ಸಿಲಿಂಡರ್, ಹಾಲು ಉಚಿತ, ಬಿಜೆಪಿ ಪ್ರಣಾಳಿಕೆ ಬಿಡುಗಡೆ !

ಬೆಂಗಳೂರು :ಬಿಜೆಪಿ ಚುನಾವಣಾ ಪ್ರಣಾಳಿಕೆಯನ್ನು ಇಂದು ಬಿಡುಗಡೆ ಮಾಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಯಪ್ರಕಾಶ್ ನಡ್ಡಾ ಕರ್ನಾಟಕ ಚುನಾವಣೆಯ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ,
ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದಗೌಡ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಸೇರಿ ಹಲವು ನಾಯಕರು ಇದ್ದರು.

ಬಿಜೆಪಿಯ ಪ್ರಣಾಳಿಕೆ ರಚನೆ ವೇಳೆ ವಿಷಯ ತಜ್ಞರಿಂದ ಸುಮಾರು 900 ಸಲಹೆ ಬಂದಿದ್ದವು. ಜನರಿಂದ ಸುಮಾರು 6 ಲಕ್ಷ ಸಲಹೆ ಬಂದಿದ್ದವು ಎಂದು ಪ್ರಣಾಳಿಕೆ ಸಮಿತಿ ಸಂಚಾಲಕ ಹಾಗೂ ಸಚಿವ ಡಾ. ಕೆ.ಸುಧಾಕರ್‌ ಹೇಳಿದ್ದಾರೆ.

ಬಿಪಿಎಲ್‌ ಕಾರ್ಡ್‌ ಹೊಂದಿರುವ ಕುಟುಂಬಗಳಿಗೆ ವಾರ್ಷಿಕ ಮೂರು ಉಚಿತ ಸಿಲಿಂಡರ್‌ ಗ್ಯಾಸ್‌ ವಿತರಣೆ (ಯುಗಾದಿ, ಗಣೇಶ ಚತುರ್ಥಿ, ದೀಪಾವಳಿ)

ಪ್ರತಿ ವಾರ್ಡ್‌ಗಳಲ್ಲಿ ಅಟಲ್‌ ಆಹಾರ ಕೇಂದ್ರ
ಬಿಪಿಎಲ್‌ ಕಾರ್ಡ್‌ ಹೊಂದಿರುವವರಿಗೆ ಪ್ರತಿ ದಿನ ಅರ್ಧ ಲೀಟರ್‌ ನಂದಿನಿ ಉಚಿತ ಹಾಲು, ಪ್ರತಿ ತಿಂಗಳು 5 ಕೆಜಿ ಸಿರಿ ಅನ್ನ, ಸಿರಿ ಧಾನ್ಯ ವಿತರಣೆ

ಏಕರೂಪ ನಾಗರಿಕ ಸಹಿತೆ ಜಾರಿ

ಸರ್ವರಿಗೆ ಸೂರು ಯೋಜನೆ

ವಿಶ್ವೇಶ್ವರಯ್ಯ ವಿದ್ಯಾಯೋಜನೆಯಡಿ ಸರ್ಕಾರಿ ಶಾಲೆಗಳ ಉನ್ನತೀಕರಣ
ಸಮನ್ವಯ ಯೋಜನೆಯಡಿ ಸಣ್ಣ ಕೈಗಾರಿಗಳಲ್ಲಿ ಉದ್ಯೋಗಕ್ಕಾಗಿ ಒಡಂಬಡಿಕೆ
ಐಎಎಸ್‌ ಕೆಎಎಸ್‌ ಅಭ್ಯರ್ಥಿಗಳಿಗೆ ಆರ್ತೀಕ ನೆರವು
ಬಿಎಂಟಿಸಿ ಬಸ್‌ಗಳನ್ನು ಎಲೆಕ್ಟ್ರಿಕ್ ಬಸ್‌ಗಳಾಗಿ ಪರಿವರ್ತನೆ
ಮೈಕ್ರೋ ಕೋಲ್ಡ್ ಸ್ಟೋರೇಜ್‌ಗೆ 30 ಸಾವಿರ ಕೋಟಿ
ಎಸ್‌ಸಿ ಎಸ್‌ಟಿ ಮಹಿಳೆಯರಿಗೆ 10 ಸಾವಿರ ಠೇವಣಿ
ಅಟಲ್ ಬಿಹಾರಿ ಆಹಾರ ಕೇಂದ್ರ ಸ್ಥಾಪನೆಯ ಭರವಸೆ
ಸರ್ವರಿಗೂ ಸೂರು ಯೋಜನೆಯಡಿ 10 ಲಕ್ಷ ವಸತಿ ಸೌಲಭ್ಯ

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *