Breaking News

ಬೆಳಗಾವಿಯಲ್ಲಿ ಬಿರ್ಯಾನಿ ಗಲಾಟೆ ಇಬ್ಬರಿಗೆ ಗಾಯ,ಇಬ್ಬರು ಅರೆಸ್ಟ್…..!!

ಬೆಳಗಾವಿ- ಆತನ ಮಗನ ಬರ್ತಡೇ ಇತ್ತು 200 ಜನರಿಗೆ ಆಗುವಷ್ಟು ಬಿರ್ಯಾನಿ ಆರ್ಡರ್ ಮಾಡಿದ್ದ ರಾತ್ರಿ 8 ಗಂಟೆಗೆ ಬಿರ್ಯಾನಿ ಬರಬೇಕಾಗಿತ್ತು ರಾತ್ರಿ 11-00 ಗಂಟೆಯಾದ್ರೂ ಬಿರ್ಯಾನಿ ಬರಲಿಲ್ಲ ಹೀಗಾಗಿ ಆತ ತನ್ನ ಬಂಟರನ್ನು ಕಳುಹಿಸಿದ ಅವರು ಬಂದ್ರು ಬಿರ್ಯಾನಿ ಲೇಟು ಆಯ್ತು ಅಂತಾ ಈ ಬಂಟರು ಗಲಾಟೆ ಶುರು ಮಾಡಿದ್ರು ಇಬ್ಬರ ಮೇಲೆ ಹಲ್ಲೆ ಮಾಡಿದ್ರು ಗಾಯಗೊಂಡವರು ದವಾಖೆನೆಗೆ ಹೋದ್ರು ಹಲ್ಲೆ ಮಾಡಿದವರು ಜೈಲು ಪಾಲಾದ ಘಟನೆ ಬೆಳಗಾವಿ ಮಹಾನಗರದಲ್ಲಿ ನಡೆದಿದೆ.

ಬೆಳಗಾವಿಯ ಯಮನಾಪೂರದಲ್ಲಿ ಸಚೀನ್ ದಡ್ಡಿ ಎಂಬುವವರ ಬರ್ತ್ ಡೇ ಇತ್ತು. ಅವರ ಮನೆಯವರು ಬೆಳಗಾವಿಯ ಗಾಂಧೀ ನಗರದ ಸಲೀಂ ನದಾಫ್ ಎಂಬುವವರಿಗೆ 200 ಬಿರ್ಯಾನಿ ಆರ್ಡರ್ ಮಾಡಿದ್ರು ಸಮಯಕ್ಕೆ ಸರಿಯಾಗಿ ಬಿರ್ಯಾನಿ ತಲುಪಿಸಲಿಲ್ಲ ಬಿರ್ಯಾನಿ ಯಾಕೆ ಬರಲಿಲ್ಲ ಅಂತಾ ಕೇಳೋಕೆ ಯಮನಾಪೂರ ಹೋಳಿ ಗಲ್ಲಿಯ ಅಮೃತ ವಿಷ್ಣು ಗಸ್ತಿ ಮತ್ತು ಬಾಲರಾಜ್ ಹಳಬರ, ಎಂಬಾತರು ಗಾಂಧೀ ನಗರಕ್ಕೆ ಬಂದಿದ್ದರು ಈ ಸಂಧರ್ಭದಲ್ಲಿ ವಾದ ವಿವಾದ ಆಯ್ತು ಮಾತಿಗೆ ಮಾತು ಬೆಳೆದು ಮಾರಾಮಾರಿ ಆಯ್ತು ಈ ಮಾರಾ ಮಾರಿಯಲ್ಲಿ ಇಬ್ಬರು ಗಾಯಗೊಂಡ್ರು ಬಿರ್ಯಾನಿ ಅಲ್ಲೇ ಉಳೀತು. ಗಾಯಗೊಂಡವರು ಆಸ್ಪತ್ರೆಗೆ ಹೋದ್ರು ಗಲಾಟೆ ಮಾಡಿದ ಯಮನಾಪೂರದ ಇಬ್ಬರು ಯುವಕರು ಅರೆಸ್ಟ್ ಆಗಿ ಜೈಲಿಗೆ ಹೋದ ಅಪರೂಪದ ಘಟನೆ ಬೆಳಗಾವಿಯ ಮಾಳ ಮಾರುತಿ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ಈ ಬಿರ್ಯಾನಿ ಗಲಾಟೆಯಲ್ಲಿ ಮುಸ್ತಾಕ್ ಸಯ್ಯದ ಮತ್ತು ಅಫ್ಜಲ್ ಸಯ್ಯದ ಇಬ್ಬರು ಗಾಯಗೊಂಡಿದ್ದಾರೆ

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *