ಹುಲಿ ಉಗುರು…ಉಳ್ಳವರಿಗೆ ಬೆವರು..ಅರಣ್ಯ ಅಧಿಕಾರಿಗಳ ಖದರು…!!

ಬೆಳಗಾವಿ- ಹಳ್ಳಿಯಲ್ಲಿ ಹುಲಿ ಉಗುರು ಕೊರಳಲ್ಲಿ ಹಾಕಿಕೊಂಡವನೇ ಸಾಹುಕಾರ್ ಎನ್ನುವ ಪ್ರತೀತಿಯಿದೆ. ಹೀಗಾಗಿ ಉಳ್ಳವರು ಇದನ್ನು ಧರಿಸಿ ಫೋಸ್ ಕೊಡುವದು ಹೊಸದೇನಲ್ಲ.ಆದ್ರೆ ಇದೇ ಹುಲಿ ಉಗುರು ಈಗ ಉಳ್ಳವರ ಬೆವರು ಇಳಿಸುತ್ತಿರುವದು ಸತ್ಯ.

ರಾಜಕಾರಣಿಗಳ ಮಕ್ಕಳೂ ಕೊರಳಲ್ಲಿ ಹುಲಿ ಉಗುರಿನ ಪೆಂಡೆಂಟ್ ಹಾಕಿಕೊಂಡು ಶೋ ಮಾಡ್ತಿದ್ದವರು ಇದೀಗ ಸೈಲೆಂಟ್ ಆಗಿದ್ದಾರೆ. ಅವನು ನಾನಲ್ಲ,ಅದು ನನ್ನದಲ್ಲ.ಯಾರೋ ಗಿಫ್ಟ್ ಕೊಟ್ಟಿದ್ದು,ಇನ್ನೂ ಅದು ಹುಲಿ ಉಗುರಿನ ಪೆಂಡೆಂಟ್ ಅಲ್ಲಾ ಪ್ಲಾಸ್ಟಿಕ್ ದ್ದು ಅಂತಾ ಹೇಳ್ತಿದ್ದಾರೆ.ಆದ್ರೇ ಜನ ಸಾಮಾನ್ಯರು ಮಾತ್ರ ಅರೇ ದೊಡ್ಡವರ ಮಕ್ಕಳೆಲ್ಲಾ ಪ್ಲಾಸ್ಟಿಕ್ ಪೆಂಡೆಂಟ್ ಹಾಕಿಕೊಳ್ತಾರಾ….?? ಎಂದು ಪ್ರಶ್ನೆ ಮಾಡ್ತೀದ್ದಾರೆ.

ಲಕ್ಷ್ಮಣ ಸವದಿ ಪುತ್ರ ಮತ್ತು ಲಕ್ಷ್ಮೀ ಹೆಬ್ಬಾಳಕರ್ ಪುತ್ರನ ಕೊರಳಲ್ಲಿ ಹುಲಿ ಉಗುರು ಇರೋ ಪೋಟೋ ಸೋಶಿಯಲ್ ಮೀಡಿಯಾದಲ್ಲಿ,ದೃಶ್ಯ ಮಾಧ್ಯಮ ಗಳಲ್ಲಿ ವೈರಲ್ ಆಗಿದ್ದವು ಹೀಗಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಇಂದು ಬೆಳಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಕುವೆಂಪು ನಗರದಲ್ಲಿ ಇರುವ ಲಕ್ಷ್ಮೀ ಹೆಬ್ಬಾಳಕರ್ ಅವರ ಮನೆಗೆ ಹೋಗಿದ್ರು ಲಕ್ಷ್ಮೀ ಪುತ್ರ ಮೃನಾಲ ಹೆಬ್ಬಾಳಕರ ಅವರನ್ನು ವಿಚಾರಿಸಿ,ಹುಲಿ ಉಗುರಿನ ಕುರಿತು ಮಾಹಿತಿ ಪಡೆದುಕೊಂಡ್ರು,ಇದನ್ನು ಕೊಟ್ಟವರು ಯಾರು ? ಎಲ್ಲಿಂದ ಬಂತು,ಅದು ಅಸಲಿಯೋ..ನಕಲಿಯೋ..? ಎನ್ನುವ ಹಲವಾರು ಪ್ರಶ್ನೆಗಳನ್ನು ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ.ಜೊತೆಗೆ ಹುಲಿ ಉಗುರಿನ ಶ್ಯಾಂಪಲ್ ಕಲೆಕ್ಟ್ ಮಾಡಿ ಎಫ್ ಎಸ್ ಎಲ್ ಗೆ ಕಳುಹಿಸುತ್ತೇವೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳಿಕೊಂಡಿದ್ದಾರೆ

ಸವದಿ ಪುತ್ರನೂ ಸಹ ಹುಲಿ ಉಗುರು ನನ್ನದಲ್ಲಿ ಸಹೋದರನ ಮದುವೆಯಲ್ಲಿ ಯಾರೋ ಗೀಫ್ಟ್ ಕೊಟ್ಟದ್ದು ಅದು ಪ್ಲಾಸ್ಟೀಕ್ ಉಗುರು ಎಂದು ಹೇಳಿಕೊಂಡಿದ್ದಾರೆ.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *