Breaking News

ರಾತ್ರಿ ಮಠದಲ್ಲಿ ಲೇಡಿ……..ಗ್ರಾಮಸ್ಥರಿಂದ ಮುತ್ತಿಗೆ ಮಠದಿಂದ ಸ್ವಾಮೀಜಿ ಉಚ್ಛಾಟನೆ

ಮೂಡಲಗಿ : ತಾಲೂಕಿನ ಶಿವಾಪೂರ(ಹ) ಗ್ರಾಮದ ಅಡವಿ ಸಿದ್ದೇಶ್ವರ ಮಠದ ಅಡವಿಸಿದ್ದರಾಮ ಸ್ವಾಮೀಜಿಯ ಅಕ್ರಮ ಸಂಭಂದದ ಆರೋಪದ ಹಿನ್ನಲೆ ಇಡೀ ಗ್ರಾಮಸ್ಥರು ಮಠದಿಂದ ಹೊರಹಾಕಬೇಕೆಂಬ ಒತ್ತಡದ ಹಿನ್ನೆಲೆ ಅಡವಿಸಿದ್ದರಾಮ ಸ್ವಾಮಿಯನ್ನು ಗ್ರಾಮದ ಹಿರಿಯರು ಮಠದಿಂದ ಉಚ್ಛಾಟಿಸಿರುವ ಘಟನೆ ರವಿವಾರದಂದು ನಡೆಸಿದೆ.

ಘಟನೆ ವಿವರ : ಶನಿವಾರದಂದು ಬಿಜಾಪುರ ಜಿಲ್ಲೆಯ ತಾಳಿಕೋಟಿಯ ಮಹಿಳೆ ತನ್ನ ಮಗಳೊಂದಿಗೆ ಅಡವಿ ಸಿದ್ದೇಶ್ವರ ಮಠಕ್ಕೆ ಆಗಮಿಸಿದರು ಎನ್ನಲಾಗುತ್ತಿದೆ. ರಾತ್ರಿ 10 ಗಂಟೆಗೆ ಸುಮಾರಿಗೆ ಸ್ಥಳೀಯ ಯುವಕರು ಸ್ವಾಮೀಜಿಯ ಕೊಠಡಿಯೊಳಗೆ ಆ ಮಹಿಳೆ ಇರುವುದನ್ನು ನೋಡಿ ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಸ್ವಾಮಿಯನ್ನ ಹಾಗೂ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ಜರುಗಿದೆ.

ಗ್ರಾಮದ ಪ್ರಮುಖರು ರಾತ್ರಿ ವೇಳೆ ಮಠದಲ್ಲಿ ಯಾರು ಇಲ್ಲದ ವೇಳೆ ಆ ಮಹಿಳೆ ತಮ್ಮ ಕೊಠಡಿಯೊಳಗೆ ಇರುವುದು ಯಾಕೆ ಎಂದು ಸ್ವಾಮೀಜಿಯನ್ನ ಪ್ರಶ್ನಿಸಿದ್ದಾರೆ. ಇದಕ್ಕೆ ಸ್ವಾಮೀಜಿ ವೇಳೆಯಾಗಿದ್ದರಿಂದ ಇಲ್ಲೇ ಉಳಿದುಕೊಂಡಿದ್ದಾರೆ ಎಂದು ಹೇಳಿದ ಅವರು, ನಾನು ಯಾವುದೇ ತಪ್ಪನು ಮಾಡಿಲ್ಲ ಮನವರಿಕೆ ಮಾಡಿದರು ಅದಕ್ಕೆ ಒಪ್ಪದ ಗ್ರಾಮಸ್ಥರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ತಡರಾತ್ರಿ ಆ ಮಹಿಳೆ ಮತ್ತು ಅವಳ ಮಗಳನ್ನು ಸಾಂತ್ವಾನ ಕೇಂದ್ರಕ್ಕೆ ಬಿಟ್ಟಿದ್ದಾರೆ.

ರವಿವಾರದಂದು ಇಡೀ ಗ್ರಾಮಸ್ಥರು ಮಠದಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಯಾವುದೇ ಕಾರಣಕ್ಕೂ ಸ್ವಾಮೀಜಿ ಮಠದಲ್ಲಿ ಇರಲು ಅವಕಾಶ ಕೊಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆ ಸ್ವಾಮೀಜಿಯನ್ನು ಮಠದಿಂದ ಹೊರಹಾಕಿದ ಘಟನೆ ಜರುಗಿದೆ.

ಈ ಸಂದರ್ಭದಲ್ಲಿ ಸಿಪಿಐ ಶ್ರೀಶೈಲ್ ಬ್ಯಾಕೋಡ್, ಪಿಎಸ್ಐ ರಾಜು ಪೂಜೇರಿ ಹಾಗೂ ಗ್ರಾಮದ ಮುಖಂಡರು ಮತ್ತು ಗ್ರಾಮಸ್ಥರು ಇದ್ದರು.

Check Also

ನೌಕರಿಯಿಂದ ವಜಾ, ಯುವಕನ ಆತ್ಮಹತ್ಯೆ

ಬೆಳಗಾವಿ-ಕೆಲಸದಿಂದ ವಜಾ ಮಾಡಿದಕ್ಕೆ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲ್ಲೂಕಿನಲ್ಲಿ ನಡೆದಿದೆ. ರವಿ ವೀರನಗೌಡ ಹಟ್ಟಿಹೊಳಿ (24) …

Leave a Reply

Your email address will not be published. Required fields are marked *