ಬೆಳಗಾವಿ- ಮಾರ್ಚ 30 ರಿಂದ ಆರಂಭವಾದ SSLC ಪರೀಕ್ಷೆ ಬುಧವಾರ ಮಧ್ಯಾಹ್ನ 12-30 ಕ್ಕೆ ಮುಕ್ತಾಯವಾಯಿತು ಸೋಸಿಯಲ್ ಸ್ಟಡೀಜ್ ಪರೀಕ್ಷೆ ಮುಗಿಯುತ್ತಿದ್ದಂತೆಯೇ ವಿಧ್ಯಾರ್ಥಿಗಳು ಚೀರಾಡುತ್ತ ಕುಣಿಯುತ್ತ ಪರೀಕ್ಷಾ ಕೇಂದ್ರಗಳಿಂದ ಹೊರ ಬಂದರು
ಬೆಳಗಾವಿ ಜಿಲ್ಲೆಯ ಸಾಲಹಳ್ಳಿ ಮತ್ತು ಗೋಕಾಕ ತಾಲೂಕಿನ ಮೂಡಲಗಿಯಲ್ಲಿ ಹಿಂದಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದನ್ನು ಹೊರತು ಪಡಿಸಿದರೆ ಜಿಲ್ಲೆಯಲ್ಲಿ ಸುಗಮವಾಗಿ ಪರೀಕ್ಷೆಗಳು ಮುಗಿದವು
ನಕಲು ಹಾವಳಿಯನ್ನು ತಡೆಯಲು ಶಿಕ್ಷಣ ಇಲಾಖೆ ವಿವಿಧ ತಂಡಗಳನ್ನು ರಚಿಸಿ ಪರೀಕ್ಷಾ ಕೇಂದ್ತಗಳ ಮೇಲೆ ನಿಗಾ ವಹಿಸಿತ್ತು ಪರೀಕ್ಷಾ ಕೇಂದ್ರ ಗಳಲ್ಲಿ ನಡೆಯುವ ಸಾಮೂಹಿಕ ನಕಲು ತಡೆಯಲು ಕೇಂದ್ರಗಳಲ್ಲಿ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು
ಬುಧವಾರ ಪರೀಕ್ಚೆ ಮುಗಿಸಿದ ವಿಧ್ಯಾರ್ಥಿಗಳು ಖುಷಿಖುಷಿಯಾಗಿ ಮನೆಗೆ ತೆರಳಿದರು