ಬೆಳಗಾವಿಯಲ್ಲಿ ಸೂರ್ಯಗ್ರಹಣ ಹೇಗಿತ್ತು ಅಂತೀರಾ ? ಲಿಂಕ್ ಕ್ಲಿಕ್ ಮಾಡಿ ಮಜಾ ನೋಡಿ….!!!
ಬೆಳಗಾವಿ- ಇಂದು ಸೂರ್ಯಗ್ರಹಣ ಈ ಗ್ರಹಣ ನೋಡಲು ಕೆಲವರು ವಿಜ್ಞಾನ ಪ್ರಯೋಗಾಲಯಕ್ಕೆ ಹೋದ್ರೆ ಇನ್ನು ಕೆಲವರು ಮೂಡನಂಬಿಕೆಗಳಿಗೆ ಹೆದರಿ ಗ್ರಹಣ ಇದೆ ಅಂತಾ ಕವದಿ ಹೊತ್ತು ಮನೆಯಲ್ಲೇ ಮಲಗಿದ್ರು
ಬೆಳಿಗ್ಗೆ ಹತ್ತು ಘಂಟೆಯಾದರೂ ಸೂರ್ಯನ ಪ್ರಖರ ಬೆಳಕು ಭೂಮಿಯ ಮೇಲೆ ಬೀಳಲೇ ಇಲ್ಲ ಹೀಗಾಗಿ ಬೆಳಗಾವಿಯಲ್ಲಿ ಮೋಡ ಕವಿದ ,ಸೂರ್ಯನಿಗೆ ನಂಜು ಏರಿದ ಮುಸುಕಿನ ವಾತಾವರಣ ನೋಡಲು ಸಿಕ್ಕಿತು .
ಬೆಳಗಾವಿಯ ಖ್ಯಾತ ಪತ್ರಿಕಾ ಛಾಯಾಗ್ರಾಹ ಪಿ ಕೆ ಬಡಿಗೇರ ತಾನು ಕ್ಲಿಕ್ ಮಾಡಿದ ಪೋಟೋ ವ್ಯಾಟ್ಸ್ ಪ್ ನಲ್ಲಿ ಹಾಕಿ ಫೋನ್ ಮಾಡಿದಾಗ ನಾನೂ ಕೂಡಾ ನಿದ್ದೆಯಿಂದ ಹುಷಾರಾಗಿ ನೋಡಿದಾಗ ಬೆಳಗಿನ ಏಳು ಘಂಟೆಯಾಗಿರಬಹುದು ಎಂದುಕೊಂಡೆ ಆದ್ರೆ ಗಡಿಯಾರ ನೋಡಿದಾದ ಹತ್ತು ಘಂಟೆಯಾಗಿತ್ತು .
ಛಾಯಾಗ್ರಾಹಕ ಪಿ ಕೆ ಬಡಿಗೇರ ಕ್ಯಾಮರಾದಲ್ಲಿ ಸೂರ್ಯಗ್ರಹಣ ಹೇಗಿತ್ತು ಅನ್ನೋದನ್ನು
ಪೋಟೋ ನೋಡಿ ಮಜಾ ಮಾಡಿ …..
ಇಂದು ಕಂಕಣ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಬೆಳಗಾವಿಯ ಕಪಿಲೇಶ್ವರ ಮಂದಿರದ ಆವರಣದಲ್ಲಿ ಮಹಾರುದ್ರಯಾಗ, ಶಿವನಾಮಸ್ಮರಣೆ ,ಮಾಡಲಾಯಿತು ಕಪಿಲೇಶ್ವರ ದೇವಸ್ಥಾನದಲ್ಲಿ ಮಹಾರುದ್ರಯಾಗ ಪ್ರಾರಂಭವಾಗಿದ್ದು
ಗ್ರಹಣ ಪ್ರಾಪ್ತಿ ಆಗುವವರೆಗೆ ಕಪಿಲೇಶ್ವರನ ಶಿವಲಿಂಗ ದರ್ಶನಕ್ಕೆ ಅವಕಾಶ ಇಲ್ಲಾ.
ಗರ್ಭಗುಡಿಯ ಶಿವಲಿಂಗ ಮೂರ್ತಿಯನ್ನ ಬಿಲ್ವ ಪತ್ರೆಯಿಂದ ಮುಚ್ಚಿ ಇಡಲಾಗಿದೆ ಸೂರ್ಯಗ್ರಹಣ ಪ್ರಾಪ್ತಿ ನಂತರ ಶಿವಲಿಂಗಕ್ಕೆ ವಿಶೇಶ ಪೂಜೆ ಮಾಡಲಾಗುತ್ತದೆ ಎಂದು ದೇವಸ್ಥಾನದ ಅರ್ಚಕರು ತಿಳಿಸಿದ್ದಾರೆ