ಬೆಳಗಾವಿ-ಲೋಕೋಪಯೋಗಿ ಇಲಾಖೆಯ ಎಕ್ಸಿಕ್ಯುಟಿವ್ ಇಂಜಿನಿಯರ್ ಮುಂದೆ ವ ಗುತ್ತಿಗೆದಾರನೊಬ್ಬ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ.
ಎಕ್ಸಿಕ್ಯುಟಿವ್ ಇಂಜಿನಿಯರ್ ಎಸ್.ಎಸ್ ಸೋಬರದ ಅವರ ಎದುರು ಗುತ್ತಿಗೆದಾರ, ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.ಬೆಳಗಾವಿಯ ಕೋಟೆ ಆವರಣದಲ್ಲಿರುವ PWD ಕಚೇರಿಯ ಎದುರೇ ಈ ಘಟನೆ ನಡೆದಿದೆ.ರಸ್ತೆ ನಿರ್ವಹಣೆ ಬಿಲ್ ಮಂಜೂರು ಮಾಡದ ಹಿನ್ನೆಲೆಯಲ್ಲಿ ವಿಷ ಕುಡಿದು ಅತ್ಮಹತ್ಯೆಗೆ ಯತ್ನಿಸಿದ್ದಾನೆ.
ಕೂಡಲೇ ಗುತ್ತಿಗೆದಾರ ನಾಗಪ್ಪ ಬಂಗಿಯನ್ನ ಆಸ್ಪತ್ರೆಗೆ ಸೇರಿಸಲಾಗಿದೆ.
ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರ ತವರು ಜಿಲ್ಲೆಯಲ್ಲಿ ಗುತ್ತಿಗೆದಾರರಿಗೆ ಸಂಕಷ್ಟ ಎದುರಾಗಿದೆ.ವರ್ಕ್ ಆರ್ಡರ್ ಪಡೆದು ಕಾಮಗಾರಿ ಮಾಡಿದ್ರೂ ಬಿಲ್ ಆಗ್ತಿಲ್ಲ.ಕಳೆದ ಒಂದು ವರ್ಷದಿಂದ ಕಚೇರಿಗೆ ಅಲೆದು ಅಲೆದು ಸುಸ್ತಾದ ಗುತ್ತಿಗೆದಾರ,ಅಧಿಕಾರಿಗಳ ವರ್ತನೆಗೆ ಬೇಸತ್ತು ವಿಷದ ಬಾಟಲ್ ಜತೆಗೆ ಕಚೇರಿಗೆ ಆಗಮಿಸಿ,ಬೆಳಗಾವಿ ನಗರದ ಕೋಟೆ ಆವರಣದಲ್ಲಿರುವ ಲೋಕೋಪಯೋಗಿ ಇಲಾಖೆ ಕಚೇರಿ ಎದುರು ವಿಷದ ಬಾಟಲಿಯನ್ನು ಮುಂದಿಟ್ಟುಕೊಂಡು,ಬೇಜವಾಬ್ದಾರಿ ತೋರಿದ ಅಧಿಕಾರಿಗಳು ಬರದಿದ್ರೇ ವಿಷ ಕುಡಿಯುವುದಾಗಿ ಎಚ್ಚರಿಕೆ ನೀಡಿದ್ದ,ಗಣಿಕೊಪ್ಪ ಗ್ರಾಮದ ನಾಗಪ್ಪ ಬಂಗಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
2022ರಲ್ಲಿ ಹಲಗಾ ಗ್ರಾಮದಿಂದ ತಿಗಡಿ ಗ್ರಾಮದ ವರೆಗೆ ರಸ್ತೆ ಕಾಮಗಾರಿ ಮಾಡಿದ್ದ ಈತನಿರ್ಮಿಸಿದ್ದ ರಸ್ತೆ ನಿರ್ವಹಣೆಗೆ ಇಲಾಖೆಯಿಂದ ವರ್ಕ್ ಆರ್ಡರ್ ಪಡೆದಿದ್ದ.
6ಲಕ್ಷ 50ಸಾವಿರ ವೆಚ್ಚದಲ್ಲಿ ಈಗಾಗಲೇ ಕಾಮಗಾರಿ ಮುಗಿಸಿರುವ ಗುತ್ತಿಗೆದಾರ.
ಕಾಮಗಾರಿ ಮುಗಿದ್ರೂ ಬಿಲ್ ಕೊಡದೇ ಅಧಿಕಾರಿಗಳು ಸತಾಯಿಸುತ್ತಿರುವಎಇಇ ರಾಮೇಶ್ ಹೆಗಡೆ, ಎಇಇ ಬಸವರಾಜ್ ಹಲಗಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ.