ಬೆಳಗಾವಿ, ಇಲ್ಲಿನ ಸಂಗಮೇಶ್ವರ ನಗರದ ಶ್ರೀ. ಕಾಮರ್ಸ್ ಮಾರ್ಕೆಟ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್ ಕಚೇರಿ ಕೀಲಿ ತೆಗೆದು ಒಳಗೆ ಲಾಕರ್‌ನಲ್ಲಿಟ್ಟಿದ್ದ 21.18 ಲಕ್ಷ ರೂಪಾಯಿ ಮತ್ತು ಎಸ್ಸೆಸ್ಸೆಲ್ಸಿ ಅಂಕಪಟ್ಟಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಎಪಿಎಂಸಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಯಮನಾಪುರದ ಮಲ್ಲಿಕಜಾನ ಇಮಾಮಹುಸೇನ ಹವಾಲ್ದಾರ (28) , ಖಾನಾಪುರ ತಾಲೂಕಿನ ನಂದಗಡದ ಮೆಹಬೂಬಸುಬಾನಿ ಉರ್ಫ ತೋಹಿದ ಸಲಾವುದ್ದಿನ್ ಸಿಂಗರಗಾಂವ (30), ಉಲ್ಮಾನ ಸಲಾವುದ್ದೀನ ಸಿಂಗರಗಾಂವ (26) ಮತ್ತು ಎಂ.ಕೆ.ಹುಬ್ಬಳ್ಳಿಯ ಶೋಯೆಬ್‌ಅಕ್ತರ್ ಹುಸೇನಸಾಬ ತಾನೇಖಾನ (24) ಬಂಧಿತ ಆರೋಪಿಗಳು. ಕಳ್ಳತನ ಮಾಡಿರುವುದನ್ನು ಆರೋಪಿಗಳು ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ.
ಆೋಪಿಗಳಿಂದ 64.38 ಗ್ರಾಮ ಚಿನ್ನಾಭರಣ, 1 ಗ್ರಾಂ ಬೆಳ್ಳಿ ಆಭರಣ ಹಾಗೂ 1.38 ಲಕ್ಷ ನಗದು ಹಣ,ಕೃತ್ಯಕ್ಕೆ ಬಳಸಿದ ಒಂದು ಮಾರುತಿ ಸುಝಕಿ ಕಾರ, 3 ಬೈಕ್‌ಗಳು ಹೀಗೆ ಒಟ್ಟು 7.56 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.