ಗೋಕಾಕ (ನವಂಬರ್.9): ಕಂಪನಿಯೊಂದರ ಕೆಲಸ ಮುಗಿಸಿಕೊಂಡು ವಾಪಸ್ ಬೈಕ್ನಲ್ಲಿ ಸಾಗುತ್ತಿದ್ದ ಯುವಕನೋರ್ವನ ಮೇಲೆ ದುಷ್ಕರ್ಮಿಗಳಿಂದ ದಾಳಿ ನಡೆಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಗೋಕಾಕ ತಾಲೂಕಿನ ಶಿವಾಪೂರ ಹೊರವಲಯ ಮಡ್ಡಿ ಸಿದ್ದಪ್ಪನ ದೇವಸ್ಥಾನದ ಸಮೀಪದ ನಿನ್ನೆ ರಾತ್ರಿ 8.30 ಗಂಟೆಗಳ ನಡೆದಿದೆ.
ಶಿವಶಂಕರ ಶಿವಪುತ್ರ ಮಗದುಮ್ಮ ಸಾವಳಗಿ ನಿವಾಸಿ (35) ಮೃತ ಯುವಕ. ಮೃತನ ಕೊಲ್ಲಲು ಮೊದಲೇ ಹೊಂಚು ಹಾಕಿ ಕಾದು ಕುಳಿತ್ತಿದ್ದ ದುಷ್ಕರ್ಮಿಗಳು ಅವನ ಬೈಕ್ನಲ್ಲಿ ಬರುತ್ತಿದ್ದ ಹಾಗೆ ಸಿನಿಮೀಯ ರೀತಿಯಲ್ಲಿ ಅಡ್ಡಗಟ್ಟಿ ರಾತ್ರಿ ಅಟ್ಯಾಕ್ ಮಾಡಿದ್ದಾರೆ. ಜನ ನಿಬಿಡವಾದ ನಡು ರಸ್ತೆಯಲ್ಲಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಬೆಳಗಾವಿಯ ರಿಲಯನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಶಿವಶಂಕರ ಕೊಲೆಗೆ ನಿಕರ ಕಾರಣ ತಿಳಿದು ಬಂದಿಲ್ಲ ಗೋಕಾಕ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಸಿಪಿಐ ಗೋಪಾಲ್ ರಾಥೋಡ್ ಪಿಎಸ್ಐ ಕಿರಣ್ ಮೋಹಿತ್ ಹಾಗೂ ಪೊಲೀಸ್ ಸಿಬ್ಬಂದಿಗಳಿಂದ ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿದುಬಂದಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ