Breaking News

ಮಾಳಮಾರುತಿ ಠಾಣೆ ಪೊಲೀಸ್‌ರಿಂದ ಬೈಕ ಕಳ್ಳನ ಬಂಧನ

ಬೆಳಗಾವಿ-ಇತ್ತೀಚೆಗೆ ನಗರದಲ್ಲಿ ಘಟಿಸುತ್ತಿದ್ದು, ಬೈಕ್ ಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಕಳ್ಳರನ್ನು ಪತ್ತೆ ಮಾಡುವಂತೆ ನಗರದ ಎಲ್ಲ ಪಿಐ ಪಿಎಸ್‌ಐ ರವರಿಗೆ ಸೂಚಿಸಿದಂತೆ ಮಾಳಮಾರುತಿ ಪೊಲೀಸ್ ಠಾಣಾ ಹದ್ದಿಯಲ್ಲಿ ಘಟಿಸಿದ ಬೈಕ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಂಶಯುಕ್ತ ಆರೋಪಿತನಾದ-

ಆರೋಪಿತನಾದ ವಿಠ್ಠಲ ಸದೆಪ್ಪಾ ಆರೇರ (35) ವರ್ಷ ಸಾ॥ ಶೀಗಿಹಳ್ಳಿ ತಾ|| ಬೈಲಹೊಂಗಲಈತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದಾಗ ಅವನು ಬೈಕ್‌ಗಳ ಕದ್ದ ಬಗ್ಗೆ ಒಪ್ಪಿಕೊಂಡಿದ್ದು, ಆತನಿಂದ ಸುಮಾರು 6,00.000/- ರೂ ಕಿಮ್ಮತ್ತಿನ ಒಟ್ಟು 07 (ಯಮಹಾ-1. ಸ್ಟೆಂಡರ್-2, ಸ್ಟೆಂಡರ್ ಪ್ರೋ-2, ಎಚ್‌ಎಫ್ ಡಿಲಕ್ಸ್-1, ಜುಪಿಟರ್-1) ಮೋಟಾರ ಸೈಕಲ್‌ಗಳನ್ನು ವಶಪಡಿಸಿಕೊಂಡು ಆತನ ವಿರುದ್ಧ ಕಾನೂನು ಕ್ರಮ ಜರುಗಿಸಿ, ತನಿಖೆ ಮುಂದುವರೆಸಲಾಗಿದೆ.

. ಸೋಮೇಗೌಡಾ ಜಿ.ಎಂ ಎಸಿಪಿ ಮಾರ್ಕೆಟ ಹಾಗೂ . ಜೆ. ಎಂ. ಕಾಲಿಮಿರ್ಚಿ ಪಿಐ ಮಾಳಮಾರುತಿ ರವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಹೊನ್ನಪ್ಪಾ ತಳವಾರ ಪಿ.ಎಸ್.ಐ (ಕಾ&ಸು), ಶ್ರೀಶೈಲ್ ಹುಳಗೇರಿ ಪಿ.ಎಸ್.ಐ. ಮತ್ತು ಸಿಬ್ಬಂದಿ ಎಮ್.ಜಿ.ಕುರೇರ, ಸಿ.ಜೆ.ಚಿನ್ನಪ್ಪಗೋಳ, ಸಿ.ಐ.ಚಿಗರಿ. ಶ್ರೀ ಕೆ. ಬಿ. ಗೌರಾಣಿ, ಬಿ. ಎಮ್. ಕಲ್ಲಪ್ಪನವರ, ರವಿ ಬಾರಿಕರ, ಶಿವಾಜಿ ಚವ್ಹಾನ, ಮಲ್ಲೀಕಾರ್ಜುನ ಗಾಡವಿ, ತಾಂತ್ರಿಕ ವಿಭಾಗದ ಸಿಬ್ಬಂದಿಯಾದ ರಮೇಶ ಅಕ್ಕಿ, ಮಹಾದೇವ ಕಾಸೀದ ರವರ ತಂಡವನ್ನು . ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಐಪಿಎಸ್. ಪೊಲೀಸ್ ಆಯುಕ್ತರು, ಬೆಳಗಾವಿ ನಗರ ಹಾಗೂ ಡಿಸಿಪಿ ರವರುಗಳು ಪ್ರಶಂಸಿರುತ್ತಾರೆ.

Check Also

ಕೆಎಲ್ಇ ಡಾಕ್ಟರ್ ಗಳಿಗೆ ಯುದ್ಧ ಗೆದ್ದ ಸಂಭ್ರಮ

ಕೆಮ್ಮು ಮತ್ತು ಕಡಿಮೆ ರಕ್ತದೊತ್ತಡದೊಂದಿಗೆ ತೀವ್ರವಾದ ಉಸಿರಾಟದ ತೊಂದರೆ ಅನುಭವಿಸುತ್ತ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ವ್ಯಕ್ತಿಗೆ ಪೆನುಂಬ್ರಾ ಡಿವೈಸ್ ಮೂಲಕ …

Leave a Reply

Your email address will not be published. Required fields are marked *