ಬೆಳಗಾವಿ- ವಾರಂಟ್ ಜಾರಿ ಮಾಡಲು ಹೋದ ಪೋಲೀಸ್ ಪೇದೆಗೆ ಬೀದಿ ನಾಯಿ ಕಚ್ಚಿದ ಘಟನೆ ಬೆಳಗಾವಿ ಪಕ್ಕದ ಕಾಕತಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಾಕತಿ ಪೋಲೀಸ್ ಠಾಣೆಯ ಪೋಲೀಸ್ ಪೇದೆಯೊಬ್ಬ ಬೆನ್ನಾಳಿ ಗಾಮದಲ್ಲಿ ವಾರಂಟ್ ಜಾರಿ ಮಾಡಲು ಹೋಗುತ್ತಿರುವಾಗ ಬೀದಿ ನಾಯಿಯೊಂದು ಕಚ್ಚಿದ ಪರಿಣಾಮ ಪೋಲೀಸ್ ಪೇದೆ ಗಾಯಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಘಟನೆ ನಿನ್ನೆ ರಾತ್ರಿ ನಡೆದಿದೆ.
ಕಾಕತಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನೇಕ ಕಾಡಂಚಿನ ಕುಗ್ರಾಮಗಳು ಬರುತ್ತವೆ.ಈ ವ್ಯಾಪ್ತಿಯ ಬಹುತೇಕ ಗ್ರಾಮಗಳು ರಾತ್ರಿ 8 ಗಂಟೆಯಾದ್ರೆ ಸಾಕು ನಿಶ್ಯಭ್ಧವಾಗುತ್ತವೆ.ಸ್ಮಶಾನಮೌನ ಆವರಿಸುತ್ತದೆ. ಇಂತಹ ಗ್ರಾಮಗಳಲ್ಲಿ ರಾತ್ರಿ ಹೊತ್ತು ಪೋಲೀಸ್ ಪೇದೆ ಒಂಟಿಯಾಗಿ ಬೀಟ್ಸ್ ರೌಂಡ್ಸ್ ಹಾಕೋದು ಕಷ್ಟ,ಯಾಕಂದ್ರೆ ಈ ಪ್ರದೇಶಗಳಲ್ಲಿ ಕಾಡು ಪ್ರಾಣಿಗಳ ಭಯ ಇರುತ್ತದೆ. ಕಾಕತಿ ಪೋಲೀಸ್ ಠಾಣೆಯ ವ್ಯಾಪ್ತಿಯ ಗ್ರಾಮಗಳಲ್ಲಿ ಒಂಟಿ ಪೋಲೀಸ್ ಪೇದೆ ಬೀಟ್ಸ್ ರೌಂಡ್ ಹಾಕುವ ಬದಲು ಪೋಲೀಸ್ ಪೇದೆಗಳ ತಂಡ, ರೌಂಡ್ಸ್ ಹಾಕುವ ವ್ಯವಸ್ಥೆ ಆಗಬೇಕಿದೆ.
ರಾತ್ರಿ ಹೊತ್ತು ಪೋಲೀಸರು ಬೀಟ್ ರೌಂಡ್ಸ ಹಾಕುವಾಗ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇವರ ರಕ್ಷಣೆಯ ಜವಾಬ್ದಾರಿ ಮೇಲಾಧಿಕಾರಿಗಳ ಮೇಲಿದೆ,ವಾರಂಟ್ ಜಾರಿ ಮಾಡಲು ಹೋದ ಪೋಲೀಸ್ ಪೇದೆ ಬೀದಿ ನಾಯಿ ಕಚ್ಚಿದ ಪರಿಣಾಮ ಪೇದೆ ಗಾಯಗೊಂಡು ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾನೆ.