ಬೆಳಗಾವಿ- ಬೆಳಗಾವಿ ನಗರದ ಗೃಹಿಣಿಯರಿಗೆ ಸಿಹಿ ಸುದ್ಧಿ LPG ಸಿಲಿಂಡರ್ ಗ್ಯಾಸ ಬರಲಿಲ್ಲ, ಗ್ಯಾಸ್ ತೀರಿದ ತಕ್ಷಣ ನಂಬರ್ ಬರಲಿಲ್ಲ ಎನ್ನುವ ಆತಂಕದಿಂದ ಬೆಳಗಾವಿಯ ಗೃಹಿಣಿಯರು ಮುಕ್ತರಾಗಲಿದ್ದಾರೆ ಏಕೆಂದರೆ ಮನೆ ಮನೆಗೆ ನೀರಿನ ಕನೆಕ್ಷನ್ ಕೊಟ್ಟಂತೆ ಮನೆ ಮನೆಗೆ ಗ್ಯಾಸ್ ಪೈಪ್ ಲೈನ್ ಕನೆಕ್ಷನ್ ಕೊಡುವ ಕೆಲಸ ಸದ್ದಿಲ್ಲದೇ ನಡೆದಿದೆ
– ಕೇಂದ್ರದ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಕರ್ನಾಟಕದಲ್ಲಿ ಬೆಳಗಾವಿ ಮತ್ತು ತುಮಕೂರು ನಗರಗಳಲ್ಲಿ ಗ್ಯಾಸ್ ಪೈಪ್ ಲೈನ್ ಅಳವಡಿಸುವ ಕಾಮಗಾರಿ ಆರಂಭಿಸಿದ್ದು ಬೆಳಗಾವಿ ನಗರದಲ್ಲಿ ಈ ಕಾಮಗಾರಿ ಭರದಿಂದ ಸಾಗಿದೆ
ಬೆಳಗಾವಿಯ ಇಂಡಾಲ್ ಕಾರ್ಖಾನೆ ಬಳಿ ದಾಬೋಲ್ ಗ್ಯಾಸ್ ಪೈಪ್ ಲೈನ್ ಹಾದು ಹೋಗಿದೆ ಇಲ್ಲಿ ಜಂಕ್ಷನ್ ಪಾಯಿಂಟ್ ನಿರ್ಮಿಸಿ ಇಂಡಾಲ್ ಕಾರ್ಖಾನೆಗೆ ಈಗಾಗಲೇ ಗ್ಯಾಸ್ ಸಪ್ಲಾಯ್ ಮಾಡಲಾಗುತ್ತಿದೆ ಇದೇ ಜಂಕ್ಷನ್ ದಲ್ಲಿ ಇನ್ನೊಂದು ಪಾಯಿಂಟ್ ನಿರ್ಮಿಸಿ ನಗರ ನಿವಾಸಿಗಳಿಗೆ ಗ್ಯಾಸ್ ಪೂರೈಸುವ ಯೋಜನೆ ಇದಾಗಿದೆ
ಬೆಳಗಾವಿ ನಗರದಲ್ಲಿ ಗ್ಯಾಸ್ ಪೈಪ್ ಲೈನ್ ಅಳವಡಿಸುವ ಗುತ್ತಿಗೆಯನ್ನು ಹೈದ್ರಾಬಾದ ಮೂಲದ ಮೇಘಾ ಇಂಜನೀರಿಂಗ್ ಇನಫ್ರಾಸ್ಟಕ್ಚರ್ ಪ್ರಾ ಲಿ ನವರು ಪಡೆದಿದ್ದು ನಗರದಲ್ಲಿ 9 ಇಂಚು ಹಾಗು12 ಇಂಚಿನ ಪೈಪ್ ಗಳನ್ನು ಅಳವಡಿಸುತ್ತಿದ್ದಾರೆ ಇಂಡಾಲ್ ಜಂಕ್ಷನ್ ಪಾಯಿಂಟ್ ದಿಂದ ಕಣಬರ್ಗಿ ರಸ್ತೆಯಿಂದ ಅಶೋಕ ನಗರದ ವರೆಗೆ ಪೈಪ್ ಗಳನ್ನು ಅಳವಡಿಸಲಾಗಿದೆ
ಈಗ ನಗರದ ಭೀಮ್ಸ ಮೆಡಿಕಲ್ ಕಾಲೇಜು ಎದುರು ಬಾಬಾಸಾಹೇಬ ಅಂಬೇಡ್ಕರ್ ರಸ್ತೆಯಲ್ಲಿ ಪೈಪ್ ಅಳವಡಿಸುವ ಕಾಮಗಾರಿ ನಡೆಯುತ್ತಿದೆ ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಂಡು ಬೆಳಗಾವಿಯ ಮನೆ ಮನೆಗೆ ಗ್ಯಾಸ್ ಸಿಗಲಿದೆ
ಕರೆಂಟ್ ಬಿಲ್ ನೀರಿನ ಬಿಲ್ ಆಕರಿಸಿದಂತೆ ಪ್ರತಿ ತಿಂಗಳು ಯಾರು ಎಷ್ಟು ಗ್ಯಾಸ್ ಉಪಯೋಗಿಸುತ್ತಾರೆಯೋ ಅಷ್ಟು ಬಿಲ್ ಮನೆಗೆ ಬರುತ್ತದೆ
ಈ ಗ್ಯಾಸ್ ಪೂರೈಸುವ ವ್ಯವಸ್ಥೆಯಲ್ಲಿ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ತೀರಾ ಕಡಿಮೆ ಈದು ಸುರಕ್ಷಿತ ವ್ಯೆವಸ್ಥೆ ಅಂತಾರೆ ಇಂಜನೀಯರ್ ಗಳು