ಮಹಾಪೂರಿನ ಕಾಟ…ಬೆಳಗಾವಿಯ ಬದುಕಿನ ಜೊತೆ 2019 ಚೆಲ್ಲಾಟ…
ಬೆಳಗಾವಿ- 2019 ಮಳೆಗಾಲ ಕಸಿದುಕೊಂಡಿತು ನದಿ ರೀರದ ಬಡವರ ಉಳಿಗಾಲ
ಮೊದಲು ಬರಿಗಾಲ
ಆಮೇಲೆ ಮಳೆಗಾಲ ಬೆಳಗಾವಿ ಜಿಲ್ಲೆಗೆ ಬಂದಿತ್ತು 2019 ದೊಡ್ಡ ಕೆಡಗಾಲ
ಸರ್ಕಾರ ಮಾಡುತ್ತಿಲ್ಲ ಕಮಾಲ ..ಸಂತ್ರಸ್ತರ ಬದುಕು ಕಂಗಾಲ
2019 ಬೆಳಗಾವಿ ಜಿಲ್ಲೆಯ ಪಾಲಿಗೆ ಕೆಡಗಾಲ..ಕೆಡಗಾಲ
ಮಕ್ಕು
ಬೆಳಗಾವಿ- 2019 ಬೆಳಗಾವಿ ಜಿಲ್ಲೆಯ ನದಿ ತೀರದ ಜನರ ಬದುಕನ್ನೇ ಕಸಿದುಕೊಂಡಿದೆ ಈ ವರುಷ ಜಿಲ್ಲೆಗೆ ಹರುಷ ತರದೇ ಬೆಳಗಾವಿ ಜಿಲ್ಲೆಯ ಜನರ ಬದುಕನ್ನೇ ಕಸಿದುಕೊಂಡು ಸಂತ್ರಸ್ತರನ್ನು ಅತಂತ್ರ ಮಾಡಿ ಹೊಸ ವರುಷಕ್ಕೆ ತಳ್ಳಿದೆ
2019 ಬೆಳಗಾವಿ ಜಿಲ್ಲೆಗೆ ಸಿಹಿ ಕಡಿಮೆ ಕಹಿ ಸಿಕ್ಕಿದ್ದೇ ಜಾಸ್ತಿ,2019 ಮಳೆಗಾಲ ಬೆಳಗಾವಿ ಜಿಲ್ಲೆಯ ನೂರಾರು ಹಳ್ಳಿಗಳನ್ನು ಮುಳುಗಿಸಿ ಸಾವಿರಾರು ಕುಟುಂಬಗಳ ಸೂರು ಕಸಿದುಕೊಂಡು ಲಕ್ಷಕ್ಕೂ ಅಧಿಕ ಜನರನ್ನು ಬೀದಿಗೆ ತಳ್ಳಿದ ವರ್ಷವಾಗಿದೆ
2019 ರ ಈ ದುರಂತದಿಂದ ಸಂತ್ರಸ್ತರಾದವರ ಬದುಕು ಇನ್ನೂ ಅತಂತ್ರವಾಗಿದೆ 2019 ದೂರ ಸರಿದು ಹೊಸ ವರ್ಷ ಬರುತ್ತಿದ್ದರೂ ಸಂತ್ರಸ್ತರು ಇನ್ನುವರೆಗೆ ಸರ್ಕಾರದ ಸಹಾಯದ ನಿರೀಕ್ಷೆಯಲ್ಲೆ ಹೊಸ ವರ್ಷವನ್ನು ಸ್ವಾಗತಿಸುವ ಪರಿಸ್ಥಿತಿ ಎದುರಾಗಿದೆ
2019 ರಲ್ಲಿ ಬೆಳಗಾವಿ ಜಿಲ್ಲೆ ಅನೇಕ ಕಹಿ ಘಟನೆಗಳಿಗೆ ಸಾಕ್ಷಿಯಾಗಿದೆ ಮಗನೊಬ್ಬ ಪಬ್ ಜೀ ಗೇಮ್ ಆಡಲು ಇಂಟರನೆಟ್ ರಿಚಾರ್ಜ ಮಾಡಿಸಲು ದುಡ್ಡು ಕೊಡಲಿಲ್ಲ ಎಂದು ತಂದೆಯನ್ನೇ ಕೊಲೆ ಮಾಡಿದ ಘಟನೆ ನಡೆದಿದ್ದು ಇದೇ ವರ್ಷ
ಸಂತಿ ಬಸ್ತವಾಡ ಗ್ರಾಮದಲ್ಲಿ ತಾಯಿಯೊಬ್ಬಳು ತನ್ನ ಮಗನ ಕೊಲೆ ಮಾಡಿದ ಆರೋಪಿಗಳ ರಕ್ಷಕರನ್ನು ಕೊಲೆ ಮಾಡಲು ಸುಪಾರಿ ಕೊಟ್ಟ ಕಹಿ ಘಟನೆ ನಡೆದಿದ್ದು ಇದೇ ವರ್ಷ
ಹಿಡಕಲ್ ಜಲಾಶಯದಿಂದ ಬೆಳಗಾವಿ ನಗರಕ್ಕೆ ನೀರು ಹರಿಸಿ ಬೆಳಗಾವಿಯ ಭಗೀರಥ ಎನಿಸಿಕೊಂಡಿದ್ದ ಮಾಜಿ ಶಾಸಕ ಸಂಬಾಜಿ ಪಾಟೀಲ ,ಅವರು ಅಗಲಿದ್ದು ಇದೇ ವರ್ಷ
2019 ಬೆಳಗಾವಿ ಜಿಲ್ಲೆಯಲ್ಲಿ ಕೆಲವು ಸಿಹಿ ಘಟನೆಗಳಿಗೆ ಕಾರಣವಾಗಿದೆ , ಬೆಳಗಾವಿಯಲ್ಲಿ ಉಡಾನ್ ಸೇವೆಯ ಪುನರಾರಂಭ, ಬೆಳಗಾವಿಯಿಂದ ,ಬೆಂಗಳೂರು ,ಹೈದ್ರಾಬಾದ ,ಮುಂಬೈಗೆ ವಿಮಾನ ಸಂಪರ್ಕ
ಸಂಸದ ಸುರೇಶ್ ಅಂಗಡಿ ರೈಲು ಮಂತ್ರಿಯಾಗಿ ಬೆಳಗಾವಿ – ಬೆಂಗಳೂರಿಗೆ ವಿಶೇಷ ರೈಲು ಬಿಟ್ಟಿದ್ದು ಇದೇ ವರ್ಷ
2019 ಬೆಳಗಾವಿ ಜಿಲ್ಲೆಗೆ ಸಿಹಿ ನೀಡಿದ್ದು ಕಡಿಮೆ ಕಹಿ ದಕ್ಕಿದ್ದೇ ಜಾಸ್ತಿ…..