Breaking News

ಸಿಂಗಲ್ ಲವ್ ಡಬಲ್ ದೋಖಾ….ಕಿತ್ತೂರಿನಲ್ಲಿ ಕಿತ್ತಾಟ…!!

ಬೆಳಗಾವಿ- ಪಕ್ಕದ ಮನೆ ಹುಡುಗಿಯ ಜೊತೆ ಲವ್ ಮಾಡಿ, ಕಳೆದ ಆರು ವರ್ಷಗಳಿಂದ ಸಂಬಂಧ ಬೆಳೆಸಿಕೊಂಡಿದ್ದ ಆ ಯುವಕ ಲವ್ ಮಾಡಿದ ಯುವತಿಯ ಜೊತೆ ತಾನು ಮದುವೆ ಆಗದೇ, ಬೇರೆ ಯುವಕನ ಜೊತೆ ಮದುವೆ ಮಾಡಿಕೊಂಡಿದ್ದ ಲವರ್ ಮದುವೆಯನ್ನು ಮುರಿದ ಮೋಸಗಾರ ಪ್ರೇಮಿ ಈಗ ಮನೆ ಬಿಟ್ಟು ಪರಾರಿಯಾದ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ನಡೆದಿದೆ.

ಕಿತ್ತೂರಿನ ಮುತ್ತುರಾಜ್ ಎಂಬ ಯುವಕ ಪಕ್ಕದ ಮನೆ ಹುಡುಗಿ ಜೊತೆ ಲವ್ ಮಾಡಿದ್ದ,ನಂತರ ಮದುವೆಗೆ ಮುತ್ತುರಾಜ್ ನ ಪೋಷಕರು ಒಪ್ಪಲಿಲ್ಲ, ಈ ಮದುವೆ ಸಾಧ್ಯವಿಲ್ಲ ನೀನು ಬೇರೆ ಹುಡುಗನ ಜೊತೆ ಮದುವೆ ಆಗು ಎಂದು ಮುತ್ತುರಾಜ್ ಒಪ್ಪಿಗೆ ಕೊಟ್ಟ ಹಿನ್ನಲೆಯಲ್ಲಿ ಆ ಹುಡುಗಿ ಆಯ್ತು ಅಂತಾ ಬೇರೆ ಹುಡುಗನ ಜೊತೆ ಮದುವೆ ಮಾಡಿಕೊಂಡಿದ್ದಳು.

ಹುಡುಗಿಯ ಕುಟುಂಬದವರು ಲಕ್ಷಾಂತರ ರೂ ಖರ್ಚು ಮಾಡಿ ಮದುವೆ ಮಾಡಿದ್ದರು.ಮದುವೆಯ ದಿನವೇ ಮುತ್ತುರಾಜ್ ಪಕ್ಕದ ಮನೆಯ ಹುಡುಗಿಯ ಜೊತೆ ತೆಗಿಸಿಕೊಂಡಿದ್ದ ಖಾಸಗಿ ವಿಡಿಯೋ ಮತ್ತು ಪೋಟೋಗಳನ್ನು ಮದುವೆ ಮಾಡಿಕೊಂಡ ಹುಡುಗನಿಗೆ ಶೇರ್ ಮಾಡಿದ ಕಾರಣ ಮದುವೆ ಈಗ ಮುರಿದು ಬಿದ್ದಿದೆ. ಆ ಹುಡುಗಿ ಈಗ ಕಿತ್ತೂರಿಗೆ ವಾಪಸ್ ಬಂದಿದ್ದಾಳೆ.

ಮುತ್ತುರಾಜ್ ಎಂಬ ಮೋಸಗಾರ ಪ್ರೀತಿಸಿದ ಹುಡುಗಿಯನ್ನು ಮದುವೆ ಆಗದೇ ಬೇರೆಯವನ ಜೊತೆ ಆಗಿದ್ದ ಮದುವೆಯನ್ನು ಸಹಿಸಿಕೊಳ್ಳದೇ ಖಾಸಗಿ ವಿಡಿಯೋಗಳನ್ನು ಮದುವೆ ಮಾಡಿಕೊಂಡಿದ್ದ ಹುಡುಗನಿಗೆ ಕಳುಹಿಸಿದ ಪರಿಣಾಮ ಆ ಹುಡುಗಿಯ ಬದುಕು ಈಗ ಅತಂತ್ರವಾಗಿ ಮುತ್ತುರಾಜನ ಹಲ್ಕಟ್ ಗಿರಿಯಿಂದ ಹುಡುಗಿಯ ಬದುಕು ಬೀದಿಗೆ ದಿದ್ದು ಮುತ್ತುರಾಜ್ ನಿಂದ ಮೋಸ ಹೋಗಿರುವ ಆ ಹುಡುಗಿ ಈಗ ಮುತ್ತುರಾಜನ ಮನೆಯ ಎದುರು ಧರಣಿ ಕುಳಿತಿದ್ದಾಳೆ.

ಮುತ್ತುರಾಜ್ ಮನೆಯ ಗೃಹಪ್ರವೇಶ ಕಾರ್ಯಕ್ರಮ ಇತ್ತು ಮುತ್ತುರಾಜ್ ನಿಂದ ಅನ್ಯಾಯಕ್ಕೊಳಗಾದ ಆ ಯುವತಿ ಈಗ ತನ್ನ ಕುಟುಂಬದವರ ಜೊತೆ ಮುತ್ತುರಾಜನ ಮನೆಯ ಎದುರು ಧರಣಿ ಮಾಡ್ತಿದ್ದಾಳೆ ಈ ಯುವತಿಗೆ ಕಿತ್ತೂರಿನ ಜನ ಸಾಥ್ ಕೊಡುತ್ತಿದ್ದಾರೆ.

ಮದುವೆ ಮುರಿದ ಪಾಗಲ್ ಪ್ರೇಮಿ ಈಗ ಎಸ್ಕೆಪ್ ಆಗಿದ್ದಾನೆ.ಇನ್ನು ನ್ಯಾಯ ಕೊಡಿಸುವಂತೆ ಎರಡ್ಮೂರು ಸಲ ಕಿತ್ತೂರು ಠಾಣೆ ಮೆಟ್ಟಿಲೇರಿರುವ ಪೋಷಕರು, ಪೊಲೀಸರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲವೆಂಬುದು ಯುವತಿ, ಪೋಷಕರು ಆರೋಪಿಸಿದ್ದಾರೆ.ಜೀವನ ಹಾಳು ಮಾಡಿದ ಪಾಗಲ್ ಪ್ರೇಮಿ ಮುತ್ತುರಾಜ ಮನೆ ಎದುರು ಯುವತಿ ಪ್ರೇತಿಭಟನೆ ನಡೆಸುತ್ತಿದ್ದಾಳೆ.

ಯುವತಿ ಮನೆ ಎದುರು ಬರುತ್ತಿದ್ದಂತೆ ಬಾಗಿಲು ಹಾಕಿಕೊಂಡು ಒಳಗೆ ಕುಳಿತುಕೊಂಡ ಮುತ್ತುರಾಜ್‌ನ ಸಹೋದರಿಯರುಈ ವೇಳೆ ಮುತ್ತುರಾಜ್ ಪೋಷಕರು, ಸಹೋದರಿಯರ ವಿರುದ್ಧ ಯುವತಿ ಪೋಷಕರ ನಡುವೆ ಗಲಾಟೆ ಆಗಿದೆ.ಉಭಯ ಕುಟುಂಬಸ್ಥರ ಮಧ್ಯೆ ಕೆಲಹೊತ್ತು ವಾಗ್ವಾದ, ಹೊಸ ಮನೆಯಲ್ಲಿ ಹೈಡ್ರಾಮಾ ನಡೆಯುತ್ತಿದೆ.

ಪೋಷಕರು ಮನೆ ಒಳಗಿದ್ದರೆ, ಇತ್ತ ರಾತ್ರಿಯಿಡಿ ಮನೆ ಮುಂದೆಯೇ ಕುಳಿತ ಯುವತಿ-ತಾಯಿ,ನಮ್ಮ ಪುತ್ರಿಯನ್ನು ಮದುವೆ ಮಾಡಿಕೊಂಡು ಬಾಳು ಕೊಡುವಂತೆ ಮುತ್ತುರಾಜ‌ಗೆ ಯುವತಿಯ ಪೋಷಕರ ಆಗ್ರಹಿಸಿದ್ದಾರೆ. ಮುತ್ತುರಾಜ ಮತ್ತು ಆತನ ಕುಟಬದವರ ವಿರುದ್ಧ ಈಗ ಕೇಸ್ ದಾಖಲಾಗಿದೆ.ಕರಿಮಣಿ ಮಾಲೀಕ ಇವನೂ ಇಲ್ಲ,ಅವನೂ ಇಲ್ಲ..ಎನ್ನುವಂತಾಗಿದೆ ಕಿತ್ತೂರಿನ ಹುಡುಗಿಯ ಸ್ಥಿತಿ..

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *