ಬೆಳಗಾವಿ-ಭೂ ಪರಿವರ್ತನೆ ಮಾಡಿಕೊಡಲು 40 ಸಾವಿರ ಲಂಚ ಪಡೆಯುತ್ತಿರುವಾಗ ಬೆಳಗಾವಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹಾಗು ಗ್ರೇಡ್ 2 ಕಾರ್ಯದರ್ಶಿ ಇಬ್ಬರೂ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.
ಬೆಳಗಾವಿ ತಾಪಂ ಸಿಒ ರಾಮರೆಡ್ಡಿ ಪಾಟೀಲ,ಹಾಗೂ ಗ್ರೇಡ್ 2 ಕಾರ್ಯದರ್ಶಿ ವೈಜನಾಥ ಸನದಿ ಇಬ್ಬರೂ ಲಂಚದ ಹಣದ ಸಮೇತ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದಿದ್ದಾರೆ ಎಂದು ಲೋಕಾಯುಕ್ತ ಎಸ್ಪಿ ಹಣಮಂತರಾಯ ಬೆಳಗಾವಿ ಸುದ್ದಿ ಡಾಟ್ ಕಾಮ್ ಗೆ ತಿಳಿಸಿದ್ದಾರೆ.
ಬೆಳಗಾವಿ ನಗರದ ಕಾಕತಿವೇಸ್ ನಿವಾಸಿ ಶಹಾನವಾಜ್ ಖಾನ್ ಪಠಾಣ ಇವರು ತಮ್ಮ ನಿವೇಶನವನ್ನು ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಲು ಅರ್ಜಿ ಸಲ್ಲಿಸಿದ್ದರು ತಾಪಂ ಅಧಿಕಾರಿಗಳು ಶಹಾನವಾಜ್ ಖಾನ್ ಪಠಾಣ ಅವರನ್ನು ಪದೇ ಪದೇ ಅಲೆದಾಡಿಸುತ್ತಿದ್ದರು ಕೊನೆಗೆ ಶಹಾನವಾಜ್ ಲೋಕಾಯುಕ್ತರಿಗೆ ದೂರು ಕೊಟ್ಟ ಹಿನ್ನಲೆಯಲ್ಲಿ ಅಧಿಕಾರಿಗಳು ಲಂಚ ಸ್ವೀಕರಿಸುತ್ತಿರುವಾಗ ಹಣದ ಸಮೇತ ಅವರನ್ನು ವಶಕ್ಕೆ ಪಡೆದಿದ್ದಾರೆ.