ಸಿಬಿಟಿ ಡ್ರೈವರ್ ಗೆ ಏರ್ ಗನ್ ತೋರಿಸಿ ದಾದಾಗಿರಿ
ಬೆಳಗಾವಿ: ಕಾರ್ ಚಾಲಕನೊಬ್ಬ ಕೆಎಸ್ ಆರ್ ಟಿಸಿ ಡ್ರೈವರ್ ಗೆ ಏರ್ ಗನ್ ತೋರಿಸಿ ದಾದಾಗಿರಿ ಪ್ರದರ್ಶಿಸಿರುವ ಘಟನೆ ಬೆಳಗಾವಿ ಆರ್‌ಎನ್ ಶೆಟ್ಟಿ ಕಾಲೇಜು ಸರ್ಕಲ್ ಬಳಿ ಮಧ್ಯಾಹ್ನ ನಡೆದಿದೆ.
ಕೆಎಸ್ ಆರ್ ಟಿಸಿ ಬಸ್ ಗೆ ಕಾರು ಎದುರು ಆಗಿದೆ. ಆಗ ಕಾರಿನಲ್ಲಿದ್ದ ಅಜಂ ನಗರದ ಮಹಮ್ಮದ್ ಷರೀಫ್ ಕೆಎಸ್ ಆರ್ ಟಿಸಿ ಬಸ್ ಚಾಲಕ ಮಲ್ಲಿಕಾರ್ಜುನ ಅಂಕಲಿ ಇಬ್ಬರ ನಡುವೆ ಅವಾಚ್ಯ ಶಬ್ದಗಳಿಂದ ನಿಂದನೆ ನಡೆದಿದೆ, ಆಗ ಇಬ್ಬರೂ ಪರಸ್ಪರ ಬೈದಾಡಿಕೊಂಡಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಷರೀಫ್ ತನ್ನ ಬಳಿ ಇದ್ದ ಏರ್ ಗನ್ ತೋರಿಸಿ ಗೂಂಡಾಗಿರಿ ಪ್ರದರ್ಶಿಸಿದ್ದಾನೆ.
ಈ ಸಂಬಂಧ ಮಾಳಮಾರುತಿ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಷರೀಫ್ ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಆರಂಭಿಸಿದ್ದು, ಆತನ ಬಳಿ ಇದ್ದ ಏರ್ ಗನ್ ಪರವಾನಿಗಿ ಹೊಂದಿದೆಯೋ ಇಲ್ಲವೋ ಎಂಬ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ