ಬೆಳಗಾವಿ- ಅಯೋಧ್ಯೆಯಲ್ಲಿ ನಿರ್ಮಿಸಿದ ರಾಮಮಂದಿರದ ಶ್ರೀರಾಮನ ಮೂರ್ತಿ ಸಿದ್ಧವಾಗಿದ್ದು ಕರ್ನಾಟಕದಲ್ಲಿ ಮೂರ್ತಿಯ ಶಿಲ್ಪಿ ಕೂಡಾ ನಮ್ಮ ನೆಲದವರು,ಮೂರ್ತಿಗೆ ನಮ್ಮ ನೆಲದ ಕಲ್ಲನ್ಬು ಉಪಯೋಗಿಸಲಾಗಿದೆ. ಇದು ಶ್ರೀರಾಮ ಮೂರ್ತಿಯ ವೈಶಿಷ್ಟ್ಯ.
ರಾಜ್ಯದ ಹೆಮ್ಮೆಯ ಶಿಲ್ಪಿ ಅರುಣ್ ಯೋಗಿರಾಜ್ ಅವರ ಕೆತ್ತನೆಯ ಶ್ರೀರಾಮನ ಮೂರ್ತಿ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲು ಆಯ್ಕೆಯಾಗಿದೆ.ಶ್ರೀರಾಮನ ವಿಗ್ರಹ ಕೆತ್ತನೆಗೆ ಬಳಸಲಾದ ಕಲ್ಲು ಸಹ ನಮ್ಮ ಕರ್ನಾಟಕದ ಎಚ್.ಡಿ.ಕೋಟೆಯದ್ದು ಎಂಬುದು ಕರ್ನಾಟಕಕ್ಕೆ ಮತ್ತೊಂದು ಗರಿ.
ಶ್ರೀರಾಮನ ಮೂರ್ತಿ ಕೆತ್ತುವ ಐತಿಹಾಸಿಕ ಮತ್ತು ಪುಣ್ಯ ಕಾರ್ಯದಲ್ಲಿ ಭಾಗಿಯಾದ ಕರುನಾಡಿನ ಹೆಮ್ಮೆಯ ಶಿಲ್ಪಿಗೆ ದೇಶದ ಮೂಲೆ ಮೂಲೆಗಳಿಂದ ಅಭಿನಂದನೆಗಳ ಸುರಿಮಳೆ