ಬೆಳಗಾವಿ- ಗಡಿ ಭಾಗದ ಬೆಳಗಾವಿಯಲ್ಲಿ ದೀಪಾವಳಿಯ ಗುಡಿ ಪಾಡವಾ ದಿನ ಎಮ್ಮೆಗಳ ಆಕರ್ಷಕ ಓಟ ನಡೆಯುತ್ತದೆ ಗವಳಿ ಸಮಾಜದ ಜನ ಈ ದಿನ ತಮ್ಮ ಎಮ್ಮೆ ಕೋಣ ಗಳನ್ನು ಶೃಂಗರಿಸಿ ಗಲ್ಲಿ ಗಲ್ಲಿಗಳಲ್ಲಿ ಓಡಿಸುತ್ತಾರೆ
ಗುಡಿ ಪಾಡವಾ ದಿನ ಬೆಳಗಾವಿ ನಗರದ ಗವಳಿ ಗಲ್ಲಿ ಚವ್ಹಾಟ ಗಲ್ಲಿ ಗೋಂದಳಿ ಗಲ್ಲಿ ಗಳಲ್ಲಿ ಎಮ್ಮೆಗಳ ಓಟ ನೋಡಲು ಜನ ಸೇರುತ್ತಾರೆ ಆರಂಭದಲ್ಲಿ ಗವಳಿಗರು ತಮ್ಮ ತಮ್ಮ ಗಲ್ಲಿಗಳಲ್ಲಿ ಎಮ್ಮೆಗಳಿಗೆ ಹೆಂಡ ಕುಡಿಸಿ ಮದ ಏರಿಸಿ ಓಡುವ ತಾಲೀಮು ಮಾಡಿಸುತ್ತಾರೆ ನಂತರ ಸರ್ದಾರ ಮೈದಾನದ ಬಳಿ ಎಮ್ಮೆಗಳ ಸಾಮೂಹಿಕ ಓಟದ ಸ್ಪರ್ದೆ ನಡೆಯುತ್ತದೆ
ಕೈಯಲ್ಲಿ ಕೆಂಪು ಅಥವಾ ಕರಿ ಬಣ್ಣದ ರುಮಾಲು ಹಿಡಿದು ಎಮ್ಮೆಗಳ ಹಿಂದೆ ಹುರ್ಯೋ.ಹುರ್ಯೋ ಎಂದು ಚೀರುತ್ತ ಎಮ್ಮೆಗಳನ್ನು ಓಡಿಸಿ ಗವಳಿ ಸಮಾಜದ ಜನ ಗುಡಿ ಪಾಡವೆಯ ದಿನ ಖುಶಿ ಪಡುತ್ತಾರೆ
ಆಕರ್ಷಕ ಎಮ್ಮೆಗೆ ಬಹುಮಾನ ಕೂಡ ಕೊಡಲಾಗುತ್ತದೆ ಇದು ಬೆಳಗಾವಿಯ ಗುಡಿ ಪಾಡವಾ ಸ್ಪೇಶಲ್ ಎಮ್ಮೆಗಳ ಫ್ಯಾಶನ್ ಶೋ