ಬೆಳಗಾವಿ – ಕುಂದಾ ನಗರಿ ಬೆಳಗಾವಿಯ ಜನ ಹೊಸ ವರ್ಷವನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ.ಶನಿವಾರ ಬೆಳಿಗ್ಗೆಯಿಂದಲೇ ಪಾರ್ಟಿ ಶುರು ಮಾಡಿಕೊಂಡಿದ್ದು ಫುಲ್ ಎಂಜಾಯ್ ಮೂಡ್ ನಲ್ಲಿದ್ದಾರೆ
ಬೆಳಗಾವಿ ಕ್ಲಬ್‍ನಲ್ಲಿ ಲೈವ್ ಮ್ಯಜಿಕ್ ಜೊತೆ ರಷಿಯನ್ ಬೆಡಗಿಯರಿಂದ ಬಲ್ಲೆ ಬಲ್ಲೆ ಡ್ಯಾನ್ಸ ನಡೆಯಲಿದೆ.ಜೊತೆಗೆ ನಗರದ ಸಂಕಮ್ ಹೊಟೆಲ್ ಹೊಟೆಲ್ ಕಾಮಿಡಾ,ಆದರ್ಶ ಪ್ಯಾಲೇಸ್.ಶಗುನ್ ಗಾರ್ಡನ್, ಸೋಸಿಯಲ್ ಕ್ಲಬ್ ಸೇರಿದಂತೆ ನಗರದ ವಿವಿಧ ಹೊಟೆಲ್ ಗಳಲ್ಲಿ ವಿಶೇಷ ಪಾರ್ಟಿ ನಡೆಯಲಿದೆ
ನಗರದ ಎಂಎಸೈಲ್ ಸರಾಯಿ ಅಂಗಡಿಗಳ ಎದುರು ದೊಡ್ಡ ಕ್ಯು ಕಾಣಬಹುದಾಗಿದೆ ಗಲ್ಲಿ ಗಲ್ಲಿ ಗಳಲ್ಲಿ ಹಳೇಯ ಮಾನವ ಓಲ್ಡ ಮ್ಯಾನ್ ಗಳನ್ನು ನಿಲ್ಲಿಸಲಾಗಿದೆ ಜೊತೆಗೆ ಡಿಜೆ ಸಿಸ್ಟಮ್‍ಗಳ ತಾಳಕ್ಕೆ ತಕ್ಕಂತೆ ಕುಣಿದು ಹೊಸ ವರ್ಷವನ್ನು ಸ್ವಾಗತಿಸಲು ಯುವಕ ಯುವತಿಯರ ಪಡೆ ರೆಡಿಯಾಗಿದೆ
ರಾತ್ರಿ ಹನ್ನೆರಡರವರೆಗೆ ಕುಂದಾ ನಗರಿ ಡಿಜೆ ಧ್ವನಿಗೆ ಹೆಜ್ಜೆಹಾಕಲಿದ್ದು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನಗರದಲ್ಲಿ ಬಿಗಿ ಪೋಲಿಸ್ ಪಹರೆಯನ್ನು ನಿಯೋಜಿಸಲಾಗಿದೆ ಬಹುತೇಕ ಎಲ್ಲ ಹೊಟೇಲ ಗಳಲ್ಲಿ ಎಲ್ಲ ಟಿಕೇಟ್ ಗಳು ಮಾರಾಟವಾಗಿದ್ದು ಬೆಳಗಾವಿ ಕ್ಲಬ್‍ನ ಟಿಕೆಟ್ ಗಳಿಗೆ ಭಾರೀ ಬೇಡಿಕೆ ಇದೆ
