ಬೆಳಗಾವಿ-ಪೊಲೀಸ್ ಠಾಣೆಗೆ ಹೋದ ವಕೀಲನಿಗೆ ಮಾಳಮಾರುತಿ ಠಾಣೆಯ ಸಿಪಿಐ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆಂದು ಆರೋಪಿಸಿ ವಕೀಲರು ಇಂದು ಸುಮಾರು 3 ಗಂಟೆಗಳ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಇಂದು ದಿಢೀರ್ ರಸ್ತೆಗಳಿದ ವಕೀಲರು ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆಯಲ್ಲಿ ಪ್ರತಿಙಟಿಸಿದರು.ಬೆಳಗಾವಿಯ ಮಾಳಮಾರುತಿ ಠಾಣೆ ಸಿಪಿಐ ವಿರುದ್ಧ ವಕೀಲರ ಪ್ರತಿಭಟನೆ ನಡೆಸಿ,ಬೆಳಗಾವಿ ಜಿಲ್ಲಾ ನ್ಯಾಯಾಲಯದ ಎದುರು ರಸ್ತೆ ತಡೆದು ವಕೀಲರ ಧರಣಿ ಶುರು ಮಾಡಿದ್ರು.
ಮಾಳಮಾರುತಿ ಸಿಪಿಐ ಸುನಿಲ್ ಪಾಟೀಲ್ ವಿರುದ್ಧ ಕ್ರಮ ಕೈಗಿಳ್ಳುವವರೆಗೂ ಪ್ರತಿಭಟನೆ ನಿಲ್ಲಿಸುವದಿಲ್ಲ ಎಂದು ವಕೀಲರು ಪಟ್ಟು ಹಿಡಿದರು. ಸ್ಥಳಕ್ಕೆ ಡಿಸಿ ಎಂ.ಜಿ.ಹಿರೇಮಠ, ಡಿಸಿಪಿ ವಿಕ್ರಂ ಆಮಟೆ ಭೇಟಿ ನೀಡಿ,ಪ್ರತಿಭಟನಾನಿರತ ವಕೀಲರ ಮನವೊಲಿಕೆಗೆ ಪ್ರಯತ್ನಿಸಿದರೂ ವಕೀಲರು ಪಟ್ಟು ಮುಂದುವರೆಸಿದರು.
ಸ್ಥಳಕ್ಕೆ ಸಿಪಿಐ ಸುನಿಲ್ ಪಾಟೀಲ್ ಆಗಮಿಸಿ ಕ್ಷಮೆ ಕೋರುವಂತೆ ವಕೀಲರ ಪಟ್ಟು ಹಿಡಿದು ರಸ್ತೆ ತಡೆ ಮುಂದುವರೆಸಿದರು.
ನಂತರ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಅವರ ಸಮ್ಮುಖದಲ್ಲಿ ಮಾಳ ಮಾರುತಿ ಠಾಣೆಯ ಸಿಪಿಐ ಸುನೀಲ್ ಪಾಟೀಲ್ ನಾನು ಅವಾಚ್ಯ ಪದಗಳ ಬಳಕೆ ಮಾಡಿಲ್ಲ, ವಕೀಲರನ್ನು ನಿಂದಿಸಿಲ್ಲ ಆದರೂ ವಕೀಲರ ಮನಸ್ಸಿಗೆ ನೋವಾಗಿದ್ದರೆ ವಿಷಾಧಿಸುತ್ತೇನೆ ಎಂದಾಗ ವಕೀಲರು ಪ್ರತಿಭಟನೆ ಅಂತ್ಯಗೊಳಿಸಿದರು.