ಬೆಳಗಾವಿ-ಬೆಳಗಾವಿದಂಡು ಮಂಡಳಿ ಸಿಇಒ ಕೆ.ಆನಂದ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಶುರುವಾಗಿದೆ.ಕ್ಯಾಂಪ್ ಪ್ರದೇಶದಲ್ಲಿರುವ ಕೆ.ಆನಂದ ನಿವಾಸಕ್ಕೆ ನಗರ ಪೊಲೀಸ್ ಆಯುಕ್ತರ ಭೇಟಿ ನೀಡಿ ಪರಶೀಲನೆ ನಡೆಸಿದ್ದಾರೆ.
ಪೊಲೀಸ್ ಆಯುಕ್ತ ಸಿದ್ದರಾಮಪ್ಪ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.ಭೇಟಿ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಅವರು,ಕೆ.ಆನಂದ ಅವರ ರೂಮ್ ನಲ್ಲಿ ಡೆತ್ ನೋಟ್ ಸಿಕ್ಕಿದೆ,ಅದರಲ್ಲಿ ಯಾವೆಲ್ಲಾ ಅಂಶ ಇದೆ ಅನ್ನೋದನ್ನ ಪರಿಶೀಲನೆ ಮಾಡುತ್ತೇವೆ.ಆದ್ರೇ ಯಾವೊಬ್ಬ ಅಧಿಕಾರಿಗಳ ಕಿರುಕುಳ ಅಂತಾ ಅದರಲ್ಲಿ ಬರೆದಿಲ್ಲ.ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ್ರೂ ಅನ್ನೋದು ತನಿಖೆ ಬಳಿಕ ಗೊತ್ತಾಗುತ್ತೆ ಎಂದರು.
ಬೆಡ್ ಮೇಲೆ ವಿಷದ ಬಾಟಲ್ ಸಿಕ್ಕಿದೆ.ಮೂಗಿನಿಂದ ರಕ್ತ ಬಂದಿದ್ದು, ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಕಂಡು ಬಂದಿದೆ.ಕಂಟೋನ್ಮೆಂಟ್ ಬೋರ್ಡ್ ಸಿಬ್ಬಂದಿ, ಕುಟುಂಬಸ್ಥರನ್ನ ವಿಚಾರಣೆ ಮಾಡುತ್ತೇವೆ. ಎಂದು ಕಮಿಷನರ್ ಹೇಳಿದ್ರು.
ಬಲ್ಲ ಮೂಲಗಳ ಪ್ರಕಾರ ಆತ್ಮಹತ್ಯೆ ಮಾಡಿಕೊಂಡ ಸಿಇಓ ಆನಂದ್ ಅವರು ಆನ್ ಲೈನ್ ಗೇಮೀಂಗ್ ನಲ್ಲಿ ಲಕ್ಷಾಂತರ ರೂ ಹಣ ಕಳೆದುಕೊಂಡಿದ್ದರು.ಎಂದು ಹೇಳಲಾಗುತ್ತಿದೆ.ಪೋಲೀಸರ ತನಿಖೆಯ ನಂತರವೇ ಸಾವಿಗೆ ಕಾರಣ ಏನು ಅನ್ನೋದು ಗೊತ್ತಾಗಲಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ