ಶಾಸಕ ತಮ್ಮನ್ನವರಗೆ ತಿರುಗೇಟು ನೀಡಿದ ಸಚಿವ ಸತೀಶ್‌ ಜಾರಕಿಹೊಳಿ

ಬೆಳಗಾವಿ: ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರಗೆ ಟಿಕೆಟ್ ಕೊಡಿಸಲು ನಾನು ಕಾರಣವಾಗಿದ್ದೇನೆ. ಒಂದು ವೇಳೆ ಅವರನ್ನು ಬೆಳೆಸುವ ಉದ್ದೇಶವಿಲ್ಲದಿದ್ದರೇ ಬೇರೆಯವರಿಗೆ ಟಿಕೆಟ್ ನೀಡುವಂತೆ ಸೂಚಿಸುತ್ತಿದ್ದೆ ಎಂದು ಸಚಿವ ಸತೀಶ್‌ ಜಾರಕಿಹೊಳಿ ಶಾಸಕ ತಮ್ಮನ್ನವರಗೆ ತಿರುಗೇಟು ನೀಡಿದ್ದಾರೆ.

ಇಂದು ಬೆಳಗ್ಗೆ ಚಿಕ್ಕೋಡಿಯಲ್ಲಿ ಪ್ರೆಸ್ ಮೀಟ್ ಕರೆದು ಸಚಿವ ಸತೀಶ್‌ ಜಾರಕಿಹೊಳಿ ವಿರುದ್ಧ ಶಾಸಕ ಮಹೇಂದ್ರ ತಮ್ಮಣ್ಣವರ ಅಸಾಮಾಧಾನ ಹೊರಹಕಿದ್ದಾರೆ.ಈ ಭಾಗದ ಎಸ್‌ಸಿ ನಾಯಕರನ್ನು ರಾಜಕೀಯವಾಗಿ ಜಾರಕಿಹೊಳಿ ಪ್ಯಾಮಿಲಿ ನಿರ್ನಾಮ ಮಾಡ್ತಿದೆ ಎಂದು ಆರೋಪಿಸಿದರು. ಮಹೇಂದ್ರ ತಮ್ಮಣ್ಣವರ ಆರೋಪಕ್ಕೆ ತಿರುಗೇಟು ನೀಡಿದ ಸಚಿವ ಸತೀಶ್ ಜಾರಕಿಹೊಳಿ ಅವರು, ಮತದಾನದಕ್ಕಿಂತ ಎರಡು ದಿನ ಮುಂಚೆ ಮಹೇಂದ್ರ ತಮ್ಮಣ್ಣವರ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಚುನಾವಣೆಯಲ್ಲಿ ಅವರ ಸಂಬಂಧಿ ಶಂಭು ಕಲ್ಲೋಳಿಕರ ಪರವಾಗಿ ಕೆಲಸ ಮಾಡಿದ್ದಾರೆ.

ಕುಡಚಿಯಲ್ಲಿ ಶಂಭು ಕಲ್ಲೋಳಿಕರಗೆ ಕೇವಲ ಮೂರು ಸಾವಿರ ಮತಗಳು ಬಂದಿವೆ.ಮಹೇಂದ್ರ ತಮ್ಮಣ್ಣವರ ತಾಕತ್ತು ಅಷ್ಟೇ ಎಂದು ವ್ಯಂಗ್ಯವಾಡಿದ್ದಾರೆ.ನಾನು ಯಾವ ನಾಯಕರನ್ನು ತುಳಿಯುವ ಪ್ರಯತ್ನ ಮಾಡ್ತಿಲ್ಲ. ಪಕ್ಷದಲ್ಲಿ ಇದ್ದುಕೊಂಡು ಬೇರೆಯವರ ಪರವಾಗಿ ಮಹೇಂದ್ರ ತಮ್ಮಣ್ಣವರ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *