ಕೋಟೆ ಕೆರೆ ಆವರಣದಲ್ಲಿ ಅಮೃತ ವಾಟಿಕಾ ನಿರ್ಮಾಣಕ್ಕೆ ಚಾಲನೆ; ಸ್ವಾತಂತ್ರ್ಯ ಯೋಧರ ಸ್ಮರಣೆಗೆ ಶಿಲಾಫಲಕ
ಬೆಳಗಾವಿ, .-ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದಂತೆ “ನನ್ನ ಮಣ್ಣು ನನ್ನ ದೇಶ” (ಮೇರಿ ಮಾಟಿ ಮೇರಿ ದೇಶ್) ಅಭಿಯಾನದಡಿಯಲ್ಲಿ ಇಂದು ಬೆಳಗಾವಿ ಮಹಾನಗರ ಪಾಲಿಕೆಯ ವತಿಯಿಂದ ಕೋಟೆಕೆರೆ ಆವರಣದಲ್ಲಿ ಸ್ವಾತಂತ್ರ್ಯ ಯೋಧರ ಹೆಸರುಗಳನ್ನು ಒಳಗೊಂಡಿರುವ ಶಿಲಾಫಲಕ (ಸ್ಮಾರಕ) ಸಮರ್ಪಣೆ ಕಾರ್ಯಕ್ರಮ ನಡೆಯಿತು.
ಮಹಾಪೌರರಾದ ಶೋಭಾ ಸೋಮನಾಚೆ, ಸಂಸದರಾದ ಮಂಗಲ ಅಂಗಡಿ, ಉಪಮಹಾಪೌರರಾದ ರೇಷ್ಮಾ ಪಾಟೀಲ, ಮಹಾನಗರ ಪಾಲಿಕೆಯ ಆಯುಕ್ತರಾದ ಅಶೋಕ ದುಡಗುಂಟಿ, ಪಾಲಿಕೆಯ ನಗರ ಸೇವಕರುಗಳು, ಪಾಲಿಕೆಯ ಶಾಖಾ ಮುಖ್ಯಸ್ಥರು, ಜಿಲ್ಲಾಮಟ್ಟದ ಅಧಿಕಾರಿಗಳು, ಪೌರಕಾರ್ಮಿಕರು, ಮಾಳಿಗಳು ಶಾಲಾ ಮಕ್ಕಳುಗಳು, ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರು, ಬೀದಿ ವ್ಯಾಪಾರಿಗಳ ಪ್ರತಿನಿಧಿಗಳು ಹಾಗೂ ಎಸ್.ಹೆಚ್.ಜಿ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಅಮೃತ ವಾಟಿಕಾ ನಿರ್ಮಾಣ:
ತದನಂತರ ಬೆಳಗಾವಿ ಮಹಾನಗರ ಪಾಲಿಕೆಯ ವತಿಯಿಂದ ಕೋಟೆಕೆರೆ ಆವರಣದಲ್ಲಿ ನಿರ್ಮಿಸಿದ ಶಿಲಾಫಲಕ (ಸ್ಮಾರಕ)ದ ಹತ್ತಿರ “ನನ್ನ ಮಣ್ಣು ನನ್ನ ದೇಶ” (ಮೇರಿ ಮಾಟಿ ಮೇರಿ ದೇಶ್) ಅಭಿಯಾನದಡಿಯಲ್ಲಿ ಅಮೃತ ವಾಟಿಕಾ ನಿರ್ಮಾಣ ಕಾರ್ಯವನ್ನು ಅರಣ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಮಹಾಪೌರರಾದ ಶೋಭಾ ಸೋಮನಾಚೆ ಹಾಗೂ ಸಂಸದರಾದ ಮಂಗಲ ಅಂಗಡಿ ಅವರು 75 ಔಷಧಿಯ ಹಾಗೂ ಸ್ಥಳೀಯ ಸಸಿಗಳನ್ನು ನೆಟ್ಟರು.
ಮಹಾನಗರ ಪಾಲಿಕೆಯ ಆಯುಕ್ತರಾದ ಅಶೋಕ ದುಡಗುಂಟಿ ಹಾಗೂ ನಗರ ಸೇವಕರು ಸೇರಿದಂತೆ ನೂರಾರು ಜನರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
****