್ರಚೋದಿಸಿ ಅವರನ್ನು ತಪ್ಪು ದಾರಿಗೆಳೆಯುವ ನೀಚ ಕೆಲಸಕ್ಕೆ ಕೈ ಹಾಕಿದ್ದಾರೆ ಕಿಡಗೇಡಿಗಳ ಮಾತಿಗೆ ಕಿವಿಗೊಡದೇ ಯುವಕರು ಸಮಾಜದಲ್ಲಿ ಶಾಂತಿ ಕಾಪಾಡಬೇಕು ಮೈಕ್ ಹಿಡಿದು ಯಾರೋ ಏನೋ ಬೊಗಳಿದರೆ ಅದಕ್ಕೆ ಮಹತ್ವ ಕೂಡ ಬಾರದು ಎಂದು ಶಾಸಕ ಸೇಠ ಯುವಕರಲ್ಲಿ ಮನವಿ ಮಾಡಿಕೊಂಡರು

ಈದ್ ಮಿಲಾದ್ ನಿಮಿತ್ಯ ನಗರದ ಪೋರ್ಟ ರಸ್ತೆಯಿಯಿಂದ ಭವ್ಯ ಮೆರವಣಿಗೆ ಹೊರಡಿಸಲಾಗಿತ್ತು ಮೆರವಣಿಗೆಯಲ್ಲಿ ಮಹ್ಮದ ಪೈಗಂಬರ ಅವರ ಸಂದೇಶ ಸಾರುವ ರೂಪಕಗಳು ಪಾಲ್ಗೊಂಡಿದ್ದವು ಪೈಗಂಬರರ ಸಂದೇಶ ಸಾರುವ ಪ್ರಾರ್ಥನಾ ಗೀತೆಗಳು ಮೊಳಗಿದವು ಮೆರವಣಿಗೆಯಲ್ಲಿ ಸಹಸ್ರಾರು ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು
ಮೆರವಣಿಗೆ ಫೋರ್ಟ ರಸ್ತೆಯಿಂದ ಆರಂಭಗೊಂಡು ಹಳೆ ಪಿಬಿ ರಸ್ತೆಯ ಮೂಲಕ ಹಾಯ್ದು ರಾಯಣ್ಣ ಸರ್ಕಲ್ ಚನ್ನಮ್ಮ ಸರ್ಕಲ್ ಮೂಲಕ ಸಂಚರಿಸಿ ಕ್ಯಾಂಪ್ ನಲ್ಲಿರುವ ಅಸದಖಾನ್ ದರ್ಗಾ ತಲುಪಿತು
ಮೆರವಣಿಗೆ ಮಾರ್ಗದಲ್ಲಿ ಭಕ್ತರು ಶರಬತ ಲಾಡು ಸೇರಿದಂತೆ ವಿವಿಧ ಸಿಹಿ ಪದಾರ್ಥಗಳನ್ನು ಹಂಚುವ ದೃಶ್ಯ ಸಾಮಾನ್ಯವಾಗಿತ್ತು

ಅಸದಖಾನ್ ದರ್ಗಾ ಆವರಣದಲ್ಲಿ ಡಾ” ಮಕಾನದಾರ ಮತ್ತು ಅಮಜದಖಾನ್ ಪಠಾಣ ಅವರು ಸಾವಿರಾರು ಜನರಿಗೆ ಪ್ರಸಾದದ ವ್ಯೆವಸ್ಥೆ ಮಾಡಿದ್ದರು

ಫೋರ್ಟ ರಸ್ತೆಯಲ್ಲಿ ನಡೆದ ಕಾರ್ಯಕ್ರಮವನ್ನು ತಂಜೀಮ ಕಮೀಟಿಯ ಮಹ್ಮದ ಪೀರಜಾದೆ ಆಯೋಜಿಸಿದ್ದರು

Check Also

ಬೆಳಗಾವಿ- ಗೋಕಾಕ್ ರಸ್ತೆಯಲ್ಲಿ ಪೋಲೀಸರಿಗೆ ಸಿಕ್ಕಿದ್ದೇನು ಗೊತ್ತಾ.?

ಬೆಳಗಾವಿ- ಬೆಳಗಾವಿ- ಗೋಕಾಕ್ ರಸ್ತೆಯಲ್ಲಿ ಬೆಳಗಾವಿಗೆ ಸಾಗಿಸಲಾಗುತ್ತಿದ್ದ ಗಾಂಜಾ ,ಬೆಳಗಾವಿಯ ಸಿಇಎನ್ ಸೈಬರ್ ಕ್ರೈಂ ಪೋಲೀಸರು ವಶಪಡಿಸಿಕೊಂಡಿದ್ದಾರೆ. ಬೆಳಗಾವಿ ನಗರದ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.