ಬೆಳಗಾವಿ-2023ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ
ಕಾಂಗ್ರೆಸ್ ನಿಂದ 124 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಬೆಳಗಾವಿ ಜಿಲ್ಲೆಯ 5 ಜನ ಹಾಲಿ ಶಾಸಕರು, 3 ಜನ ಮಾಜಿ ಶಾಸಕರು, ಓರ್ವ ಹೊಸ ಅಭ್ಯರ್ಥಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.ನಾಲ್ಕು- ಐದು ಜನರ ಆಕಾಂಕ್ಷಿ ಇರೋ ಕ್ಷೇತ್ರದ ರಿಸ್ಕ್ ತೆಗೆದುಕೊಳ್ಳದ ನಾಯಕರು ಕೇವಲ ಒಂಬತ್ತು ಕ್ಷೇತ್ರಗಳಲ್ಲಿ ಹೊಡೀ ಒಂಬತ್ತ್ ಇನ್ನುಳಿದ ಒಂಬತ್ತು ಕ್ಷೇತ್ರಗಳಲ್ಲಿ ಆಮ್ಯಾಲ ಗಾಡಿಹತ್ತ ಎನ್ನುವ ಪರಿಸ್ಥಿತಿ ಕಾಂಗ್ರೆಸ್ ನಲ್ಲಿದೆ.
ಯಮಕನಮಡಿ- ಸತೀಶ ಜಾರಕಿಹೊಳಿ.
ಚಿಕ್ಕೋಡಿ- ಗಣೇಶ ಹುಕ್ಕೇರಿ.
ಬೆಳಗಾವಿ ಗ್ರಾಮೀಣ- ಲಕ್ಷ್ಮಿ ಹೆಬ್ಬಾಳ್ಕರ್.
ಖಾನಾಪುರ- ಅಂಜಲಿ ನಿಂಬಾಳ್ಕರ್.
ಬೈಲಹೊಂಗಲ- ಮಹಾಂತೇಶ ಕೌಜಲಗಿ.
ರಾಮದುರ್ಗ- ಅಶೋಕ ಪಟ್ಟಣ.
ಕುಡಚಿ (ಎಸ್ಸಿ)- ಮಹೇಂದ್ರ ತಮ್ಮಣ್ಣವರ್.
ಹುಕ್ಕೇರಿ- ಎ ಬಿ ಪಾಟೀಲ್.
ಕಾಗವಾಡ- ಭರಮಗೌಡ ಕಾಗೆ ಹೆಸರು ಘೋಷಣೆ.
ಟಿಕೆಟ್ ಫೈಟ್ ಇರೋ 9 ಕ್ಷೇತ್ರದಲ್ಲಿ ಇನ್ನೂ ಅಭ್ಯರ್ಥಿಗಳ ಹೆಸರು ಫೈನಲ್ ಆಗಿಲ್ಲ.
ಸವದತ್ತಿ ಕ್ಷೇತ್ರದಲ್ಲಿ 4 ಜನ ಪ್ರಭಲ ಟಿಕೆಟ್ ಆಕಾಂಕ್ಷಿಗಳು.
ಬೆಳಗಾವಿ ಉತ್ತರ ಕ್ಷೇತ್ರದಲ್ಲಿ 6 ಜನ ಟಿಕೆಟ್ ಆಕಾಂಕ್ಷಿಗಳು.
ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ 4 ಜನ ಟಿಕೆಟ್ ಆಕಾಂಕ್ಷಿಗಳು.
ಗೋಕಾಕ್ ಕ್ಷೇತ್ರದಲ್ಲಿ ಮೂರು ಜನರಿಂದ ಕಾಂಗ್ರೆಸ್ ಟಿಕೆಟ್ ಪಡೆಯಲು ಲಾಭಿ ನಡೆಸಿದ್ದಾರೆ.
ಅರಭಾವಿ ಕ್ಷೇತ್ರದಲ್ಲಿ ಮೂರು ಜನರಿಂದ ಕಾಂಗ್ರೆಸ್ ಟಿಕೆಟ್ ಗೆ ಪೈಪೋಟಿ.ಅಥಣಿ, ನಿಪ್ಪಾಣಿ, ಕಿತ್ತೂರು, ರಾಯಭಾಗದಲ್ಲಿ ಹಲವರು ಆಕಾಂಕ್ಷಿಗಳಿಂದ ಲಾಭಿ ನಡೆಯುತ್ತಿದೆ