ಬೆಳಗಾವಿ ಅಭಿವೃದ್ಧಿ ಕುರಿತು ಮಾಸ್ಟರ್ ಪ್ಕ್ಯಾನ್…!!
ಬೆಳಗಾವಿ- ಬೆಳಗಾವಿ ರಾಜ್ಯದ ಎರಡನೇಯ ರಾಜಧಾನಿಯಾಗುವ ಹೊಸ್ತಿಲಲ್ಲಿ ಇರುವ ನಗರ,ಈ ನಗರವನ್ನು ಬೆಂಗಳೂರು ಮಾದರಿಯಲ್ಲೇ ಅಭಿವೃದ್ಧಿ ಮಾಡಲು ಲೋಕೋಪಯೋಗಿ, ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ ಎಂದು ಗೊತ್ತಾಗಿದೆ.
ಬೆಳಗಾವಿ ನಗರದಲ್ಲಿ ಭಾರಿ ವಾಹನಗಳ ಸಂಚಾರವನ್ನು ಡೈವೋರ್ಟ್ ಮಾಡಲು ಬೆಳಗಾವಿಯ ಗಾಂಧಿ ನಗರ ( ಸಂಕಮ್ ಹೊಟೇಲ್ ) ನಿಂದ ಪೀರನವಾಡಿಯವರೆಗೂ ಬೆಂಗಳೂರು ಮಾದರಿಯ ಫ್ಲೈ ಓವರ್ ಬ್ರೀಡ್ಜ್ ನಿರ್ಮಿಸಲು ಸತೀಶ್ ಜಾರಕಿಹೊಳಿ ಅವರು ಯೋಜನೆ ರೂಪಿಸಲು ಈಗಾಗಲೇ ಲೋಕೋಪಯೋಗಿ ಅಧಿಕಾರಿಗಳ ಜೊತೆ ಸಮಾಲೋಚನೆ ಮಾಡಿದ್ದು ಯೋಜನೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಬೆಳಗಾವಿಯ ಗಾಂಧಿನಗರ,ಸಂಕಮ್ ಹೊಟೇಲ್,- ಅಶೋಕ ವೃತ್ತ್, ರಾಯಣ್ಣ ಸರ್ಕಲ್- ಚೆನ್ನಮ್ಮ ಸರ್ಕಲ್- ಧರ್ಮವೀರ ಸಂಬಾಜಿ ಸರ್ಕಲ್- ಬಸವೇಶ್ವರ್ ಸರ್ಕಲ್ ಆರ್ ಪಿ ಡಿ ಸರ್ಕಲ್ ಮಾರ್ಗವಾಗಿ ಪೀರನವಾಡಿ ವರೆಗೂ ಮೇಲ್ಸೇತುವೆ ನಿರ್ಮಿಸಿ ಬೆಳಗಾವಿ ನಗರದ ಟ್ರಾಫಿಕ್ ದಟ್ಟನೆಯನ್ನು ನಿಯಂತ್ರಿಸಲು ಸಚಿವ ಸತೀಶ್ ಜಾರಕಿಹೊಳಿ ಅವರು ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದಾರೆ.
ಜೊತೆಗೆ ಬೆಳಗಾವಿ ಕೇಂದ್ರ ಬಸ್ ನಿಲ್ಧಾಣದಿಂದ ನಗರದಿಂದ ಹೊರಗೆ,ಹೋಗುವ,ಬರುವ ಬಸ್ ಗಳು ಈ ಮೇಲ್ಸೇತುವೆಯಿಂದ ಸಂಚರಿಸಲು ಲಿಂಕ್ ಮಾಡಲಾಗುತ್ತಿದೆ.ಎಂದು ಹೇಳಲಾಗುತ್ತಿದೆ.ಈ ಮೇಲ್ಸೇತುವೆ ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ಮಿಸುತ್ತಿರುವದರಿಂದ ಈ ಯೋಜನೆಗೆ ಮಂಜೂರಾತಿ ಸಿಗೋದು ಗ್ಯಾರಂಟಿ.