ಬೆಳಗಾವಿ – ಬಿಜೆಪಿ ಟಿಕೆಟ್ ಗಾಗಿ,ಇಕ್ಕಟ್ಟು ಬಿಕ್ಕಟ್ಟು ಎಲ್ಲಾದ್ರು ಇದ್ರೆ ಅದು ಬೈಲಹೊಂಗಲದಲ್ಲಿ ಯಾಕಂದ್ರೆ ಇಲ್ಲಿ ಇಬ್ಬರು ಮಾಜಿ ಶಾಸಕರ ನಡುವೆ ಬಿಜೆಪಿ ಟಿಕೆಟ್ ಗಾಗಿ ಗುದ್ದಾಟ ನಡೆದಿದೆ.ಬಿಜೆಪಿ ಅಭ್ಯರ್ಥಿ ನಾನಾ ನೀನಾ ಎನ್ನುವ ಪೈಟ್ ನಡೆಯುತ್ತಿದೆ.
ಮಾಜಿ ಶಾಸಕ ಜಗದೀಶ್ ಮೆಟಗುಡ್ ಹಾಗು ಮಾಜಿ ಶಾಸಕ ವಿ ಆಯ್ ಪಾಟೀಲ ಇಬ್ಬರೂ ಬೈಲಹೊಂಗಲ ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ಎಲ್ಲಿಲ್ಲದ ಲಾಭಿ ನಡೆಸಿದ್ದಾರೆ.ವಿಆಯ್ ಪಾಟೀಲ ಅವರಿಗೆ ಮಾಜಿ ಸಿಎಂ ಯಡಿಯೂರಪ್ಪ ನವರ ಆಶೀರ್ವಾದ ಇದೆ.ಜಗದೀಶ್ ಮೆಟಗುಡ್ ಅವರಿಗೆ ಕೇಂದ್ರ ಸಚಿವ ಪ್ಲಹಾದ್ ಜೋಶಿ ಅವರ ಆಶಿರ್ವಾದವಿದೆ.ಇಬ್ಬರು ಘಟಾನುಘಟಿ ನಾಯಕರಲ್ಲಿ ಬಿಜೆಪಿ ಟಿಕೆಟ್ ಯಾರಿಗೆ ಎನ್ನುವ ಜಿದ್ದಾಜಿದ್ದಿ ನಡೆಯುತ್ತಿದೆ.ಟಿಕೆಟ್ ಯಾರಿಗೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಬೈಲಹೊಂಗಲದ ಜನ ಬೆಟ್ಟಿಂಗ್ ಆಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಬೈಲಹೊಂಗಲ ಕ್ಷೇತ್ರದಲ್ಲಿ ಇಬ್ಬರೂ ಪ್ರಚಾರ ಮಾಡುತ್ತಿದ್ದಾರೆ ಇಬ್ಬರಿಗೂ ಟಿಕೆಟ್ ಸಿಗಬಹುದು ಎನ್ನುವ ಅಚಲ ವಿಶ್ವಾಸವಿದ್ದು ಇಬ್ಬರೂ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗೋವರೆಗೂ ಕುತೂಹಲ ಮುಂದುವರೆಯಲಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ