Breaking News

ಸರ್ಕಾರಿ ಶಾಲೆಯ ವಿಧ್ಯಾರ್ಥಿಗಳ ಪಾಲಕರಿಗೆ ಹೊಸ ರೂಲ್….!!

*4ನೇ ಶನಿವಾರ ಪಾಲಕ ಸಭೆ ಕಡ್ಡಾಯ ಪಾಲಕರ ಸಭೆಯಲ್ಲಿ ಜಿಪಂ ಸಿಇಒ ರಾಹುಲ್ ಶಿಂಧೆ ಸೂಚನೆ*

ಬೆಳಗಾವಿ: ಜಿಲ್ಲೆಯ ಎಲ್ಲ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಪಾಲಕರ ಸಭೆಯನ್ನು ಪ್ರತಿ ತಿಂಗಳ 4ನೇ ಶನಿವಾರ ಕಡ್ಡಾಯವಾಗಿ ನಡೆಸುವಂತೆ ಜಿಪಂ ಸಿಇಒ ರಾಹುಲ್ ಶಿಂಧೆ ಸೂಚಿಸಿದರು.

ಜೂ-22 ಇಲ್ಲಿನ ವಡಗಾವಿಯ ನಗರ ವಲಯದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪಾಲಕರ ಸಭೆಯಲ್ಲಿ ಪಾಲಕರೊಂದಿಗೆ ನಡೆದ ಸಂವಾದದಲ್ಲಿ ಅವರು ಮಾತನಾಡಿದರು.

ಮಕ್ಕಳಿಗೆ ದೈಹಿಕ ದಂಡನೆ ನೀಡದೇ ಪ್ರೀತಿಯಿಂದ ತಿದ್ದಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಪ್ರಯತ್ನಿಸಬೇಕು. ಮಕ್ಕಳ ಸುರಕ್ಷತೆಗಾಗಿ ಶಾಲೆಗಳಲ್ಲಿ ಕಾಂಪೌಂಡ್ ನ ವ್ಯವಸ್ಥೆ ಮಾಡಬೇಕು. ಸಭೆಯಲ್ಲಿ ಪಾಲಕರು ತಿಳಿಸಿದಂತೆ ವಿದ್ಯಾರ್ಥಿನಿಯರಿಗೆ ಆರೋಗ್ಯದ ಸಲುವಾಗಿ ಕಡ್ಡಾಯವಾಗಿ ಜನೌಷಧ ಕೇಂದ್ರದ ಮೂಲಕ ಶುಚಿ ಪ್ಯಾಡ್ ಗಳನ್ನು ಖರೀದಿಸಿ ಶಾಲೆಯಲ್ಲಿ ಇಡಲು ಕ್ರಮಕೈಗೊಳ್ಳಬೇಕು. ಮೊಬೈಲ್ನ್ನು ಸುರಕ್ಷತಾ ಕ್ರಮಗಳು ಅನುಸರಿಸಿ ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ ಬಳಸಬೇಕು. ಎಲ್ಲ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಬೆಂಚ್ ಗಳ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.

ಎಲ್ಲ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುವಂತೆ ಪೋತ್ಸಾಹ ನೀಡಬೇಕು. ಗಡಿ ಕನ್ನಡ ಭವನ ಇನ್ನಿತರ ಸಮುದಾಯ ಭವನಗಳನ್ನು ಸದುಪಯೋಗಪಡಿಸಿಕೊಳ್ಳಿ. ಶಿಷ್ಯ ವೇತನದ ಸಮಸ್ಯೆಗಳಿಗೆ ಪರಿಹಾರ ನೀಡಬೇಕು. ಸರಕಾರದ ಪ್ರೋತ್ಸಾಹಧನ ಯೋಜನೆಗಳನ್ನು ವಿದ್ಯಾರ್ಥಿಗಳಿಗೆ ಗರಿಷ್ಟ ಮಟ್ಟದ ತಲುಪಿಸಿ ಗುಣಮಟ್ಟದ ಶಿಕ್ಷಣ ಪಡೆಯಲು ಅವಕಾಶ ಮಾಡಿಕೊಡಬೇಕು ಎಂದು ನಿರ್ದೇಶನ ನೀಡಿದರು.

ಪಾಲಕರ ಆಶಯದಂತೆ ಅವಶ್ಯಕತೆ ಇರುವ ಶಾಲೆಗಳಲ್ಲಿ ಎನ್ ಸಿಸಿ ಘಟಕ ಸ್ಥಾಪಿಸುವ ನಿಟ್ಟಿನಲ್ಲಿ ಸಂಬಂಧಿಸಿದವರೊಂದಿಗೆ ಸ್ಥಳದಲ್ಲೇ ಸಂಪರ್ಕಿಸಿದ ಜಿಪಂ ಸಿಇಒ ರಾಹುಲ್ ಶಿಂಧೆ ಅವರು ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿದರು.

ಡಿಡಿಪಿಐ ಮೋಹನ್ ಹಂಚಾಟೆ, ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಎಸ್.ಹಿರೇಮಠ, ಕ್ಷೇತ್ರ ಸಮನ್ವಯಾಧಿಕಾರಿ ಐ.ಡಿ.ಹಿರೇಮಠ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆರ್.ಸಿ.ಮುದಕನಗೌಡ ಮತ್ತಿತರರು ಉಪಸ್ಥಿತರಿದ್ದರು.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *