ಬೆಳಗಾವಿ-ಭಿನ್ನಮತ ಬಹಿರಂಗ ಬೆನ್ನಲ್ಲೇ ಬಿಜೆಪಿ ನಾಯಕರಿಂದ ಜಂಟಿ ಪತ್ರಿಕಾಗೋಷ್ಢಿ ನಡೆದಿದೆ.ಬೆಳಗಾವಿ ಜಿಲ್ಲೆಯಕಾಗವಾಡ ಮತಕ್ಷೇತ್ರದ ಐನಾಪುರದಲ್ಲಿ ಬೆಳಗಾವಿಯ ಬಿಜೆಪಿ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.
ರಮೇಶ್ ಜಾರಕಿಹೊಳಿ,ಲಕ್ಷ್ಮಣ ಸವದಿ, ಸಚಿವೆ ಶಶಿಕಲಾ ಜೊಲ್ಲೆ ಜಂಟಿ ಸುದ್ದಿಗೋಷ್ಠಿ, ನಡೆಸಿ ನಾವೆಲ್ಲರೂ ಒಂದಾಗಿದ್ದೇವೆ ಎನ್ನುವ ಸಂದೇಶ ಸಾರಿದ್ದಾರೆ.ಬಿಜೆಪಿ ನಾಯಕರ ಮಧ್ಯೆ ಹೊಂದಾಣಿಕೆ ಕೊರತೆ ವಿಚಾರ,ನಮ್ಮಲ್ಲಿ ಒಗ್ಗಟ್ಟಿಲ್ಲ ಎಂದು ಬಿಂಬಿಸೋರು ಬಹಳ ಜನ ಇದ್ದಾರೆ,,ಅದನ್ಯಾವುದನ್ನೂ ನೀವು ತೆಲೆಗೆ ಹಾಕಿಕೊಳ್ಳಬೇಡಿ,೧೫ ಸ್ಥಾನಗಳಲ್ಲಿ ನಾವು ಗೆಲ್ಲುವ ಪ್ರಯತ್ನ ಮಾಡುತ್ತೆವೆ ಎಂದು ಸವದಿ ಹೇಳಿದ್ದಾರೆ.
ಗೋಕಾಕದಲ್ಲಿ ತಮ್ಮ ಗೈರಿನ ಕುರಿತು ಲಕ್ಷ್ಮಣ ಸವದಿ ಸ್ಪಷ್ಟನೆ,ನೀಡಿದ್ದು,ನನಗೆ ಹುಷಾರಿರಲಿಲ್ಲ ಹೀಗಾಗಿ ನಾನು ಪರ್ಮಿಷನ್ ಪಡೆದು ಗೈರಾಗಿದ್ದೆ ,ಅನಿವಾರ್ಯ ಕಾರಣಗಳಿಂದ ಗೈರಾದಾಗ ನೀವು ನಮ್ಮನ್ನು ಅಪಾರ್ಥ ಮಾಡಿಕೊಳ್ಳಬೇಡಿ,ನಾವೆಲ್ಲರೂ ಕಮಲದ ನೆರಳಿನಲ್ಲಿ ಕೆಳಗೆ ಕೆಲಸ ಮಾಡುವ ಕಾರ್ಯಕರ್ತರು ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ರಮೇಶ ಗೆ ಜಿಲ್ಲಾ ಉಸ್ತುವಾರಿ ಸಚಿವ ಎಂದ ಸವದಿ,ನಂತರ,ಬಾಯ್ತಪ್ಪಿ ರಮೇಶಗೆ ಜಿಲ್ಲಾ ಉಸ್ತುವಾರಿ ಸಚಿವ ಎಂದೆ,
ಪಕ್ಕಲ್ಲಿಯೇ ಕುಳಿತು ಸವದಿಯವರನ್ನು ಎಚ್ಚರಿಸಿದ ರಮೇಶ್ ಜಾರಕಿಹೊಳಿ ಉಸ್ತುವಾರಿ ನಾನಲ್ಲ,ಕಾರಜೋಳ ಎಂದು ಎಚ್ಚರಿಸಿದ ಪ್ರಸಂಗವೂ ನಡೆಯಿತು.ಕೈಗೆ ಕೈ ಬಡಿದು ಕಾರಜೋಳ, ಕಾರಜೋಳ ಎಂದ ರಮೇಶ್ ಜಾರಕಿಹೊಳಿ ಸವದಿ ಅವರನ್ನು ಎಚ್ಚರಿಸಿದ್ರು.
ಇಂವ ಮಗ್ಗಲಾಗ ಕುಂತಾನ ಅನ್ನಾನ ಅದು ಪರಿಣಾಮ ಬಿರುತ್ತೆ ಎಂದು ಹಾಸ್ಯ ಚಟಾಕಿ ಹಾರಿಸಿದ ಸವದಿ,ಕರ್ಪೂರದ ಡಬ್ಬಿಯಲ್ಲಿನ ಕರ್ಪೂರ ತೆಗೆದರೂ ಸಹ ವಾಸನೆ ಹಾಗೇಯೇ ಇರುತ್ತೆ,ಹಾಗೆಯೇ ಹಿಂದೆ ಉಸ್ತುವಾರಿ ಅವನೇ ಇದ್ದದ್ದರಿಂದ ಅವನೇ ಉಸ್ತುವಾರಿ ಎಂಬ ಭಾವನೆ ಬರುತ್ತೆ ಎಂದು ಸವದಿ ಹೇಳಿದ್ರು,
ಸವದಿ ಮಾತಿನ ನಂತರ ರಮೇಶ್ ಜಾರಕಿಹೊಳಿ ಮಾತನಾಡಿ,ನಾನು ನಿಪ್ಪಾಣಿಗೆ ಬರದೇ ಇರಲು ಕಾರಣ ನಂಗೆ ಪೂರ್ವ ನಿಯೋಜಿತ ಕಾರ್ಯಕ್ರಮ ಇತ್ತು,ಕೊಣ್ಣೂರಿನಲ್ಲಿ ಪೂರ್ವ ನಿಯೋಜಿತ ಕಾರ್ಯಕ್ರಮ ಇದ್ದಿದ್ದರಿಂದ ನಾನು ಅಲ್ಲಿಗೆ ಹೋಗಿದ್ದೆ ಎಂದ ರಮೇಶ್,ನಿಪ್ಪಾಣಿಯಲ್ಲಿ ತಮ್ಮ ಬೆಂಬಲಿಗ ಉತ್ತಮ್ ಪಾಟೀಲ್ ಸ್ಪರ್ಧೆಯ ವಿಚಾರ,ನನ್ನ ವೈಯಕ್ತಿಕ ಅಭಿಪ್ರಾಯ ಪಕ್ಷದಲ್ಲಿ ನಡೆಯೊಲ್ಲ ಅದು ಮನೆಯಲ್ಲಿ ನಡೆಯುತ್ತೆ,ಪಕ್ಷದ ವೇದಿಕೆಯ ಅಂತ ಬಂದಾಗ ನಾವೆಲ್ಲರೂ ಒಂದೇ ಪಕ್ಷ ಹೇಳಿದ ಹಾಗೆ ಕೆಲಸ ಮಾಡುತ್ತೆವೆ,ನಾನು ಕಳೆದ ಬಾರಿ ಕಾಂಗ್ರೇಸ್ ನಲ್ಲಿದ್ದೆ,ಆಗ ಉತ್ತಮ್ ಪಾಟೀಲ್ ಕಾಂಗ್ರೇಸ್ ಟಿಕೇಟ್ ಆಕಾಂಕ್ಷಿಯಾಗಿದ್ದ,
ಅವನನ್ನು ಹಿಂದೆ ಸರಿಸಿ ಕಾಕಾಸಾಹೇಬ್ ಪಾಟೀಲ್ ಗೆ ಕಾಂಪ್ರಮೈಸ್ ಮಾಡಿ ಟಿಕೇಟ್ ಕೊಡಿಸಿದ್ದೆ,
ಉತ್ತಮ್ ಪಾಟೀಲ್ ರನ್ನು ನಾನೇ ಹಿಂದೆ ಸರಿಸಿದ್ದೆ,
ನಾನು ಬಿಜೆಪಿಗೆ ಬರುತ್ತೆನೆ ಅಂತ ನನಗೆ ಗೊತ್ತಿರಲಿಲ್ಲ,
ಉತ್ತಮ್ ಪಾಟೀಲ್ ಗೂ ನನಗೂ ಉತ್ತಮ ಸಂಬಂಧ ಇದೆ,ಪಕ್ಷ ಅಂತ ಬಂದಾಗ ನಾನೂ ಸಹ ಶಶಿಕಲಾ ಜೊಲ್ಲೆ ಪರವಾಗಿ ನಿಲ್ಲುತ್ತೆನೆ ಎಂದ ರಮೇಶ್ ಜಾರಕಿಹೊಳಿ ಹೇಳಿದ್ರು