Breaking News

ಕ್ರಾಂತಿವೀರ ರಾಯಣ್ಣನ ಊರಾಗ, ಸಂಗೊಳ್ಳಿ ಕೇಸರಿ”, “ಸಂಗೊಳ್ಳಿ ಕುಮಾರ್” ಗೆ ಅಖಾಡಾ ರೆಡಿ…!!

ಸಂಗೊಳ್ಳಿ ಉತ್ಸವ: ಸಂಗೊಳ್ಳಿ ಕೇಸರಿ ಪ್ರಶಸ್ತಿ
——————————————————————
“ಹೆಚ್ಚಿನ ಪ್ರಚಾರಕ್ಕೆ ಕ್ರಮ; ರಾಜ್ಯಮಟ್ಟದ ಕುಸ್ತಿ ಸ್ಪರ್ಧೆ”

ಬೆಳಗಾವಿ, ): ಪ್ರತಿವರ್ಷದಂತೆ ಜನವರಿ 12 ಹಾಗೂ 13 ರಂದು ನಡೆಯಲಿರುವ ಸಂಗೊಳ್ಳಿ ಉತ್ಸವದ ಸಂದರ್ಭದಲ್ಲಿ ಹೆಚ್ಚಿನ ರೀತಿಯಲ್ಲಿ ಪ್ರಚಾರಕಾರ್ಯ ಕೈಗೊಳ್ಳಲಾಗುವುದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕರಾದ ಗುರುನಾಥ ಕಡಬೂರ ತಿಳಿಸಿದರು.

ಸಂಗೊಳ್ಳಿ ಉತ್ಸವದ ಹಿನ್ನೆಲೆಯಲ್ಲಿ ಸಂಗೊಳ್ಳಿ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಶನಿವಾರ (ಜ.7) ನಡೆದ ಪ್ರಚಾರ ಉಪ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿವರ್ಷದಂತೆ ಉಪ ವಿಭಾಗಾಧಿಕಾರಿ ಕಚೇರಿಯಿಂದ ಒದಗಿಸಲಾಗುವ ಉತ್ಸವದ ಪೋಸ್ಟರ್, ಬ್ಯಾನರ್ ಅಳವಡಿಸುವುದರ ಜತೆಗೆ ಆಮಂತ್ರಣಪತ್ರಗಳನ್ನು ಎಲ್ಲರಿಗೆ ತಲುಪಿಸಲಾಗುವುದು ಎಂದರು.

ಉತ್ಸವದ ಬ್ಯಾನರ್, ಪೋಸ್ಟರ್ ಮತ್ತಿತರ ಪ್ರಚಾರ ಸಾಮಗ್ರಿಗಳನ್ನು ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ಜಿಲ್ಲೆಗಳಲ್ಲೂ ಅಳವಡಿಸಬೇಕು ಎಂದು ಪ್ರಚಾರ ಉಪ ಸಮಿತಿ ಸದಸ್ಯರು ಸಲಹೆ ನೀಡಿದರು.
ಈ ವಿಷಯವನ್ನು ಉತ್ಸವ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ರಾಜ್ಯಮಟ್ಟದ ಕುಸ್ತಿ ಸ್ಪರ್ಧೆ:

ಸಂಗೊಳ್ಳಿ ಉತ್ಸವದಲ್ಲಿ ಈ ಬಾರಿ ವಿವಿಧ ವಿಭಾಗಗಳಲ್ಲಿ ರಾಜ್ಯಮಟ್ಟದ ಪಾಯಿಂಟ್ ಆಧಾರಿತ ಮುಕ್ತ ಕುಸ್ತಿ ಸ್ಪರ್ಧೆ ಆಯೋಜಿಸಲಾಗುವುದು ಎಂದು ಯುವಜನಸೇವಾ ಹಾಗೂ ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಜಿನೇಶ್ವರ ಪಡನಾಡ ತಿಳಿಸಿದರು.

ಇದೇ ಸಂದರ್ಭದಲ್ಲಿ ನಡೆದ ಉತ್ಸವದ ಕ್ರೀಡಾ ಉಪ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಗೊಳ್ಳಿ ಉತ್ಸವದ ಅಂಗವಾಗಿ ಇದೇ ಮೊದಲ ಬಾರಿ “ಸಂಗೊಳ್ಳಿ ಕೇಸರಿ”, “ಸಂಗೊಳ್ಳಿ ಕುಮಾರ್” ಪ್ರಶಸ್ತಿ ಸೇರಿ ಪೇಟ ಹಾಗೂ ಬೆಳ್ಳಿ ಗದೆಯನ್ನು ನೀಡಲಾಗುವುದು.
ಲಭ್ಯವಿರುವ ಅನುದಾನದಲ್ಲಿ ಕುಸ್ತಿ ಸ್ಪರ್ಧೆಯನ್ನು ವ್ಯವಸ್ಥಿತವಾಗಿ ಏರ್ಪಡಿಸಲಾಗುವುದು.

ಅನುದಾನದ ಲಭ್ಯತೆಯನ್ನು ಆದಷ್ಟು ಬೇಗನೇ ಖಚಿತಪಡಿಸಿಕೊಂಡು ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಇಮಾಮ್ ಹುಸೇನ್ ಬುಡ್ಡೇಸಾಬ್ ಖುದ್ದುನವರ ಹೇಳಿದರು.

ಗ್ರಾಪಂ ಸದಸ್ಯರಾದ ಬಸವರಾಜ ಕೊಡ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿ ರವೀಂದ್ರ ಬಳಿಗಾರ, ಬಸವರಾಜ ಕಮತ, ಪ್ರಚಾರ ಉಪ ಸಮಿತಿ ಸದಸ್ಯರಾದ ಬಾಬುಸಾಬ್ ಖುದ್ದುನ್ನವರ, ಪರಪ್ಪ ಗಣಾಚಾರಿ, ಬಾಬು ಸಿಂಗಾಡಿ, ಬಸವಣ್ಣೆಪ್ಪ ರುದ್ರಾಪುರ, ಕ್ರೀಡಾ ಸಮಿತಿ ಸದಸ್ಯರು, ಸಂಗೊಳ್ಳಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಪ್ರಭು ಹಾಗೂ ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.
****

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *