Breaking News

ಜೊಲ್ಲೆ ಸೋತಿದ್ದು ಅಹಂಕಾರದಿಂದ, ಸೊಕ್ಕಿನಿಂದ- ಪ್ರಮೋದ್ ಮುತಾಲಿಕ

ಬೆಳಗಾವಿ-ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ‌ಮೋದಿ ಸೋತಿಲ್ಲ,ಅಲ್ಲಿ ಕಾರ್ಯಕರ್ತರೂ ಸೋತಿಲ್ಲ ಚಿಕ್ಕೋಡಿಯಲ್ಲಿ ಬಿಜೆಪಿಯ ಸೋಲು ಆಗಿಲ್ಲ. ಅಲ್ಲಿ ಅಣ್ಣಾಸಾಹೇಬ ಜೊಲ್ಲೆಯ ಸೊಕ್ಕು, ಅಹಂಕಾರದ ಸೋಲಾಗಿದೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ ಹೇಳಿದ್ದಾರೆ.

ಶನಿವಾರ ಬೆಳಗಾವಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದರು. ಚಿಕ್ಕೋಡಿಯಲ್ಲಿ ಸೋಲು ಕಂಡಿದ್ದು ಅಣ್ಣಾ ಸಾಹೇಬ ಜೊಲ್ಲೆ ಮಾತ್ರ. ಹಿಂದೂಗಳು, ಬಿಜೆಪಿ ಕಾರ್ಯಕರ್ತರು ಸೋತಿಲ್ಲ. ಯಾವುದೇ ರೀತಿಯ ಕಾರ್ಯಕರ್ತರ ಜೊತೆಗೆ ಸಂಪರ್ಕ ಇಲ್ಲದ ವ್ಯಕ್ತಿ. ಕ್ಷೇತ್ರದದಲ್ಲಿ ಏನೇನೂ ಕೆಲಸ ಮಾಡದ ವ್ಯಕ್ತಿ ಅಣ್ಣಾಸಾಹೇಬ ಜೊಲ್ಲೆ. ಕೇವಲ ಬ್ಯಾಂಕ್, ಜಮೀನು, ಪೆಟ್ರೋಲ್ ಬಂಕ್ ಗಳನ್ನು ಬೆಳೆಸಿದರೂ ವಿನಃ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಬಿಜೆಪಿ ಸೋತ್ತಿಲ್ಲ. ಮುಂದಿನ ಬಾರಿ ಶಕ್ತಿ ಮೀರಿ ಗೆಲುವು ಸಾಧಿಸುತ್ತೇವೆ ಎಂದರು

ಹಿಂದೂ ಹೆಣ್ಣುಮಕ್ಕಳ ರಕ್ಷಣೆಗೆ ಸಹಾಯವಾಣಿ

ಲವ್ ಜೀಹಾದ್ ಗೆ ಸಂಬಂಧ ನಾಲ್ಕೈದು ದಿನದಲ್ಲಿ ಐದೂನೂರಕ್ಕೂ ಹೆಚ್ಚು ಕರೆ ಬಂದಿದ್ದಾವೆ. ಅದರಲ್ಲಿ ನೂರಕ್ಕೂ ಹೆಚ್ಚು ವಿದೇಶದಿಂದ ಬೇದರಿಕೆ‌ ಕರೆಗಳು ಬಂದಿದ್ದಾವೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ ಹೇಳಿದರು.
ಸಹಾಯವಾಣಿ ಘೋಷಣೆ ಮಾಡಿದ ಕೂಡಲೇ ವಿದೇಶದಿಂದ ಪಾಕಿಸ್ತಾನ, ಅರಬಸ್ತಾನದಿಂದ ಬಾಂಬ್ ಬೇದರಿಕೆ ಹಾಕಿದ್ದಾರೆ. 70 ಕರೆಗಳು ಮುಸ್ಲಿಂರ ದೌರ್ಜನ್ಯದಿಂದ ಒಳಗಾದ ಸಂತ್ರಸ್ತ ಹಿಂದೂ ಮಹಿಳೆಯರು ಕರೆ ಮಾಡಿ ರಕ್ಷಣೆ ಮಾಡುವಂತೆ ಕೇಳಿದ್ದಾರೆ. ನೇಹಾ ಪ್ರಕರಣವಾದ ಬಳಿಕ ಹುಬ್ಬಳ್ಳಿಯಲ್ಲಿ ಐದು ಘಟನೆಗಳು ನಡೆದವು. ಆದ್ದರಿಂದ ಇದನ್ನು ನಾವು ಇದನ್ನು ಗಂಭೀರವಾಗಿ ಪರಿಗಣಿಸಿ ಹಿಂದೂ ಮಹಿಳೆಯರ ರಕ್ಷಣೆಯಾಗಬೇಕು ಎಂದು ಹುಬ್ಬಳ್ಳಿಯಲ್ಲಿಯೇ ಸಹಾಯವಾಣಿ ಆರಂಭಿಸಿದ್ದೇವೆ ಎಂದರು.
ಹಿಂದೂ ಮಹಿಳೆಯರು ದೈರ್ಯವಾಗಿ ತಿರುಗಾಡಲು ಧಾರವಾಡದಲ್ಲಿ 50 ಮಹಿಳೆಯರಿಹೆ ತ್ರಿಶೂಲ್ ಧೀಕ್ಷೆ ನೀಡಲಾಗಿದೆ. ಮಾನಸಿಕವಾಗಿ ದೈರ್ಯಕೊಡುವುದು ಶ್ರೀರಾಮ ಸೇನೆ ಮಾಡಿದೆ. ಕರ್ನಾಟಕದಲ್ಲಿ ನೂರು ಕಡೆ ತ್ರಿಶೂಲ ಧೀಕ್ಷೆ ಕೊಡುವುದರ ಮೂಲಕ ಹಿಂದೂ ಹುಡುಗಿಯರ ರಕ್ಷಣೆ ಮಾಡುವುದು ನಮ್ಮ ಕೆಲಸವಾಗಿದೆ ಎಂದರು.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಮಾಡಿದ ಆರೋಪಿ ದರ್ಶನ, ಪವಿತ್ರಾಗೌಡ ಹಾಗೂ ಉಳಿದ ಆರೋಪಿಗಳಿಗೆ ಪೊಲೀಸರು ಪೂರಕ ಸಾಕ್ಷಿ ಸಂಗ್ರಹಿಸಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದರು.
ದರ್ಶನನ ಪತ್ನಿ ವಕೀಲರ ಕಡೆ ಹೋಗುವ ಬದಲು ರೇಣುಕಾಸ್ವಾಮಿ ಪತ್ನಿಯ ಮನೆಗೆ ಹೋಗಿ ಆರ್ಥಿಕ ಸಹಾಯ ಮಾಡಲಿ. ಅವರು ಕಣ್ಣೀರಿನಲ್ಲಿ ಕೈ ತೋಳೆಯುತ್ತಿದ್ದಾರೆ ಎಂದರು.
ದರ್ಶನ ಕೊಲೆ ಪ್ರಕರಣದಲ್ಲಿ ಕೆಲ ಸಚಿವರು ರಕ್ಷಣೆ ಮಾಡುತ್ತಿದ್ದಾರೆ. ಪೊಲೀಸರಿಗೆ ಒಂದು ಹೇಳುತ್ತೇನೆ. ನಿಮ್ಮ ಮೇಲೆ ಜನರು ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಯಾರ ಮಾತು ಕೇಳದೆ ದರ್ಶನ ಕೊಲೆ ಪ್ರಕರಣದಲ್ಲಿ ಸೂಕ್ತ ತನಿಖೆ ನಡೆಸಿ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದರು.

Check Also

ಯು.ಟಿ ಖಾದರ್ ಹೊಸ ಇತಿಹಾದ, ಬೆಳಗಾವಿ ಸುವರ್ಣಸೌಧದೊಳಗೆ “ಅನುಭವ ಮಂಟಪ.

ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಸನ್ಮಾನ್ಯ ಶ್ರೀ ಯು. ಟಿ. ಖಾದರ್ ಅವರ ನೇತೃತ್ವದಲ್ಲಿ, ಜನಮಾನಸದಲ್ಲಿ ಸದಾ ಸ್ಮರಣೀಯವಾಗಿ ಉಳಿಯುವ ಮತ್ತೊಂದು …

Leave a Reply

Your email address will not be published. Required fields are marked *