Breaking News

ಹಾಸಿಗೆಯಲ್ಲೇ ಹೆಂಡತಿಯನ್ನು ಖಲ್ಲಾಸ್ ಮಾಡಿದ ಕುಡುಕ ಗಂಡ…

ಬೆಳಗಾವಿ: ಕುಡಿದ ನಶೆಯಲ್ಲಿ ಹೆಂಡತಿಯನ್ನೆ ಗಂಡ ಕೊಲೆ ಮಾಡಿರುವ ಘಟನೆ ಬೈಲಹೊಂಗಲ ತಾಲೂಕಿನ ಹಣಬರಹಟ್ಟಿ ಗ್ರಾಮದಲ್ಲಿ ನಡೆದಿದೆ.

ಮಲಗಿದ್ದಾಗಲೇ ಫಕ್ಕೀರವ್ವ ಕಾಕಿ(35) ಕೊಲೆಯಾದ ದುರ್ದೈವಿ. ಯಲ್ಲಪ್ಪ ಕಾಕಿ ಹೆಂಡತಿಯನ್ನು ಕೊಂದ ಪಾಪಿ ಗಂಡ. ಹೆಂಡತಿ ಜೊತೆಗೆ ಜಗಳ ತೆಗೆದು ಸಲಾಕೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ.

ಇಬ್ಬರು ಮಕ್ಕಳ ಎದುರೇ ಹೆಂಡತಿ ಹತ್ಯೆ ಮಾಡಿ ಗಂಡ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಆರೋಪಿಗೆ ಬಲೆ ಬೀಸಿದ್ದಾರೆ. ನೇಸರಗಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Check Also

ವ್ಯಾಪಕ‌ ಮಳೆ: ಜು.27 ರಂದು ಶಾಲಾ-ಕಾಲೇಜು‌ ರಜೆ

ಬೆಳಗಾವಿ, ಜು.26(ಕರ್ನಾಟಕ ವಾರ್ತೆ): ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶನಿವಾರ(ಜುಲೈ 27) ಜಿಲ್ಲೆಯ ರಾಮದುರ್ಗ ತಾಲೂಕು ಹೊರತುಪಡಿಸಿ ಉಳಿದ ಎಲ್ಲ ತಾಲ್ಲೂಕುಗಳ …

Leave a Reply

Your email address will not be published. Required fields are marked *