ಬೆಳಗಾವಿ:ಯಾರದ್ದೊ ದುಡ್ಡು ಯಲ್ಲಮ್ಮನ ಜಾತ್ರೆ ಎಂಬ ಗಾದೆ ಮಾತಿನಂತೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾರ್ವಜನಿಕ ಹಣ ದುಂದು ವೆಚ್ಚವಾಗಿದ್ದು ಬೆಳಕಿದೆ ಬಂದಿದೆ. ಸರ್ಕಾರದ ಅವಧಿಯಲ್ಲಿ ಸಚಿವರ ಸಚಿವರುಗಳ ಪ್ರಯಾಣ ಭತ್ಯಗೆ ಕೋಟಿ ಕೋಟಿ ಖರ್ಚಾಗಿದ್ದು ಎಲ್ಲರು ಹುಬ್ಬೆರಿಸುವಂತೆ ಮಾಡಿದೆ. ಹಾಗಿದ್ರೆ ಸಚಿವರುಗಳು ಖರ್ಚು ಮಾಡಿದ ಪ್ರಯಾಣದ ಭತ್ಯೆ ಮಾಹಿತಿ ಹಕ್ಕಿನಡಿ ದಾಖಲೆ ಬೆಳಕಿಗೆ ಬಂದಿದೆ.
ಬಿಜೆಪಿ ಸರಕಾರ ಅವಧಿಯಲ್ಲಿ ಅಂದ್ರೆ 2019 -20 ನೆ ಸಾಲಿನಿಂದ 2022-23ರ ರವರೆಗೆ ಸಚಿವರ ಪ್ರಯಾಣ ಭತ್ಯೆಗಾಗಿ ಸರ್ಕಾರ ಖಜಾನೆಯಿಂದ ಕೋಟಿ ಕೋಟಿ ಖರ್ಚು ಆಗಿದೆ. ನಾಲ್ಕು ವರ್ಷಗಳಲ್ಲಿ 15 ಕೋಟಿ 72 ಲಕ್ಷ 72 ಸಾವಿರದ 727 ರೂಪಾಯಿ ಖರ್ಚಾಗಿದೆ.
ಈ ಕುರಿತು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಮಾಹಿತಿ ಹಕ್ಕಿನಡಿ ಮಾಹಿತಿ ಕೇಳಿದ್ದರು, ಮಾಹಿತಿ ಲಭ್ಯವಾಗಿದ್ದು ಎಲ್ಲ ಸಚಿವರು ಸರ್ಕಾರದ ಖನಾಯಿಂದ ಸಾರ್ವಜನಿಕ ಹಣವನ್ನು ಬೇಕಾ ಬಿಟ್ಟಿಯಾಗಿ ದುಂದು ವೆಚ್ಚ ಮಾಡಿದ್ದಾರೆ.
ಇನ್ನು ನಾಲ್ಕು ವರ್ಷಗಳಲ್ಲಿ ಯಾವ ಸಚಿವರುಗಳು ಎಷ್ಟು ಎಷ್ಟು ಪ್ರಯಾಣ ಭತ್ಯೆ ತೆಗೆದುಕೊಂಡಿದ್ದಾರೆ ಅನ್ನೊದು ನೋಡೊದಾದ್ರೆ. ಬಿಜೆಪಿ ಸರಕಾರದಲ್ಲಿ ಸರಳ ಸಜ್ಜನ ಸಚಿವರೆಂದೇ ಖ್ಯಾತಿ ಪಡೆದಿದ್ದ ಕೋಟಾ ಶ್ರೀನಿವಾಸ ಪೂಜಾರಿ ಅವರು 1 ಕೋಟಿ,26 ಲಕ್ಷ 71 ಸಾವಿರ 674 ರೂಪಾಯಿ ರೂಪಾಯಿ ಖರ್ಚು ಮಾಡಿ ಪ್ರಥಮ ಸ್ಥಾನದಲ್ಲಿದ್ದರೆ, ಪಶು ಸಂಗೋಪನೆ ಸಚಿವರಾಗಿದ್ದ ಪ್ರಭು ಚವ್ಹಾನ್ ಅವರು 99 ಲಕ್ಷ 15 ಸಾವಿರ 442 ರೂಪಾಯಿ ಖರ್ಚು ಮಾಡಿ ಎರಡನೇ ಸ್ಥಾನ ಪಡೆದಿದ್ದಾರೆ. ಇನ್ನು ಸಿ. ಪಿ. ಯೋಗೀಶ್ವರ ಅವರು ಕೇವಲ 1 ಲಕ್ಷ 44. ಸಾವಿರ 100 ರೂಪಾಯಿ ಖರ್ಚು ಮಾಡಿ ಮೂರನೆಯ ಸ್ಥಾನದಲ್ಲಿದ್ದಾರೆ..
ಒಟ್ಟಿನಲ್ಲಿ ಇನ್ನಾದರೂ ಸಚಿವರುಗಳು ಸರ್ಕಾರದಿಂದ ಅನೇಕ ಸಹಾಯ ಸವಲತ್ತುಗಳನ್ನು ಪಡೆದು ತಮ್ಮ ತಮ್ಮ ಕ್ಷೇತ್ರದಲ್ಲಿ ಸಂಚಾರ ಮಾಡಿ ಬಡವರ ಸಮಸ್ಯೆಗೆ ಪರಿಹಾರ ನೀಡಬೇಕು ಎಂಬುದು ಎಲ್ಲರ
ಆಸೆಯಾಗದಿದೆ.